ನವೀನತೆಯನ್ನು ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳದ್ದಾಗಿರಬೇಕು: ಎ.ಎಸ್.ಎನ್ ಹೆಬ್ಬಾರ್

ಕಾರ್ಕಳ: ವಿದ್ಯಾರ್ಥಿ ಜೀವನ ಕಾಲೇಜಿನಲ್ಲೆ ಮುಗಿಯುವುದಿಲ್ಲ ಬದಲಿಗೆ ಜೀವನದುದ್ದಕ್ಕೂ ನಡೆಯುವಂತದ್ದು. ಹೊಸತನ್ನು ಸ್ವಾಗತಿಸುವ ಮನೋಭಾವ ಇರಬೇಕು. ಕಣ್ಣು–ಕಿವಿಗಳಿಗೆ ಸದಾ ಕಾತುರತೆ ಇರಬೇಕು. ನವೀನತೆಯನ್ನು ಸ್ವೀಕರಿಸುವ ಮನೋಭಾವ ಚೈತನ್ಯವಾಗಿ ಜೀವಂತವಾಗಿದ್ದಾಗ ವ್ಯಕ್ತಿಯು ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಅಭಿಪ್ರಾಯಪಟ್ಟರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನ ಸಂಭ್ರಮ-2022 ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೈದ್ಯರು ಹಾಗೂ ವಕೀಲರ ವೃತ್ತಿಗೆ ನಿವೃತ್ತಿ ಎಂಬುದಿಲ್ಲ. ಕಾಲಕಾಲಕ್ಕೆ ಕಾನೂನು- ಕಾಯಿದೆಗಳು ಬದಲಾಗುತ್ತಿರುತ್ತದೆ. ಹೊಸ-ಹೊಸ ರೋಗಗಳು ಉಲ್ಬಣಿಸಿದಂತೆ […]

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ

ಡಿ.22 ರಂದು ಉತ್ತರಾಯಣವು ಆರಂಭವಾಗಿದ್ದು, ದೇಶದ ಹಲವು ರಾಜ್ಯಗಳು ಚಳಿಗಾಲವನ್ನು ಎದುರಿಸಲು ಸಜ್ಜಾಗುತ್ತಿವೆ. ಚಳಿಗಾಲದಲ್ಲಿ ಚರ್ಮ, ಕೂದಲು ಮತ್ತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯ. ಮಾತ್ರವಲ್ಲದೆ, ವಿಶ್ವದಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳು ಬರುತ್ತಿದ್ದು, ಭಾರತವೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರವನ್ನು ದಿನನಿತ್ಯದ ಆಹಾರಪದ್ದತಿಯಲ್ಲಿ ಅಳವಡಿಸಿಕೊಳ್ಳುವುದು ಕ್ಷೇಮ. ಚಳಿಗಾಲದಲ್ಲಿ ಸೇವಿಸಬಹುದಾದ ಆಹಾರಗಳು ಬೆಲ್ಲ ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದ ಭಾಗವಾಗಿಸುವುದು ಉಪಯುಕ್ತ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, […]

ಕಳತ್ತೂರು: ವಿಶ್ವ ಬಂಟರ ಪ್ರತಿಷ್ಠಾನ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಬಂಟ ಮಹಿಳೆಯರಿಗೆ ಮನೆ ನಿರ್ಮಾಣ

ಕಳತ್ತೂರು: ಆಲ್ ಕಾರ್ಗೋ ಲಾಜಿಸ್ಟಿಕ್ ಸಂಸ್ಥೆಯ ಆಡಳಿತ ನಿರ್ದೇಶಕ ಶಶಿಕಿರಣ್ ಶೆಟ್ಟಿ ಇವರು ಮಂಗಳೂರಿನ ಉದ್ಯಮಿ ಎ.ಜೆ.ಶೆಟ್ಟಿ ಅಧ್ಯಕ್ಷತೆಯ ವಿಶ್ವ ಬಂಟರ ಪ್ರತಿಷ್ಠಾನಕ್ಕೆ 8 ಲಕ್ಷ ರೂ ಆರ್ಥಿಕ ಸಹಾಯ ನೀಡಿದ್ದು, ಆ ಮೂಲಕ ಆರ್ಥಿಕವಾಗಿ ಹಿಂದುಳಿದ ಬಂಟ ಮಹಿಳೆಯರಿಗೆ ಮನೆ ನಿರ್ಮಿಸಿಕೊಡಲಾಗಿದೆ. ಒಟ್ಟು 17 ಮನೆ ನಿರ್ಮಾಣಗೊಂಡಿದ್ದು ಅದರಲ್ಲಿ ಕಾಸರಗೋಡಿನಲ್ಲಿ 7, ಮಂಗಳೂರಿನಲ್ಲಿ 5, ಕುಂದಾಪುರದಲ್ಲಿ 1 ಹಾಗೂ ಕಾಪು ತಾಲೂಕಿನ ಕಳತ್ತೂರು ಗ್ರಾಮದಲ್ಲಿ 4 ಮನೆಗಳನ್ನು ನಿರ್ಮಿಸಲಾಗಿದೆ. ಮಂಗಳೂರಿನಲ್ಲಿ ನಡೆದ ವಿಶ್ವ ಬಂಟರ ಪ್ರತಿಷ್ಠಾನ […]

ಅಬುದಾಭಿಯ ರೂವಿಸ್ ನಗರದಲ್ಲಿ ಪುತ್ತಿಗೆ ಶ್ರೀಪಾದರಿಗೆ ಭವ್ಯ ಸ್ವಾಗತ

ಅಬುದಾಭಿ: ಪರ್ಯಾಯ ಸಂಚಾರ ನಿಮಿತ್ತ ರೂವಿಸ್ ನಗರಕ್ಕೆ ಆಗಮಿಸಿದ ಪೂಜ್ಯ ಪುತ್ತಿಗೆ ಶ್ರೀಪಾದರಿಗೆ ಭವ್ಯ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ನೆರೆದಿದ್ದ ಭಕ್ತರಿಗೆ ಭಗವದ್ಗೀತಾ ಲೇಖನ ದೀಕ್ಷಾ ಪ್ರದಾನ ಮಾಡಲಾಯಿತು. ಉಡುಪಿಯ ಬ್ರಹ್ಮಾವರದ ಅಮ್ಮುಂಜೆ ಉದಯ ನಾಯಕ್ ರಿಂದ ಮೊದಲ ದೀಕ್ಷಾ ಸ್ವೀಕಾರ ನಡೆಯಿತು. ಬಳಿಕ ಶ್ರೀಗಳಿಗೆ ಗೌರವಾರ್ಪಣೆ ಮಾಡಲಾಯಿತು. ರೂವಿಸ್ ನಗರ ಅಬುದಾಭಿಯ ಪಕ್ಕದ ನಗರವಾಗಿದ್ದು ಸೌದಿದೇಶದ ಗಡಿಯಲ್ಲಿದೆ. ಸಾವಿರಾರು ಮಂದಿ ಭಾರತೀಯರು ಇಲ್ಲಿ ನೆಲೆಸಿದ್ದು, ಉಡುಪಿಯ ಶ್ರೀಪುತ್ತಿಗೆ ಶ್ರೀಗಳ ಆಗಮನದಿಂದ ಉತ್ಸವದ ವಾತಾವರಣ ನಿರ್ಮಾಣಗೊಂಡಿತ್ತು.  

ಮಹಿಳೆಯರ ಉನ್ನತ ಶಿಕ್ಷಣ ನಿಷೇಧಿಸಿದ ತಾಲಿಬಾನ್: ಪರೀಕ್ಷೆ ಬಹಿಷ್ಕರಿಸಿ ಒಗ್ಗಟ್ಟು ಪ್ರದರ್ಶಿಸಿದ ವಿದ್ಯಾರ್ಥಿಗಳು

ಕಾಬುಲ್: ಅಫ್ಘಾನಿಸ್ತಾನದ ನಂಗರ್‌ಹಾರ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ತಾಲಿಬಾನ್‌ ಸರ್ಕಾರದ ಮಹಿಳೆಯರ ಶಿಕ್ಷಣ ನಿಷೇಧ ನಿರ್ಧಾರದ ವಿರುದ್ದ ಪ್ರತಿಭಟಿಸಿದ್ದಾರೆ. ವಿದ್ಯಾರ್ಥಿನಿಯರ ಜೊತೆ ಒಗ್ಗಟ್ಟಿನ ಪ್ರದರ್ಶನದಲ್ಲಿ ತಮ್ಮ ಪರೀಕ್ಷೆಗಳನ್ನು ಬಹಿಷ್ಕರಿಸಿ ತರಗತಿಗಳಿಂದ ಹೊರನಡೆದಿದ್ದಾರೆ. ನಂಗರ್‌ಹಾರ್ ಮತ್ತು ಕಂದಹಾರ್‌ನಲ್ಲಿ ವಿದ್ಯಾರ್ಥಿಗಳು ತಾಲಿಬಾನ್ ಆದೇಶದ ವಿರುದ್ಧ ಫಲಕಗಳನ್ನು ಪ್ರದರ್ಶಿಸಿದ್ದಾರೆ. ತಾಲಿಬಾನ್‌ನ ಉನ್ನತ ಶಿಕ್ಷಣ ಸಚಿವಾಲಯವು ಮಹಿಳಾ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಮೇಲಿನ ಇತ್ತೀಚಿನ ದಬ್ಬಾಳಿಕೆಯಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾಲಯ ಶಿಕ್ಷಣದ ಮೇಲೆ ಅನಿರ್ದಿಷ್ಟಾವಧಿಯ ನಿಷೇಧವನ್ನು ಆದೇಶಿಸಿದ್ದು, ಇದು ಅಂತರರಾಷ್ಟ್ರೀಯ ಖಂಡನೆಗೆ ಕಾರಣವಾಗಿದೆ. Male […]