ಬ್ರಹ್ಮಾವರ: ಯುವತಿ ನಾಪತ್ತೆ

ಉಡುಪಿ: ಬ್ರಹ್ಮಾವರ ತಾಲೂಕು ಮಾಬುಕಳ ಹಪ್ಪಳಬೆಟ್ಟು ನಿವಾಸಿ ಸಾರಾ ಡೇಸಾ (26) ಎಂಬ ಯುವತಿಯು ನವೆಂಬರ್ 17 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 1 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಕೊಂಕಣಿ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೋಟ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2564155, ಮೊ.ನಂ: 9480805454, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2561966, […]

ಡಿಸೆಂಬರ್ 9 ರಂದು ಮಾಸಿಕ ಉನ್ನತಿ ಉದ್ಯೋಗ ಮೇಳ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಈಗಾಗಲೇ ಐಟಿ, ಬ್ಯಾಂಕಿಂಗ್, ಇನ್ಶುರೇನ್ಸ್, ಏವಿಯೇಷನ್, ಟ್ರಾವೆಲ್-ಟೂರಿಸಮ್, ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿ, ಸಂದರ್ಶನ ಕಲೆಯೊಂದಿಗೆ ಪರಿಣಿತರಿಂದ ತರಬೇತಿ ನೀಡಿ, ನಂತರ ಉದ್ಯೋಗವಕಾಶವನ್ನೂ ಒದಗಿಸುತ್ತಿದೆ. ಇದೀಗ ಸಂಸ್ಥೆಯು ಈ ಅವಕಾಶವನ್ನು ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೂ ಒದಗಿಸುವ ದೃಷ್ಟಿಯಿಂದ ತಿಂಗಳಿನ ಎರಡನೇ ವಾರದ ಪ್ರತಿ ಶುಕ್ರವಾರದಂದು ಮಾಸಿಕ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದೆ. ಈ ಮೇಳದಲ್ಲಿ ಜಿಲ್ಲೆಯ, ರಾಜ್ಯದ ಹಾಗೂ […]

ಮಾಹೆ ವತಿಯಿಂದ ಡಿಸೆಂಬರ್ 19 ರಿಂದ 21 ರವರೆಗೆ ಪ್ರಪ್ರಥಮ ಭಾರತೀಯ ನ್ಯೂರೋಬಿಹೇವಿಯರ್ ಕಾನ್ಫರೆನ್ಸ್ ಆಯೋಜನೆ

ಮಣಿಪಾಲ: ಡಿಸೆಂಬರ್ 19 ರಿಂದ 21 ರವರೆಗೆ ಮಾಹೆಯ ಕಸ್ತೂರ್ಬಾ ವೈದ್ಯಕೀಯ ಕಾಲೇಜು ತನ್ನ ಪ್ರಥಮ ಭಾರತೀಯ ನ್ಯೂರೋಬಿಹೇವಿಯರ್ ಕಾನ್ಫರೆನ್ಸ್ ಅನ್ನು ಆಯೋಜಿಸುತ್ತಿದೆ. ವಿವಿಧ ಭಾರತೀಯ ಸಂಸ್ಥೆಗಳ ನರವಿಜ್ಞಾನಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ನೊಣಗಳು, ಸೊಳ್ಳೆಗಳು, ಇಲಿಗಳು, ಮಂಗಗಳು ಮತ್ತು ರೋಗಿಗಳ ಜನಸಂಖ್ಯೆಯಂತಹ ವಿವಿಧ ಮಾದರಿ ಜೀವಿಗಳ ಮೇಲೆ ಕೆಲಸ ಮಾಡುತ್ತಿರುವ ಭಾರತೀಯ ನರವಿಜ್ಞಾನದ ಸಂಶೋಧಕರು ಮತ್ತು ಚಿಕಿತ್ಸಕರನ್ನು ಒಟ್ಟುಗೂಡಿಸುವ ಮೂಲಕ ನ್ಯೂರೋಬಯಾಲಾಜಿಕಲ್ ಸಮ್ಮೇಳನವು ನ್ಯೂರೋಸೈಕಿಯಾಟ್ರಿಕ್ ಅಸ್ವಸ್ಥತೆಗಳು ಮತ್ತು ಮೂಲಭೂತ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಮೆದುಳಿನ […]

ವಿದ್ಯಾರ್ಥಿಗಳಿಗಾಗಿ ನಶಾ ಮುಕ್ತ ಭಾರತ ಅಭಿಯಾನ ಮತ್ತು ಕಾನೂನು ಜಾಗೃತಿ ಕಾರ್ಯಾಗಾರ

ಉಡುಪಿ: ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ, ಜಿಲ್ಲಾ ಲೀಡ್ ಕಾಲೇಜು, ಉಡುಪಿ ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಪೋಲೀಸ್ ಇಲಾಖೆ, ಜಿಲ್ಲಾ ಅಂಗವಿಕಲ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಉಡುಪಿ ಇವರ ಜಂಟಿ ಸಹಯೋಗದಿಂದ ನಶಾ ಮುಕ್ತ ಭಾರತ ಅಭಿಯಾನ ಮತ್ತು ಎನ್.ಎಸ್.ಎಸ್. ಸ್ವಯಂಸೇವಕರಿಗೆ ಕಾನೂನು ಜಾಗೃತಿ ಕಾರ್ಯಗಾರ ಕಾಲೇಜಿನ ಯು.ಜಿ. ಸಭಾಂಗಣದಲ್ಲಿ ಬುಧವಾರದಂದು ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನ […]

ಸರಕಾರ ಶಾಲಾ ಬಿಸಿಯೂಟಕ್ಕೆ ತೊಗರಿಬೇಳೆ ಪೂರೈಸಲೂ ಪರದಾಡುತ್ತಿರುವುದು ವಿಷಾದನೀಯ: ವೆರೋನಿಕಾ ಕರ್ನೆಲಿಯೋ

ಉಡುಪಿ: 40% ಕಮೀಷನ್ ಪಡೆಯುವ ಭರದಲ್ಲಿ ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ತೊಗರಿ ಬೇಳೆ ಪೊರೈಸಲು ಮರೆತಿರುವ ರಾಜ್ಯ ಸರಕಾರದ ಧೋರಣೆ ನಿಜಕ್ಕೂ ದುರದೃಷ್ಠಕರವಾಗಿದೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ಗೂ ಮೊದಲು ಪ್ರತೀ ತಿಂಗಳು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ತೊಗರಿ ಬೇಳೆ ಪೂರೈಸಲಾಗುತ್ತಿತ್ತು. ಕೋವಿಡ್ ಬಳಿಕ ಮೂರು ತಿಂಗಳಿಗೊಮ್ಮೆ ತೊಗರಿಬೇಳೆಯನ್ನು ಒಂದೇ ಬಾರಿಗೆ ಸರಬರಾಜು ಮಾಡಲಾಗುತ್ತಿತ್ತು. ಕಳೆದ ಸಪ್ಟೆಂಬರ್ ಮೊದಲ ವಾರದಲ್ಲಿ ಶಾಲೆಗಳಿಗೆ ತೊಗರಿಬೇಳೆ ಸರಬರಾಜು ಆಗಿತ್ತು. […]