ಮಂಗಳೂರಿನ ಕಾಲೇಜಿನಲ್ಲಿ ಬುರ್ಖಾ ಧರಿಸಿ ನೃತ್ಯ: ನಾಲ್ಕು ವಿದ್ಯಾರ್ಥಿಗಳ ಅಮಾನತು
ಮಂಗಳೂರು: ಇಲ್ಲಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ನಾಲ್ಕು ವಿದ್ಯಾರ್ಥಿಗಳು ಹಿಂದಿ ಸಿನಿಮಾದ ಹಾಡೊಂದಕ್ಕೆ ಬುರ್ಖಾ ಧರಿಸಿ ನೃತ್ಯ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ನಾಲ್ಕು ವಿದ್ಯಾರ್ಥಿಗಳು ಬುರ್ಖಾ ಧರಿಸಿ ನೃತ್ಯ ಮಾಡುವ ವೀಡಿಯೋ ಬಗ್ಗೆ ವಿವಾದವೆದ್ದ ಕೂಡಲೆ ಕಾಲೇಜಿನ ಆಡಳಿತ ಮಂಡಳಿ ನಾಲ್ಕೂ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ. ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಆಡಳಿತ ಮಂಡಳಿಯು ಟ್ವೀಟ್ ಮಾಡಿ, ವೀಡಿಯೋದಲ್ಲಿ ಬುರ್ಖಾ ಧರಿಸಿ ನೃತ್ಯ ಮಾಡುವ ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯದವರೇ ಆಗಿದ್ದು, […]
ಉಡುಪಿಗೂ ಕಾಲಿಟ್ಟಿತು ಕೆಂಗಣ್ಣು ರೋಗ: ದ.ಕದಲ್ಲಿ ಸೋಂಕಿತರ ಪ್ರಮಾಣ ಇಳಿಕೆ
ಉಡುಪಿ: ದ.ಕನ್ನಡದಾದ್ಯಂತ ಜನಸಾಮಾನ್ಯರನ್ನು ಕಾಡಿದ ಕೆಂಗಣ್ಣು ರೋಗ ಇದೀಗ ಉಡುಪಿಗೂ ಕಾಲಿಟ್ಟಿದ್ದು, ರೋಗಕ್ಕೆ ತುತ್ತಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳಲ್ಲಿ ಕೆಂಗಣ್ಣು ರೋಗಕ್ಕೆ ಹಲವರು ತುತ್ತಾಗಿದ್ದಾರೆ. ಈ ಮಧ್ಯೆ, ದ.ಕನ್ನಡದಲ್ಲಿ ರೋಗ ಬಾಧೆ ಇಳಿಕೆಯಾಗಿದ್ದು ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದೆ. ಉಡುಪಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಂಗಣ್ಣಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಂಗಣ್ಣು ರೋಗವು ಒಂದು ವೈರಾಣು ಬಾಧಿತ ರೋಗವಾಗಿದ್ದು, ವಾರದೊಳಗೆ ಗುಣಮುಖವಾಗುತ್ತದೆ. ಕೆಂಗಣ್ಣು ರೋಗದಿಂದ […]
ದ.ಕ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿಯಲ್ಲಿ ಉದ್ಯೋಗಾವಕಾಶ
ಮಂಗಳೂರು: ದ.ಕ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿಯಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ರಾಜ್ಯದ 29 ಜಿಲ್ಲೆಗಳಲ್ಲಿ ರೈತರ ಸದಸ್ಯತ್ವ ನೋಂದಾವಣೆ ಮಾಡಲು ಪ್ರತಿ ಜಿಲ್ಲೆಗೆ 50 ಅಭ್ಯರ್ಥಿಯ ಅವಶ್ಯಕತೆ ಇದ್ದು, 35 ವರ್ಷ ಒಳಗಿನ ಯುವಕ/ಯುವತಿಯರು, ವಿಶೇಷವಾಗಿ ರೈತರ ಮಕ್ಕಳು ಅರ್ಜಿ ಸಲ್ಲಿಸಬಹುದು. ವೇತನ: 15,000ರೂ ಜೊತೆಗೆ ಭತ್ಯೆ ನೀಡಲಾಗುವುದು. ಅರ್ಹತೆ: ಅಭ್ಯರ್ಥಿಯು ಪದವೀಧರರಾಗಿದ್ದು, ಆಧಾರ್ ಕಾರ್ಡ್ ಮತ್ತು ದ್ವಿಚಕ್ರ ವಾಹನ ಪರವಾನಗಿಯನ್ನು ಹೊಂದಿರಬೇಕು. 500 ರೂ ಡಿ.ಡಿ ಯೊಂದಿಗೆ ಬಯೋಡೀಟಾವನ್ನು […]
ಅರ್ಹ ಹಾಲು ಉತ್ಪಾದಕ ರೈತರಿಂದ ಜಾನುವಾರು ಘಟಕ ಅನುಷ್ಠಾನಕ್ಕೆ ಅರ್ಜಿ ಆಹ್ವಾನ
ಉಡುಪಿ, ಡಿಸೆಂಬರ್ 6 (ಕವಾ): ಪಶುಪಾಲನಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದಡಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಜಿಲ್ಲೆಯಲ್ಲಿ ಮಿಶ್ರ ತಳಿ ಹಸು / ಸುಧಾರಿತ ತಳಿ ಎಮ್ಮೆಗಳ ಹಾಗೂ ಕುರಿ/ಮೇಕೆಗಳ ಘಟಕಗಳನ್ನು ಅನುಷ್ಠಾನಗೊಳಿಸಲು ಅರ್ಹ ಹಾಲು ಉತ್ಪಾದಕ ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 30 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕು ಮುಖ್ಯ ಪಶು ವೈದ್ಯ ಅಧಿಕಾರಿ (ಆಡಳಿತ), ಪಶು […]
ಕರಾವಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಪಾರ್ಕಿನ್ಸನ್ ಕಾಯಿಲೆಗೆ ನವೀನ ತಂತ್ರಜ್ಞಾನದ ಚಿಕಿತ್ಸೆ ನೀಡಿದ ಕಸ್ತೂರ್ಬಾ ಆಸ್ಪತ್ರೆ
ಮಣಿಪಾಲ: ದಾವಣಗೆರೆ ಜಿಲ್ಲೆಯ 62 ವರ್ಷದ ಮಹಿಳೆಯೊಬ್ಬರಿಗೆ ಪಾರ್ಕಿನ್ಸನ್ ಕಾಯಿಲೆಗೆ ಇತ್ತೀಚಿನ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಸಾಧನದೊಂದಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು. ಇದು ಕರಾವಳಿ ಕರ್ನಾಟಕದಲ್ಲಿ ಮೊದಲನೆಯ ಪ್ರಯತ್ನವಾಗಿದೆ. ಮಹಿಳೆಯು ಕಳೆದ 12 ವರ್ಷಗಳಿಂದ ನರ ದುರ್ಬಲಗೊಳಿಸುವ ನರವೈಜ್ಞಾನಿಕ ಸ್ಥಿತಿಯಿಂದ ಬಳಲುತ್ತಿದ್ದರು ಇದರಿಂದ ನಿಧಾನವಾಗಿ ಔಷಧಿಗಳಿಗೆ ಪ್ರತಿರೋಧ ಬೆಳೆಸಿದ್ದರು. ಅವರ ಕೈಕಾಲುಗಳಲ್ಲಿನ ನಡುಕ, ಬಿಗಿತ ಮತ್ತು ನಿಧಾನಗತಿಯ ಕಾರಣದಿಂದಾಗಿ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವುದು ಮತ್ತು ನಡಿಗೆಗೆ ತೊಂದರೆಯಾಗಿತ್ತು. ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗಿರೀಶ್ ಮೆನನ್, ನರವಿಜ್ಞಾನ ವಿಭಾಗದ […]