ಅಂಜಾರು: ಜ.06 ರಂದು ಜುಮಾದಿ ಬಂಟ ಪರಿವಾರ ದೈವಗಳ ನೇಮೋತ್ಸವ

ಉಡುಪಿ: ಅಂಜಾರು ಗ್ರಾಮ ಮತ್ತಾವು ‘ಶ್ರೀನಿಧಿ’ ಇಲ್ಲಿ ಜುಮಾದಿ ಬಂಟ ಮತ್ತು ಪರಿವಾರ ದೈವಗಳ, ಹರಿಪ್ರಸಾದ್ ಇವರ ಹರಕೆಯ ನೇಮೋತ್ಸವವು ಜ. 06 ಶುಕ್ರವಾರ ನಡೆಯಲಿದ್ದು ಅಂದು ಬೆಳಿಗ್ಗೆ 8:30 ಕ್ಕೆ ಚಪ್ಪರ ಮುಹೂರ್ತ ಮತ್ತು ಬೆಳಿಗ್ಗೆ 9:00 ಗಂಟೆಗೆ ಭಂಡಾರ ಹೊರಡುವುದು. ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ ರಾತ್ರಿ 8.00 ಗಂಟೆಗೆ ಮೂಲ ಮೈಸಂದಾಯ, ಪಂಜುರ್ಲಿ, ಜುಮಾದಿ ಬಂಟ, ದಾರ್ಂಬಳ್ಳಾತಿ ನೇಮೋತ್ಸವವು ಜರಗಲಿರುವುದು.

ಭಕ್ತರು ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ, ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವಗಳ ಕೃಪೆಗೆ ಪಾತ್ರರಾಗಿ ಬೇಕಾಗಿ ಮುದ್ದು ಪೂಜಾರಿ ಹಾಗೂ ಕುಟುಂಬಸ್ಥರು ತಿಳಿಸಿದ್ದಾರೆ.

ವಿಳಾಸ: ‘ಶ್ರೀನಿಧಿ’ ಮತ್ತಾವು, ಅಂಜಾರು ಗ್ರಾಮ, ಹಿರಿಯಡಕ ಅಂಚೆ- 576113
ಉಡುಪಿ ತಾಲೂಕು/ಜಿಲ್ಲೆ
ಮೊಬೈಲ್: 9860116619, 9972671358