200 ವರ್ಷಗಳ ಇತಿಹಾಸದ ಮೊಳಹಳ್ಳಿ ಕಂಬಳಕ್ಕೆ ಕ್ಷಣಗಣನೆ: ಡಿ. 12 ರಂದು ಕಂಬಳ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ
ಮೊಳಹಳ್ಳಿ: ಐತಿಹಾಸಿಕ ಪುರಾಣ ಪ್ರಸಿದ್ಧ ಮೊಳಹಳ್ಳಿ ಕಂಬಳ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಸುಮಾರು 200 ವರ್ಷಗಳಕ್ಕಿಂತಲೂ ಹಳೆಯ ಇತಿಹಾಸ ಹೊಂದಿರುವ ಕಂಬಳ ಮಹೋತ್ಸವ ಈ ಬಾರಿ ವಿಜೃಂಭಣೆಯಿಂದ ನಡೆಯಲು ಸಜ್ಜಾಗಿದೆ. ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಳಹಳ್ಳಿ ಕಂಬಳ ಡಿ. 12 ರಂದು ಸೋಮವಾರ ಮಧ್ಯಾಹ್ನದಿಂದ ಪ್ರಾರಂಭವಾಗಲಿದೆ. ಕುಂದಾಪುರ ತಾಲೂಕಿನ ಬಹುದೊಡ್ಡ ಗ್ರಾಮಗಳಲ್ಲಿ ಮೊಳಹಳ್ಳಿ ಎಂಬ ಊರು ಹೆಸರುವಾಸಿ. ಅಲ್ಲದೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಿಂತನೆಯುಳ್ಳ ಗ್ರಾಮವಾಗಿ ಬೆಳೆದಿದೆ. ಮೊಳಹಳ್ಳಿ ಗ್ರಾಮ ‘ಸುವರ್ಣ ಗ್ರಾಮ’ […]
ಡಿ. 10 ರಂದು ಎಂಕುಲ್ ಫ್ರೆಂಡ್ಸ್ ಕಲಾವಿದರ ವತಿಯಿಂದ ತ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟ
ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು ಹಿರಿಯಡಕ ಇವರ ಆಶ್ರಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ ಬಾಲಕಿಯರ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಹಾಗೂ ಅಂಡರ್ -19 ವಯೋಮಿತಿಯ ಬಾಲಕರ ಹಾಗೂ ಗ್ರಾಮೀಣ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಕೂಟ ಎಂಕುಲು ಫ್ರೆಂಡ್ಸ್ ಟ್ರೋಫಿ 2022-23, ಡಿ. 10 ಶನಿವಾರದಂದು ಬೆಳಿಗ್ಗೆ 8:30 ರಿಂದ ಮರುದಿನ ಭಾನುವಾರ ಬೆಳಿಗ್ಗೆ 8.30 ರವರೆಗೆ ಕೋಟ್ನಕಟ್ಟಿ ಮೈದಾನದಲ್ಲಿ ಜರುಗಲಿದೆ. ತ್ರೋಬಾಲ್ ಮಹಿಳೆಯರು ಮತ್ತು ಬಾಲಕಿಯರು: […]
ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆರ್ಯವರ್ಧನ್ : ಎಸ್.ನಾರಾಯಣ್ ‘ಸೂರ್ಯವಂಶ’ ದಿಂದ ಮತ್ತೆ ಕಿರುತೆರೆಗೆ ಅನಿರುದ್ದ್
ಅಭಿಮಾನಿಗಳ ನೆಚ್ಚಿನ ಆರ್ಯವರ್ಧನ್ ಖ್ಯಾತಿಯ ಅನಿರುದ್ದ್ ಮತ್ತೆ ಕಿರುತೆರೆಗೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಕನ್ನಡದ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್ ರವರು ಅನಿರುದ್ದ್ ಕೈ ಹಿಡಿದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ಮಾಡಿ ಹೆಸರುಗಳಿಸಿರುವ ಎಸ್.ನಾರಾಯಣ್ ಉದಯ ಟಿವಿಗಾಗಿ “ಸೂರ್ಯವಂಶ” ಧಾರಾವಾಹಿಯನ್ನು ರಚಿಸಿ ನಿರ್ದೇಶಿಸುತ್ತಿದ್ದಾರೆ. ವಿಶೇಷವೆಂದರೆ ಡಾ. ವಿಷ್ಣುವರ್ಧನ್ ರವರು ನಟಿಸಿದ್ದ ಸೂರ್ಯವಂಶ ಹೆಸರಿನ ಧಾರಾವಾಹಿಯಲ್ಲಿ ಅನಿರುದ್ದ್ ನಟಿಸುತ್ತಿರುವುದು. ವಿಷ್ಣು ದಾದಾ ನಟಿಸಿದ್ದ ಸೂರ್ಯವಂಶ ಚಿತ್ರವು ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಅಳಿಯ ಅನಿರುದ್ದ್ […]
ಡಿ.11 ರಂದು ವಿಕಲಚೇತನರಿಗಾಗಿ ಚೆಸ್ ಪಂದ್ಯಾಟ
ಕೋಟ: ವಿಕಲಚೇತನರ ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ ಹಾಗೂ ಉಡುಪಿ ಜಿಲ್ಲಾ ವಿಕಲಚೇತನರ ಕ್ರೀಡಾ ಸಂಘ, ಇವರ ಸಹಯೋಗದಲ್ಲಿ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ವಿಕಲಚೇತನರಿಗಾಗಿ ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಚದುರಂಗ ಸ್ಪರ್ಧೆಯನ್ನು ಡಿ.11 ಭಾನುವಾರದಂದು ಬೆಳಿಗ್ಗೆ 9.30 ರಿಂದ ವಿಕಲಚೇತನ ಮಾಹಿತಿ ಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಆಸಕ್ತ ವಿಕಲಚೇತನರು ಈ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಲು ಕೋರಲಾಗಿದೆ. ಷರತ್ತುಗಳು: ಆಸಕ್ತ ವಿಕಲಚೇತನರು ಡಿ. 09 ರ ಸಂಜೆ 5:00 ಗಂಟೆಯ ಒಳಗೆ ತಮ್ಮ ಹೆಸರನ್ನು […]
ಡಿ.25 ರಂದು ಉಡುಪಿಗೆ ಬರಲಿದ್ದಾರೆ ಉತ್ತರಪ್ರದೇಶದ ಸಂತ: ಯುವ ಮತದಾರರ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಗಿ
ಉಡುಪಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೇ ಪ್ರಥಮ ಬಾರಿಗೆ ಕರಾವಳಿ ಕರ್ನಾಟಕ್ಕೆ ಕಾಲಿಡುತ್ತಿದ್ದಾರೆ. ಹಿಂದುತ್ವದ ಭದ್ರ ಕೋಟೆಯಲ್ಲಿ ಹಿಂದೂ ಸಂತನ ಆಗಮನವನ್ನು ಸ್ವಾಗತಿಸಲು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಸಜ್ಜಾಗುತ್ತಿದ್ದಾರೆ. ಇಂಧನ ಸಚಿವ ಸುನಿಲ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಡಿ.25 ರಂದು ಜಿಲ್ಲೆಯಲ್ಲಿ ನಡೆಯಲಿರುವ ಯುವ ಮತದಾರರ ಸಮಾವೇಶದಲ್ಲಿ ಉ.ಪ್ರ. ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ ಎಂದಿದ್ದಾರೆ. ಡಿ.6 ರಂದು ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು ೨೦೨೩ ವಿಧಾನಸಭಾ […]