ಹೆಜಮಾಡಿಯಲ್ಲಿ ಟೋಲ್ ಶುಲ್ಕ ಯಥಾಸ್ಥಿತಿ ಕಾಪಾಡಿ: ಅಧಿಕಾರಿಗಳಿಗೆ ಎಸ್.ಅಂಗಾರ ಸೂಚನೆ
ಉಡುಪಿ: ಜಿಲ್ಲೆಯ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಈ ಹಿಂದೆ ಪಡೆಯುತ್ತಿದ್ದ ದರಗಳನ್ನು ಮಾತ್ರ ಪಡೆಯುವಂತೆ ಹಾಗೂ ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ ಪ್ಲಾಜಾ ವಿಲೀನದ ಪರಿಷ್ಕೃತ ದರಗಳನ್ನು ಪಡೆಯದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಸೂಚನೆ ನೀಡಿದರು. ಅವರು ಶನಿವಾರ ಉಡುಪಿ ತಾಲೂಕು ಕಚೇರಿಯಲ್ಲಿ, ರಾಷ್ಟ್ರೀಯ ಹೆದ್ದಾರಿ 66 ರ ಸುರತ್ಕಲ್ ಟೋಲ್ ಪ್ಲಾಜಾವನ್ನು ತೆರವುಗೊಳಿಸಿ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಟೋಲ್ […]
ಕಾಶೀಮಠಾಧೀಶರಿಂದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಭೇಟಿ
ಉಡುಪಿ: ಶನಿವಾರದಂದು ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಭೇಟಿ ನೀಡಿದರು. ಪೂಜ್ಯ ಶ್ರೀಗಳನ್ನು ಪೂರ್ಣ ಕುಂಭ ಸ್ವಾಗತ, ಅರ್ಚಕರ ವೇದ ಘೋಷ, ಕಳಶ ಹಾಗೂ ಮಂಗಳವಾದ್ಯದೊಂದಿಗೆ ಸ್ವಾಗತಿಸಿ ದೇವಾಲಯಕ್ಕೆ ಬರಮಾಡಿಕೊಂಡು ದೇವರ ಭೇಟಿ ಬಳಿಕ ದೇವಾಲಯದ ಯಾಗ ಮಂಟಪಕೆ ಆಗಮಿಸಿ ಶ್ರೀಮದ್ಭಾಗವತ ದಶಮ ಸ್ಕಂದ ಹವನದ ಮಹಾ ಪೂರ್ಣಾಹುತಿ ನೆರವೇರಿಸಲಾಯಿತು. ಚೇಂಪಿ ಶ್ರೀಕಾಂತ್ ಭಟ್ ಹವನದ ಧಾರ್ಮಿಕ ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು. ಸೇವಾದಾರರಾದ ಹ್ಯಾಂಗ್ಯೋ ಐಸ್ ಕ್ರೀಮ್ […]
ದಶಮಾನೋತ್ಸವ ಸಂಭ್ರಮದಲ್ಲಿ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್
ಮಣಿಪಾಲ: ಉದ್ಯೋಗ ಆಥವಾ ನೌಕರಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕನಸು ಕಾಣುವ ಯುವತಿ/ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡಲು ನೆರವಾಗುವ ಒಂದು ವರ್ಷದ ನರ್ಸರಿ / ಮಾಂಟೆಸ್ಸರಿ ಕೋರ್ಸ್ ಅನ್ನು ಮಣಿಪಾಲದ, ಶ್ರೀ ಶಾರದ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ನಡೆಸಲಾಗುತ್ತಿದೆ. ದಶಮಾನೋತ್ಸವ ಆಚರಿಸುತ್ತಿರುವ ಈ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದಲೂ ತರಬೇತಿ ನೀಡುತ್ತಿದ್ದು, 500ಕ್ಕೂ ಮಿಕ್ಕಿ ಯುವತಿಯರಿಗೆ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಯಶ್ವಸಿಯಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದಿಂದ ಸ್ಥಾಪಿಸಿರುವ ಈ ತರಬೇತಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಿ, ಉದ್ಯೋಗ […]
ಡಿ.10-11 ರಂದು ಕೆನರಾ ಬ್ಯಾಂಕ್ ವತಿಯಿಂದ ಹೊಸವರ್ಷದ ಪ್ರಯುಕ್ತ ಕೆನರಾ ರಿಟೈಲ್ ಮೇಳ-2022
ಉಡುಪಿ: ಕೆನರಾ ಬ್ಯಾಂಕ್ ವತಿಯಿಂದ ಹೊಸವರ್ಷದ ಪ್ರಯುಕ್ತ ಕೆನರಾ ರಿಟೈಲ್ ಮೇಳ-2022 ಅನ್ನು ಡಿ.10 ಮತ್ತು 11 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಉಡುಪಿಯ ಎಂಜಿಎಂ ಕಾಲೇಜ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದೆ. ಆಕರ್ಷಣೆಗಳು: ಬ್ಯಾಂಕ್ ನಿಂದ ಮನೆ ಮತ್ತು ವಾಹನಗಳ ಸಾಲ ಸೌಲಭ್ಯ. ಪ್ರವೇಶ ಶುಲ್ಕ ಇಲ್ಲ. ಆಕರ್ಷಕ ದರದಲ್ಲಿ ಸುಲಭ ಸಾಲ. ಯಾವುದೇ ಜಾಮೀನು ಇಲ್ಲ, ಆದಾಯ ತೆರಿಗೆ ವಿನಾಯಿತಿ, ವಾಹನ ಸಾಲಕ್ಕೆ ಕೇವಲ 10% ಪಾವತಿ, ಉಳಿದ ಹಣವನ್ನು ಮಾಸಿಕ […]
ಕರ್ನಾಟಕ ಉಪಲೋಕಾಯುಕ್ತ ಜಸ್ಟೀಸ್ ಕೆ.ಎನ್.ಫಣೀಂದ್ರ ಶ್ರೀಕೃಷ್ಣ ಮಠ ಭೇಟಿ
ಉಡುಪಿ: ಕರ್ನಾಟಕ ಉಪಲೋಕಾಯುಕ್ತರಾದ ಜಸ್ಟೀಸ್ ಕೆ.ಎನ್.ಫಣೀಂದ್ರ ಇವರು ಶನಿವಾರದಂದು ಶ್ರೀಕೃಷ್ಣಮಠಕ್ಕಾಗಮಿಸಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಉಪಸ್ಥಿತರಿದ್ದರು.