ಶಾರುಖ್ ಖಾನ್ ಪಠಾಣ್ ಗೆ ಸೆನ್ಸರ್ ಸರ್ಜರಿ: ಚಿತ್ರದಲ್ಲಿ ಬದಲಾವಣೆ ಮಾಡಿ ಪರಿಷ್ಕೃತ ಆವೃತ್ತಿ ಸಲ್ಲಿಸಲು ಸಿ.ಬಿ.ಎಫ್.ಸಿ ಸೂಚನೆ

ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಮುಂಬರುವ ಬಿಡುಗಡೆಯ ಸುತ್ತಲಿನ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಅಧ್ಯಕ್ಷ ಪ್ರಸೂನ್ ಜೋಶಿ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದ ಹಾಡುಗಳು ಸೇರಿದಂತೆ “ಸಲಹೆ ಮಾಡಲಾದ ಬದಲಾವಣೆಗಳನ್ನು ಜಾರಿಗೆ ತರಲು” ತಯಾರಕರಿಗೆ ಸಿ.ಬಿ.ಎಫ್.ಸಿ ಪರೀಕ್ಷಾ ಸಮಿತಿ ಸೂಚಿಸಿದೆ ಎಂದು ಸುದ್ದಿ ಸಂಸ್ಥೆ ಪಿ.ಟಿ.ಐ ತಿಳಿಸಿದೆ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಪಠಾಣ್, ಅದರ ಮೊದಲ ಹಾಡು ‘ಬೇಷರಂ ರಂಗ್’ ಬಿಡುಗಡೆಯಾದ ನಂತರ ದೊಡ್ಡ ವಿವಾದವನ್ನು […]

ಕುಂದಾಪುರ: ಜಿಲ್ಲಾ ಇತಿಹಾಸದಲ್ಲೇ ಮೊದಲ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ- ಜಾನ್ಸನ್ ಟ್ರೋಫಿ ಇಂದಿನಿಂದ ಪ್ರಾರಂಭ

ಕುಂದಾಪುರ: ಜಾನ್ಸನ್ ಕ್ರಿಕೆಟರ್ಸ್ ಹಂಗಳೂರು ಇವರ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟ ಜಾನ್ಸನ್ ಟ್ರೋಫಿ ಇಲ್ಲಿನ ಗಾಂಧೀ ಮೈದಾನದಲ್ಲಿ ಶುಕ್ರವಾರ ಸಂಜೆ 7 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಜಾನ್ಸನ್ ಕ್ರಿಕೆಟರ್ಸ್ ಹಂಗಳೂರು ಇದರ ಅಧ್ಯಕ್ಷ ರವೀಂದ್ರ ಹೆಗ್ಡೆ ಹೇಳಿದರು. ಬುಧವಾರ ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿ, ಪಂದ್ಯಾಟದ ಎರಡನೇ ದಿನವಾದ ಡಿ. 30ರ ಶುಕ್ರವಾರ ಸಂಜೆ 7 ಗಂಟೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ […]

ಪ್ರೀತಿಯಲ್ಲಿ ಬಿದ್ದ ರಕ್ಷಿತ್ ಶೆಟ್ಟಿ: ‘ರಿಚರ್ಡ್ ಆಂಟನಿ’ ಚಿತ್ರಕಥೆ ಬರೆಯುತ್ತಿರುವ ಕಿರಿಕ್ ಹುಡುಗನ ಮನದಾಳದ ಮಾತು

ಚಲನ ಚಿತ್ರಗಳೆಂದರೆ ಹೀಗೇ ಇರಬೇಕು ಎನ್ನುವ ಸಿದ್ದ ಸೂತ್ರಗಳನ್ನು ಬದಿಗಿಟ್ಟು, ತಮ್ಮದೇ ಹಾದಿಯಲ್ಲಿ ನಡೆದು ಚಲನಚಿತ್ರವೆಂದರೆ ಚಲನಶೀಲ ಜಗತ್ತು, ಸಿದ್ಧ ಸೂತ್ರಗಳನ್ನು ನೆಚ್ಚಿಕೊಂಡು ಕೂರುತ್ತಲೆ ಇರಬೇಕೆಂದಿಲ್ಲ. ಬದಲಾವಣೆ ಜಗದ ನಿಯಮ ಮತ್ತು ಬದಲಾವಣೆಗಳು ಒಳ್ಳೆಯದಾಗಿದ್ದರೆ ಜನ ಅದನ್ನು ಒಪ್ಪಿಕೊಳ್ಳುತ್ತಾರೆ ಎಂದು ತೋರಿಸಿಕೊಟ್ಟವರು ಹಲವರಿದ್ದಾರೆ. ಕನ್ನಡ ಚಿತ್ರರಂಗವೂ ಈ ಬದಲಾವಣೆಗಳನ್ನು ಹಲವು ಬಾರಿ ಕಂಡಿದೆ. ಶಂಕರ್ ನಾಗ್, ರವಿಚಂದ್ರನ್, ಕಿಚ್ಚ ಸುದೀಪ್ ಮುಂತಾದವರು ಸಿದ್ದ ಸೂತ್ರಗಳನ್ನು ಬದಿಗಿಟ್ಟು ತಮ್ಮದೇ ಹಾದಿಯಲ್ಲಿ ನಡೆದು ಯಶಸ್ಸು ಕಂಡವರು. ಇದೀಗ ಅವರ ಹಾದಿಯಲ್ಲಿ […]

ಉಡುಪಿ: ಹೊಸ ವರ್ಷಾಚರಣೆಗೆ ಕಡ್ಡಾಯ ನಿಯಮ; ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಮಾರ್ಗಸೂಚಿ

ಉಡುಪಿ: ಇನ್ನೇನು 2022 ಕ್ಕೆ ವಿದಾಯ ಹೇಳಲಿದ್ದು, 2023 ನೇ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಬೇಕೆಂದಿದ್ದ ಜನರಿಗೆ ಕೋವಿಡ್ ಮತ್ತೊಮ್ಮೆ ಆಘಾತವನ್ನುಂಟು ಮಾಡಿದೆ. ಜಗತ್ತಿನಾದ್ಯಂತ ಕೋವಿಡ್ ಬಗ್ಗೆ ಹೆಚ್ಚಿರುವ ಆತಂಕದಿಂದಾಗಿ ಭಾರತದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ವರ್ಷಾಚರಣೆಯ ಸಂಭ್ರಮಗಳನ್ನು ಜನವರಿ ಮಧ್ಯರಾತ್ರಿ 1 ಗಂಟೆಯೊಳಗೆ ಮುಕ್ತಾಯಗೊಳಿಸುವಂತೆ ರಾಜ್ಯ ಸರ್ಕಾರವು ಈಗಾಗಲೇ ಸೂಚನೆ ನೀಡಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿಯೂ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇಲಾಖೆಯಿಂದ ಸಾರ್ವಜನಿಕರಿಗೆ ಮಾರ್ಗಸೂಚಿಗಳು: ಹೊಸ ವರ್ಷದ ಸಂಭ್ರಮಾಚರಣೆಗಳನ್ನು ಜನವರಿ 1 ರ ಮಧ್ಯರಾತ್ರಿಯೊಳಗೆ ಮುಕ್ತಾಯಗೊಳಿಸಬೇಕು. […]

ಮಲ್ಪೆ: ರೆಡ್ ಕ್ರಾಸ್ ವತಿಯಿಂದ ಬೀಚ್ ಸ್ವಚ್ಛತಾ ಅಭಿಯಾನ

ಮಲ್ಪೆ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಹಾಗೂ ಮಲ್ಪೆ ಕರಾವಳಿ ಕಾವಲು ಪೋಲಿಸ್ ಠಾಣೆ ಇವರ ಸಹಯೋಗದೊಂದಿಗೆ 6 ದಿನಗಳ ಪ್ಲಾಸ್ಟಿಕ್ ಮುಕ್ತ ಕಡಲ ಕಿನಾರೆ ಕಾರ್ಯಕ್ರಮದ ಅಂಗವಾಗಿ ಬುಧವಾರ ಮಲ್ಪೆ ಕೊಳ ಬೀಚ್‌ನಿಂದ ಸೀವಾಕ್ ವರೆಗೆ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಮಾರ್ಗದರ್ಶನದಲ್ಲಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ಅಬ್ದುಲ್ ಅಹದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ಲಾಸ್ಟಿಕ್‌ನಂತಹ ವಸ್ತುಗಳ […]