ಭತ್ತದ ಮೋಟೆ ಹೊತ್ತಿದ್ದ ಲಾರಿ ಕಾರಿನ ಮೇಲೆ ಪಲ್ಟಿ: ಪ್ರಯಾಣಿಕರು ಪವಾಡ ಸದೃಶ ಪಾರು

ಪರ್ಕಳ: ಇಲ್ಲಿನ ರಸ್ತೆ ಅವ್ಯವಸ್ಥೆಯಿಂದಾಗಿ ಕೆಳಪರ್ಕಳದಲ್ಲಿ ಭತ್ತದ ಮೂಟೆಗಳನ್ನು ಹೊತ್ತೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಪ್ರವಾಸಿ ಕಾರುಗಳ ಮೇಲೆ ಪಲ್ಟಿಯಾಗಿದೆ. ಇದರಲ್ಲಿ ಒಂದು ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಲಾರಿಯಲ್ಲಿದ್ದ ಭತ್ತದ ಮೂಟೆಗಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಪ್ರಯಾಣಿಕರು ಕೆಲಹೊತ್ತು ಪರದಾಡಿದರು. ಕಾರಿನಲ್ಲಿದ್ದವರು ಪವಾಡಸದೃಶರಾಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ಮಣಿಪಾಲ- ಪರ್ಕಳ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಬೇರೆ ಜಿಲ್ಲೆ ಅಥವಾ ರಾಜ್ಯಗಳಿಂದ ಆಗಮಿಸುವ ವಾಹನ ಚಾಲಕರು ಉಡುಪಿಯಿಂದ ಕಾರ್ಕಳಕ್ಕೆ ತೆರಳುವಾಗ ಗೊಂದಲಕ್ಕೆ […]

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ಮಾಹಿತಿ ಕಾರ್ಯಾಗಾರ

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಡಿ02 ರಂದು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ತ್ರಿಶಾ ಕಾಲೇಜಿನ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಭಾಗವಹಿಸಿ ಮಾತನಾಡಿ, ಜೀವನದ ಪ್ರಮುಖ ಘಟ್ಟವಾಗಿರುವ ಪಿಯುಸಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವಾಗ ಉಂಟಾಗುವ ಗೊಂದಲ, ಆತಂಕಗಳನ್ನು ದೂರ ಮಾಡಿ ಆತ್ಮ ವಿಶ್ವಾಸ ರೂಪಿಸಿಕೊಳ್ಳುವ ಬಗ್ಗೆ ಮತ್ತು ಉತ್ತಮ ಭವಿಷ್ಯದ ಕನಸು ಕಟ್ಟಿಕೊಂಡಿರುವ ವಿದ್ಯಾರ್ಥಿಗಳು ಪಿಯುಸಿ ನಂತರ ಮುಂದೇನು ಎನ್ನುವ ಗೊಂದಲಕ್ಕೆ ತೆರೆ ಎಳೆದು ಜೀವನದಲ್ಲಿ ಯಶಸ್ವಿಯಾಗಲು […]

ಹಿರಿತೆರೆ ಕಿರುತೆರೆಯಲ್ಲಿ ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ ಡಬಲ್ ರೈಡಿಂಗ್

ಕಿರುತೆರೆ ಧಾರಾವಾಹಿ ಜೊತೆಜೊತೆಯಲಿ ಮೂಲಕ ಪ್ರವರ್ಧಮಾನಕ್ಕೆ ಬಂದು ರಾಜ್ಯಾದ್ಯಂತ ಅನುಸಿರಿಮನೆ ಎಂದೇ ಖ್ಯಾತಿ ಪಡೆದಿರುವ ಮೇಘಾ ಶೆಟ್ಟಿಯ ಹಿರಿತೆರೆ ಪ್ರಯಾಣ ಭರಜರಿಯಾಗಿಯೆ ಶುರುವಾಗಿದೆ. ಜೊತೆಜೊತೆಯಲಿ ಧಾರಾವಾಹಿಯ ಮುಗ್ಧ ಮೇಘಾ ಈಗ ಚಂದನವನದ ಬೇಡಿಕೆಯ ನಟಿ. ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟನಾಗಿರುವ ತ್ರಿಬಲ್ ರೈಡಿಂಗ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೇಘಾ ನಟನೆಯ ದಿಲ್ ಪಸಂದ್ ಚಿತ್ರವೂ ಬಿಡುಗಡೆಯಾಗಿದ್ದು, ಈಗ ತ್ರಿಬಲ್ ರೈಡಿಂಗ್ ಚಿತ್ರ ತೆರೆ ಕಂಡಿದೆ. ಮೇಘಾ ಬಳಿ ಇನ್ನೂ ಎರಡು […]

ಸಾವಯವ ನುಗ್ಗೆ ಕೃಷಿಕ ಬಸಯ್ಯ ಹಿರೇಮಠ ಇವರಿಗೆ ಶ್ರೇಷ್ಠ ಉದ್ಯಮಿ ಪ್ರಶಸ್ತಿ

ಕುಷ್ಟಗಿ: ಸಾವಯವ ಕೃಷಿ ಮೂಲಕ ಗಮನ ಸೆಳೆದು, ನಂದಿ ಆಗ್ರೋ ಫಾರ್ಮ್ ಸ್ಥಾಪಿಸಿ ಸರ್ವಜನಿಕರಿಗೆ ಉಚಿತ ಮತ್ತು ರಿಯಾಯತಿ ದರದಲ್ಲಿ ಉತ್ಪನ್ನ ಮಾರಾಟಮಾಡುತ್ತಿರುವ ಕೃಷಿಕ ಬಸಯ್ಯ ಹಿರೇಮಠ ಇವರಿಗೆ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯಿಂದ ನೀಡಲಾಗುವ ‘ಶ್ರೇಷ್ಠ ಉದ್ಯಮಿ’ ಪ್ರಶಸ್ತಿ ಲಭ್ಯವಾಗಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಬಸಯ್ಯನವರು ನುಗ್ಗೆ ಕೃಷಿಯ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದಾರೆ. ಇವರು ಪ್ರಸ್ತುತ ಗಂಗಾವತಿಯಲ್ಲಿ ವಾಸವಾಗಿದ್ದಾರೆ. ನುಗ್ಗೆ ಕೃಷಿಯಲ್ಲಿ ಲಕ್ಷಾಂತರ ರೂ ವಹಿವಾಟು ಹೊಂದಿರುವ ಇವರು ನುಗ್ಗೆ ಎಣ್ಣೆ, […]

ಇಂದ್ರಾಳಿ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ

ಉಡುಪಿ: ಹಲವು ದಿನಗಳ ಎಡೆಬಿಡದ ಕಾಮಗಾರಿಯ ಬಳಿಕ ಇಂದ್ರಾಳಿ ಕಾಂಕ್ರೀಟ್ ರಸ್ತೆ ಪೂರ್ಣಗೊಂಡಿದ್ದು, ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. 56 ಮೀ ಸೇತುವೆ ಕಾಮಗಾರಿಯ ಜೊತೆಗೆ 200 ಮೀ ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿ ಪೂರ್ಣವಾಗಿದೆ. ಸೋಮವಾರದಿಂದ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ವರದಿಯಾಗಿದೆ.