ವ್ಯಕ್ತಿ ನಾಪತ್ತೆ

ಉಡುಪಿ: ಕೊಡವೂರು ಗ್ರಾಮದ ಲಕ್ಷ್ಮೀ ನಗರ ನಿವಾಸಿ ಉದಯ ಆಚಾರ್ಯ (43) ಎಂಬ ವ್ಯಕ್ತಿಯು ಅಕ್ಟೋಬರ್ 30 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 4 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣೆ ದೂ.ಸಂಖ್ಯೆ: 0820- 2537999, ಮೊ.ನಂ: 9480805447, ಉಡುಪಿ ವೃತ್ತ ನಿರೀಕ್ಷಕರು ದೂ.ಸಂಖ್ಯೆ: 9480805430 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಲ್ಪೆ […]

ಉಡುಪಿ: ಯುವತಿ ನಾಪತ್ತೆ

ಉಡುಪಿ: ನಗರದ ನಿಟ್ಟೂರು ಬಾಳಿಗಾ ಫಿಶ್‌ನೆಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕು ಶಿಳ್ಕೆ ನಿವಾಸಿ ಮಾಲತಿ ಗೋಪಾಲ ಗೌಡ (23) ಎಂಬ ಯುವತಿಯು ಸುಮಾರು ಒಂದು ತಿಂಗಳ ಹಿಂದೆ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಸಪೂರ ಮೈಕಟ್ಟು, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹೆಬ್ರಿ: ಅಕ್ರಮ ಕಟ್ಟಡ ತೆರವಿಗೆ ಆದೇಶ ಕಾಂಗ್ರೆಸ್ ಹೋರಾಟಕ್ಕೆ ಸಂದ ಜಯ: ವಿನಯ್ ಕುಮಾರ್ ಸೊರಕೆ

ಹೆಬ್ರಿ: ಮುದ್ರಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸದಾಶಿವ ಸೇರ್ವೇಗಾರ್, ತಮ್ಮ ಅಧಿಕಾರ ದುರುಪಯೋಗ ಪಡಿಸಿ, ತನ್ನ ಸಹೋದರರಾದ ಪದ್ಮನಾಭ ಸೇರ್ವೆಗಾರ್ ಮತ್ತು ಸುರೇಶ್ ಸೇರ್ವೇಗಾರ್ ಎಂಬವರಿಗೆ, ಪೆರ್ಡೂರು ಗ್ರಾಮದ ಸ.ನಂ. 296 ರಲ್ಲಿ, 0.15 ಎಕ್ರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿ ಅನಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿರುವುದನ್ನು ಆಕ್ಷೇಪಿಸಿ, ಕಾಂಗ್ರೆಸ್ ಪಕ್ಷದ ವತಿಯಿಂದ ತೀವ್ರವಾದ ಪ್ರತಿಭಟನೆಯನ್ನು ಕೈಗೊಂಡು ತಾಲೂಕು ದಂಡಾಧಿಕಾರಿಗಳಿಗೆ ದೂರು ಸಲ್ಲಿಸಿ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ಅಕ್ರಮ ಕಟ್ಟಡವನ್ನು ಅನಧಿಕೃತಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ […]

ಪಿ.ಎಫ್.ಐ ತಕ್ಷಣ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ರೆಹಬ್ ಇಂಡಿಯಾ ಫೌಂಡೇಶನ್ (ಆರ್‌ಐಎಫ್) ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಅದರ ಸಹವರ್ತಿ ಸಂಸ್ಥೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ)ಕಾಯಿದೆ, ಅಡಿಯಲ್ಲಿ ಐದು ವರ್ಷಗಳ ಕಾಲ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ಪಿಎಫ್‌ಐ ಕಾರ್ಯಕರ್ತ ನಾಸೀರ್ ಪಾಷಾ ಎಂಬವರು ಪತ್ನಿ ಮೂಲಕ ಸಲ್ಲಿಸಿದ್ದ ಅರ್ಜಿಯ ವಿಚಾರಣೆ […]

ರಷ್ಯಾದ ಹೆಪ್ಪುಗಟ್ಟಿದ ಸರೋವರದಿಂದ 48,500 ವರ್ಷಗಳಷ್ಟು ಹಳೆಯ ವೈರಸ್ ಅನ್ನು ಪುನರುಜ್ಜೀವಗೊಳಿಸಿದ ಫ್ರೆಂಚ್ ವಿಜ್ಞಾನಿಗಳು

ಫ್ರೆಂಚ್ ವಿಜ್ಞಾನಿಗಳು ರಷ್ಯಾದಲ್ಲಿ ಹೆಪ್ಪುಗಟ್ಟಿದ ಸರೋವರದ ಅಡಿಯಲ್ಲಿ ಸಮಾಧಿಯಾಗಿದ್ದ 48,500 ವರ್ಷಗಳಷ್ಟು ಹಳೆಯದಾದ “ಜೊಂಬಿ ವೈರಸ್” ಅನ್ನು ಪುನರುಜ್ಜೀವನಗೊಳಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಫ್ರೆಂಚ್ ವಿಜ್ಞಾನಿಗಳು ಜೊಂಬಿ ವೈರಸ್‌ ಅನ್ನು ಪುನರುಜ್ಜೀವನಗೊಳಿಸಿ ಕೋವಿಡ್ ನಂತಹ ಮತ್ತೊಂದು ಜಾಗತಿಕ ಸಾಂಕ್ರಾಮಿಕ ರೋಗದ ಭಯವನ್ನು ಹುಟ್ಟುಹಾಕಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಈ ವೈರಸ್ ಅಧ್ಯಯನವನ್ನು ಉಲ್ಲೇಖಿಸಿದ್ದು, ಇದರ ವಿಮರ್ಷೆ ಇನ್ನೂ ಬಾಕಿ ಇದೆ ಎಂದಿದೆ. ಪ್ರಾಚೀನ ಅಜ್ಞಾತ ವೈರಸ್‌ನ ಪುನರುಜ್ಜೀವನದಿಂದ ಉಂಟಾಗುವ ಸಸ್ಯ, ಪ್ರಾಣಿ ಅಥವಾ ಮಾನವ ರೋಗಗಳ ಸಂದರ್ಭದಲ್ಲಿ ಪರಿಸ್ಥಿತಿಯು […]