ಕಾರ್ಕಳ: ವೃದ್ಧ ನಾಪತ್ತೆ
ಉಡುಪಿ: ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ನಿವಾಸಿ ರಮೇಶ ಅಲಿಯಾಸ್ ಕುಟ್ಟಿ ಸಫಲಿಗ (70) ಎಂಬ ವೃದ್ಧ ವ್ಯಕ್ತಿಯು ಡಿಸೆಂಬರ್ 27 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 165 ಸೇಂ.ಮೀ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಪೂರ ಶರೀರ ಹೊಂದಿದ್ದು, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಚೇರಿ ದೂ.ಸಂಖ್ಯೆ: 08258-231083, ಮೊ.ನಂ: 9480805435, ಕಾರ್ಕಳ ಗ್ರಾಮಾಂತರ ಠಾಣೆ ದೂ.ಸಂಖ್ಯೆ: 08258-232083, 233100, ಮೊ.ನಂ; 9480805462 […]
ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ
ಮೈಸೂರು: ಮೈಸೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎರಡು ವರ್ಷ ಅವಧಿಯ ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಾತಿಗೆ ಪಿ.ಜಿ.ಸಿ.ಇ.ಟಿ ಬರೆದಿರುವ /ಬರೆಯದ, ಬಿ.ಇ., ಮೆಕ್ಯಾನಿಕಲ್, ಇಂಡಸ್ಟಿçಯಲ್ ಪ್ರೊಡಕ್ಷನ್, ಆಟೋಮೊಬೈಲ್, ಆಟೋಮೇಷನ್ ಮತ್ತು ರೋಬೋಟಿಕ್ಸ್ ಇಂಜಿನಿಯರಿಂಗ್ ಮುಂತಾದವುಗಳಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಫ್ಲಾಟ್ ನಂ. 93 ಮತ್ತು 94, ಬೆಳಗೊಳ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್ ರಸ್ತೆ, ಮೈಸೂರು […]
ತ್ಯಾಜ್ಯ ನಿರ್ವಹಣೆ ಕುರಿತ ಕಿರುಚಿತ್ರ ಸಲ್ಲಿಕೆಗೆ ಅವಕಾಶ
ಉಡುಪಿ: ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಜಿಲ್ಲೆಯಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ ಚಟುವಟಿಕೆ ಅನುಷ್ಠಾನವಾಗುತ್ತಿದ್ದು, ಒಣಕಸ ಹಾಗೂ ಹಸಿಕಸ ನಿರ್ವಹಣೆಯನ್ನು ಮಾಡಲಾಗುತ್ತಿದೆ. ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಲಾ 5 ನಿಮಿಷಗಳ ಅವಧಿಯ 3 ಕಿರುಚಿತ್ರಗಳನ್ನು ತಯಾರಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಕಚೇರಿ ಅಥವಾ ಮೊ.ನಂ: 9964443064 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಸಿ.ಬಿ.ಎಸ್.ಇ 10 ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಗುರುವಾರ 2023 ರ ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿವರವಾದ ಬೋರ್ಡ್ ಶೀಟ್ ಈಗ ಅಧಿಕೃತ ಸಿ.ಬಿ.ಎಸ್.ಇ ವೆಬ್‌ಸೈಟ್‌ನಲ್ಲಿ cbse.gov.in ನಲ್ಲಿ ಲಭ್ಯವಿದೆ. ಅಧಿಕೃತ ಅಧಿಸೂಚನೆಯ ಪ್ರಕಾರ, 10 ನೇ ತರಗತಿಯ ಸಿ.ಬಿ.ಎಸ್.ಇ ಬೋರ್ಡ್ ಪರೀಕ್ಷೆಗಳು 2023 ಫೆಬ್ರವರಿ 15, 2023 ರಿಂದ ಪ್ರಾರಂಭವಾಗುತ್ತವೆ ಮತ್ತು ಮಾರ್ಚ್ 21, 2023 ರಂದು ಮುಕ್ತಾಯಗೊಳ್ಳುತ್ತವೆ. ಹಾಗೆಯೇ, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15, 2023 ಮತ್ತು […]
ಸಾಂತಾಕ್ಲಾಸ್ ವೇಷ ಧರಿಸಿ ಕಾಂತಾರ ಪಂಜುರ್ಲಿ ಆವೇಷದ ಅಣಕು: ಸಾರ್ವಜನಿಕರಿಂದ ಆಕ್ರೋಶ
ಉಡುಪಿ: ಕ್ರಿಸ್ಮಸ್ ಹಿನ್ನಲೆಯಲ್ಲಿ ಸಾಂತಾಕ್ಲಾಸ್ ವೇಷದಲ್ಲಿ ಮನೆಮನೆಗೆ ಭೇಟಿ ನೀಡಿ ಉಡುಗೊರೆಗಳನ್ನು ನೀಡುವುದು ಹಿಂದಿನ ಕಾಲದಿಂದಲೂ ವಾಡಿಕೆ. ಟರ್ಕಿಯ ಸೇಂಟ್ ನಿಕೋಲಸ್ ಎನ್ನುವ ಪಾದ್ರಿಯೊಬ್ಬರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಉಡುಗೊರೆಗಳನ್ನು ನೀಡುತ್ತಿದ್ದು ಅವರ ಹೆಸರು ನೆದರ್ಲ್ಯಾಂಡ್ಸ್ ದೇಶದಲ್ಲಿ ಸಿಂಟರ್ಕ್ಲಾಸ್ ಎಂದು ಅಪಭ್ರಂಶವಾಗಿ ಮುಂದೆ ಅಮೇರಿಕಾ ಮತ್ತು ಯೂರೋಪ್ ಗಳಲ್ಲಿ ಸಾಂಟಾಕ್ಲಾಸ್ ಎಂದು ಕರೆಯಲ್ಪಟ್ಟು ವಿಶ್ವಾದ್ಯಂತ ಪ್ರಸಿದ್ದವಾಯಿತು. ಸೇಂಟ್ ನಿಕೋಲಸ್ ನೆನಪಿಗಾಗಿ ಕ್ರಿಸ್ ಮಸ್ ಹಬ್ಬದಂದು ಸಾಂಟಾಕ್ಲಾಸ್ ವೇಷ ಧರಿಸಿ ಉಡುಗೊರೆ ನೀಡುವುದು ಎಲ್ಲೆಲ್ಲೂ ನಡೆಯುತ್ತಿದೆ. ಆದರೆ ಈ […]