ಐ.ಎಮ್.ಡಿ.ಬಿ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯಲ್ಲಿ ಮೂರು ಕನ್ನಡದ ಚಿತ್ರಗಳು: ಚಾರ್ಲಿ777, ಕಾಂತಾರ, ಕೆ.ಜಿ.ಎಫ್ ಚಾಪ್ಟರ್-2
2022 ರ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಐ.ಎಮ್.ಡಿ.ಬಿ ಪ್ರಸ್ತುತಪಡಿಸಿದೆ. ಇಂಟರ್ನೆಟ್ ಚಲನಚಿತ್ರ ಡೇಟಾಬೇಸ್ ಪ್ರಕಾರ ಜನವರಿ 1 ಮತ್ತು ನವೆಂಬರ್ 7, 2022 ರ ನಡುವೆ ಭಾರತದಲ್ಲಿ ಥಿಯೇಟರ್ ಗಳಲ್ಲಿ ಅಥವಾ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾದ ಎಲ್ಲಾ ಚಲನಚಿತ್ರಗಳ ಪೈಕಿ ಕನಿಷ್ಠ 25,000 ಮತಗಳೊಂದಿಗೆ ಸರಾಸರಿ 7 ಅಥವಾ ಹೆಚ್ಚಿನ ಐ.ಎಮ್.ಡಿ.ಬಿ ಬಳಕೆದಾರರ ರೇಟಿಂಗ್ ಅನ್ನು ಹೊಂದಿರುವ ಚಿತ್ರಗಳಲ್ಲಿ 10 ಚಲನಚಿತ್ರಗಳು ಜನಪ್ರಿಯತೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿವೆ. ಈ 10 ಚಿತ್ರಗಳ ಪೈಕಿ […]
ಮ್ಯಾನ್ಯುಯಲ್ ಸ್ಕ್ಯಾಂವೆಜರ್ಸ್ ಜಾಗೃತ ಸಮಿತಿ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ
ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮ್ಯಾನ್ಯುಯಲ್ ಸ್ಕ್ಯಾಂವೆಜರ್ಸ್ ನೇಮಕಾತಿ, ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮದಡಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಜಾಗೃತ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗೆ 4 ಜನ ಸಾಮಾಜಿಕ ಕಾರ್ಯಕರ್ತರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಲು, ಮ್ಯಾನ್ಯುಯಲ್ ಸ್ಕ್ಯಾಂವೆಜರ್ಸ್ ಪುನರ್ವಸತಿಗಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳಿಗೆ ಸೇರಿದ, ಸಮುದಾಯವನ್ನು ಪ್ರತಿನಿಧಿಸುವ ಹಾಗೂ ಜಿಲ್ಲೆಯಲ್ಲಿ ವಾಸವಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ರಜತಾದ್ರಿ, […]
ರೈಲಿನಲ್ಲಿ ಪ್ರಯಾಣಿಸುವಾಗ ಲಗೇಜ್ ಕಳೆದು ಹೋದಾಗ ಅಥವಾ ಕಳುವಾದಾಗ ನೀವು ಮಾಡಬೇಕಿರುವುದೇನು ಎಂದು ತಿಳಿಯಿರಿ
ಚಾಲನೆಯಲ್ಲಿರುವ ರೈಲಿನಿಂದ ಅಥವಾ ರೈಲ್ವೇ ನಿಲ್ದಾಣದಲ್ಲಿ ನಿಮ್ಮ ಲಗೇಜ್ ಕಳ್ಳತನವಾದರೆ, ಪರಿಹಾರವನ್ನು ಪಡೆಯಲು ಪ್ರಯಾಣಿಕರು ಅನುಸರಿಸಬೇಕಾದ ನಿಯಮಗಳನ್ನು ಇಲಾಖೆ ತಿಳಿಸಿದೆ. ನಿಯಮದ ಪ್ರಕಾರ, ಕಳೆದುಹೋದ ಲಗೇಜ್‌ನ ಮೌಲ್ಯವನ್ನು ನಿರ್ಧರಿಸಿದ ನಂತರ ಕದ್ದ ಲಗೇಜ್‌ಗಳಿಗೆ ಪ್ರಯಾಣಿಕರಿಗೆ ಪರಿಹಾರ ನೀಡಲು ಭಾರತೀಯ ರೈಲ್ವೇ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ರೈಲಿನಲ್ಲಿ ಪ್ರಯಾಣಿಸುವಾಗ ನಿಮ್ಮ ಲಗೇಜ್ ಕಳೆದುಹೋದರೆ/ಕಳುವಾದರೆ, ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, ನೀವು ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ದೂರು ಸಲ್ಲಿಸಬಹುದು. ಇದಾದ ನಂತರವೂ ವಿಚಾರಣೆ […]
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ: ಎ ದರ್ಜೆ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಉಡುಪಿ: ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ಕಿರಿಯ ಗುಮಾಸ್ತ, ಕಿರಿಯ ಸಹಾಯಕ ಕಾರ್ಯದರ್ಶಿ, ದತ್ತಾಂಶ ನಮೂದಕ ಕಾರ್ಯನಿರ್ವಾಹಕ ಹಾಗೂ ದತ್ತಾಂಶ ನಮೂದಕ ಕಾರ್ಯನಿರ್ವಾಹಕ ಎ ದರ್ಜೆ ಹುದ್ದೆಗಳ ನೇಮಕಾತಿಗೆ ವೆಬ್‌ಸೈಟ್ www.ssckkr.kar.nic.in ಮತ್ತು https://ssc.nic.in ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ 12 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ, 18 ರಿಂದ 27 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 2023 ಜನವರಿ 4 ಕೊನೆಯ […]
ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ನೊಂದ ವ್ಯಕ್ತಿ ನೇಣಿಗೆ ಶರಣು
ಹಿರಿಯಡ್ಕ: ಇಲ್ಲಿನ ಬೊಮ್ಮರಬೆಟ್ಟು ಗ್ರಾಮದ ಕೊಲ್ಯಾರುವಿನಲ್ಲಿ ಡಿ. 9ರಂದು ವ್ಯಕ್ತಿಯೊಬ್ಬರ ಮನೆ ಕೊಟ್ಟಿಗೆಗೆ ಬೆಂಕಿ ಬಿದ್ದದ್ದರಿಂದ ಮನನೊಂದು ಆತ್ಯಹತ್ಯೆಗೆ ಶರಣಾದ ಘಟನೆ ನಡೆದಿದೆ. ಕೊಲ್ಯಾರುವಿನ 59 ವರ್ಷದ ಶಾಂತೇಶ್ ಶೆಟ್ಟಿ ಮೃತರಾದವರು. ಇವರ ಮನೆಯ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಹೋಗಿತ್ತು. ಕೊಟ್ಟಿಗೆಯಲ್ಲಿದ್ದ ತೆಂಗಿನಕಾಯಿ ಮತ್ತು ಬೈಹುಲ್ಲು ಅಗ್ನಿಗಾಹುತಿಯಾಗಿದ್ದವು. ಇದರಿಂದ ಮಾನಸಿಕವಾಗಿ ಖಿನ್ನನಾದ ಶಾಂತೇಶ್ ಡಿ.11 ರ ರಾತ್ರಿ 10 ಗಂಟೆಯಿಂದ ಡಿ.12 ರ ಬೆಳಗ್ಗಿನ ಜಾವದ ಒಳಗೆ ಮನೆಯ ಹಿಂದಿದ್ದ ಹಲಸಿನ ಮರದ […]