ವಿಶ್ವಪ್ರಭಾ ಪುರಸ್ಕಾರಕ್ಕೆ ಆಯ್ಕೆಯಾದ ಸಾಹಿತಿ ಸಂಧ್ಯಾ ಪೈ
ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಪ್ರಭಾವತಿ ಶೆಣೈ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ವಿಶ್ವಪ್ರಭಾ ಪುರಸ್ಕಾರ-೨೦೨೩ ಗೆ ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಾಹಿತಿ ಸಂಧ್ಯಾ ಪೈ ಆಯ್ಕೆಯಾಗಿದ್ದಾರೆ. ಪುರಸ್ಕಾರವು ಪ್ರಶಸ್ತಿ ಪತ್ರ, ಫಲಕ ಹಾಗೂ 1 ಲಕ್ಷ ರೂ ನಗದು ಹೊಂದಿದೆ. ಮುಂದಿನ ವರ್ಷ ಜನವರ ತಿಂಗಳಿನಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ಪ್ರಯುಕ್ತ ಕಾರ್ಕಳ ಯಕ್ಷ ರಂಗಾಯಣದ ಕಲಾವಿದರಿಂದ ಶಶಿರಾಜ್ ಕಾವೂರು […]
ಡಿ.14 ರಂದು ಜನತಾ ಸ್ವತಂತ್ರ ಪ.ಪೂ ಕಾಲೇಜಿನಲ್ಲಿ ಜನತಾ ಆವಿಷ್ಕಾರ್-2022 ಸ್ಪರ್ಧೆ
ಕುಂದಾಪುರ: ಇಲ್ಲಿನ ಹೆಮ್ಮಾಡಿಯಲ್ಲಿರುವ ಜನತಾ ಸ್ವತಂತ್ರ ಪ.ಪೂ ಕಾಲೇಜಿನಲ್ಲಿ ಶ್ರೀ ವಿವಿವಿ ಮಂಡಳಿ ಹೆಮ್ಮಾಡಿ ಹಾಗೂ ಸಮರ್ಪಣ ಶೈಕ್ಷಣಿಕ ಟ್ರಸ್ಟ್ ಸಯೋಗದೊಂದಿಗೆ ಜನತಾ ಆವಿಷ್ಕಾರ್-2022 ಸ್ಪರ್ಧೆಯನ್ನು ಡಿ.14 ರಂದು ಬೆಳಗ್ಗೆ 9 ಆಯೋಜಿಸಲಾಗಿದ್ದು, ವ್ಯಾಪಾರ ಮಳಿಗೆ ವಿಜ್ಞಾನ ಮಾದರಿ ಮತ್ತು ಸಾಂಸ್ಕೃತಿಕ ಸಂಭ್ರಮ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮರ್ಪಣ ಶೈಕ್ಷಣಿಕ ಟ್ರಸ್ಟ್ ನ ಅಧ್ಯಕ್ಷ ಗಣೇಶ್ ಮೊಗವೀರ್ ಇವರು ವಹಿಸಲಿದ್ದು, ಮುಖ್ಯ ಅತಿಥಿ ಮತ್ತು ಉದ್ಘಾಟಕರಾಗಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಭಾಗವಹಿಸಲಿದ್ದಾರೆ. ವಿಶೇಷ […]
ಹಿಮಾಚಲ ಪ್ರದೇಶ ಮತ್ತು ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ: ರಮೇಶ್ ಕಾಂಚನ್
ಉಡುಪಿ: ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರವನ್ನು ಉಳಿಸಿಕೊಂಡಿರುವುದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದೇ ಹೊತ್ತಿನಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬಂದಿದೆ. ದೇಶದ ರಾಜಧಾನಿಯಾಗಿರುವ ದೆಹಲಿಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಒಂದು ರಾಜ್ಯದಲ್ಲಿ ಗೆದ್ದಿರುವುದನ್ನೇ ಸಂಭ್ರಮಿಸಿ ಎರಡು ಕಡೆ ಸೋತಿರುವುದನ್ನು ಮರೆಮಾಚಲಾಗುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳುತ್ತಿದ್ದ ಬಿಜೆಪಿಗೆ ಇತ್ತೀಚೆಗೆ ನಡೆದ ಹಲವು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಅಸಾಧ್ಯ […]
ಗುಜರಾತ್ ಚುನಾವಣಾ ಫಲಿತಾಂಶ ರಾಜ್ಯ ಚುನಾವಣೆಯ ದಿಕ್ಸೂಚಿ: ನಯನಾ ಗಣೇಶ್, ವೀಣಾ ಶೆಟ್ಟಿ
ಉಡುಪಿ: ಗುಜರಾತ್ ಬಿಜೆಪಿ ಜಯಭೇರಿ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಹೇಳಿದ್ದಾರೆ. ಗುಜರಾತ್ ನಲ್ಲಿ 7ನೇ ಬಾರಿ ಅತೀ ಹೆಚ್ಚು ಸ್ಥಾನ ಗಳಿಸುವ ಮೂಲಕ ದಾಖಲೆ ನಿರ್ಮಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಯಶಸ್ವಿ ಆಡಳಿತ, ಅಭಿವೃದ್ಧಿ ಪರ ಚಿಂತನೆಗೆ ಮತದಾರರ ಒಲವು ವ್ಯಕ್ತವಾಗಿದೆ. ಗುಜರಾತ್ ರಾಷ್ಟ್ರಕ್ಕೆ ಒಂದು ಮಾದರಿ ರಾಜ್ಯವಾಗಿ ರೂಪುಗೊಂಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದಿಂದ ಗೆಲುವು ಸಾಧಿಸಿದ್ದು ಈ ಫಲಿತಾಂಶ ಮುಂದಿನ ರಾಜ್ಯ […]
ಅಮೆರಿಕಾದ ಫೀನಿಕ್ಸ್ ನಲ್ಲಿರುವ ಶ್ರೀ ವೆಂಕಟೇಶ್ವರನಿಗೆ ವಜ್ರಖಚಿತ ಸ್ವರ್ಣಮಯ ಕಿರೀಟ ಸಮರ್ಪಣೆ
ಉಡುಪಿ: ಪೂಜ್ಯ ಪುತ್ತಿಗೆ ಶ್ರೀಪಾದರು ಅಮೆರಿಕಾದ ಫೀನಿಕ್ಸ್ ನಗರದಲ್ಲಿ ಸ್ಥಾಪಿಸಿದ ಪ್ರಥಮ ದೇವಾಲಯದಲ್ಲಿ ಪೂಜೆಗೊಳ್ಳುವ ಶ್ರೀ ವೆಂಕಟೇಶ್ವರ ದೇವರಿಗೆ ಅಲ್ಲಿಯ ಭಕ್ತರಾದ ಶ್ರೀಮತಿ ಅನಿಲಾ ದಂಪತಿಗಳು 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರಖಚಿತ ಸ್ವರ್ಣಮಯ ಕಿರೀಟವನ್ನು ಶ್ರೀ ಪುತ್ತಿಗೆ ಶ್ರೀಪಾದರಿಗೆ ಗುರುವಾರ ಅರ್ಪಿಸಿದರು. ಶ್ರೀ ವೆಂಕಟೇಶ್ವರನ ಅನುಗ್ರಹದಿಂದ ಕಿರೀಟ ಅರ್ಪಿಸಿದ ಕುಟುಂಬಕ್ಕೂ, ಲೋಕಕ್ಕೂ ಕಲ್ಯಾಣವಾಗಲಿ ಎಂದು ಶ್ರೀಪಾದರು ಹಾರೈಸಿದರು. ಈ ಅಮೂಲ್ಯ ಮತ್ತು ದುಬಾರಿ ಕಿರೀಟ ಜನವರಿ1 ರಂದು ಶ್ರೀ ವೆಂಕಟೇಶನ ಮುಕುಟವನ್ನಲಂಕರಿಸಲಿದೆ. ಪ್ರಧಾನ ಅರ್ಚಕರಾದ […]