ನೀಲಾವರ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಪ್ರಥಮ ಪಂಚಮಿ ತೀರ್ಥಸ್ನಾನ ಸಂಪನ್ನ
ಉಡುಪಿ: ಶ್ರೀ ಕ್ಷೇತ್ರ ನೀಲಾವರ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಸಮೀಪವಿರುವ ಸೀತಾ ನದಿ ತಟದಲ್ಲಿರುವ ಪ್ರಸಿದ್ದ ಪಂಚಮಿಕಾನದಲ್ಲಿ ಸೋಮವಾರದಂದು ಮೊದಲ ಪಂಚಮಿ ತೀರ್ಥಸ್ನಾನ ನಡೆಯಿತು. ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನು ಸೀತಾನದಿಯಲ್ಲಿ ಪವಿತ್ರ ಸ್ನಾನ ಮಾಡಿಸಿ ನಾಗಸನ್ನಿಧಿಯಲ್ಲಿ ಪೂಜಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ರಘುರಾಮ ಮಧ್ಯಸ್ಥ, ಅರ್ಚಕ ರಾಘವೇಂದ್ರ ಅಡಿಗ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಸಮಿತಿಯ ಸದಸ್ಯರು, ಅರ್ಚಕರು, ಚಾಕರಿಯವರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪೂಜಾ ವಿಧಿ […]
ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ಹೊಸ ಮನೆ ‘ವಲ್ಮೀಕ’ ದ ಅದ್ದೂರಿ ಗೃಹಪ್ರವೇಶ
ಬೆಂಗಳೂರು: ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ನೆಲೆನಿಂತಿರುವ ಸಹೃದಯ ವ್ಯಕ್ತಿತ್ವದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಹೊಸ ಮನೆಯ ಗೃಹಪ್ರವೇಶ ಭಾನುವಾರದಂದು ಬಹಳ ಅದ್ದೂರಿಯಾಗಿ ನೆರವೇರಿದೆ. ಮನೆಯ ದ್ವಾರದಲ್ಲೇ ಸಿಂಹದ ಕಂಚಿನ ಪ್ರತಿಮೆ ವಿಷ್ಣುರವರಿಗೆ ಸಮರ್ಪಿತವಾಗಿದ್ದು ಎಲ್ಲರನ್ನೂ ಸ್ವಾಗತಿಸುತ್ತಿದೆ. ಮುಂಭಾಗದಲ್ಲಿ ಕೃಷ್ಣನ ಬೆಳ್ಳಿಯಿಂದ ಅಲಂಕೃತ ಮೂರ್ತಿಯನ್ನಿಡಲಾಗಿದೆ. ಜಯನಗರದ 4ನೇ ಟಿ ಬ್ಲಾಕ್ ನಲ್ಲಿ ನಿರ್ಮಾಣವಾಗಿರುವ ಈ ಮನೆಗೆ ‘ವಲ್ಮೀಕ’ ಎಂದು ಹೆಸರಿಡಲಾಗಿದೆ. ನೂತನ ಗೃಹದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡು ಶುಭ ಹಾರೈಸಿದರು. ಹಾಗೆಯೇ […]
ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡಾಸ್ಫೂರ್ತಿಯನ್ನು ತುಂಬುವುದು ಅಗತ್ಯ: ಶಾಸಕ ಕೆ.ರಘಪತಿ ಭಟ್
ಉಡುಪಿ: ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡಾಸ್ಫೂರ್ತಿಯನ್ನು ತುಂಬುವುದು ಅಗತ್ಯ. ಹೊಸತನದ ಚಿಂತನೆಯೊಂದಿಗೆ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪದವಿಪೂರ್ವ ವಿಭಾಗದಲ್ಲಿ ನಡೆಯುತ್ತಿರುವ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ದಾಖಲಾಗುವ ಕೂಟ ದಾಖಲೆಯನ್ನು ಸಮತೂಕವಾಗಿ ದಾಖಲಿಸುವ ನಿಟ್ಟಿನಲ್ಲಿ ಫೋಟೋ ಫಿನಿಶಿಂಗ್ ಬಳಸುತ್ತಿರುವುದು ಅಭಿನಂದನಾರ್ಹ ಎಂದು ಶಾಸಕ ಕೆ.ರಘಪತಿ ಭಟ್ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ಸರ್ಕಾರ ಪದವಿಪೂರ್ವ ಶಿಕ್ಷಣ ಇಲಾಖೆ, ರಜತ್ರಾದಿ,ಮಣಿಪಾಲ, ಉಡುಪಿ, ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜು, ನಾಗಬನ ಕ್ಯಾಂಪಸ್ ಇವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ ಅಜ್ಜರಕಾಡು, ಉಡುಪಿ ಇಲ್ಲಿ ಆಯೋಜಿಸಿದ್ದ […]
ಮೂಲ್ಕಿ ರವೀಂದ್ರ ಪ್ರಭು ಅವರಿಂದ ಭಕ್ತಿ ಸಂಗೀತ ಕ್ರಾಯಕ್ರಮ
ಉಡುಪಿ: ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 94 ನೇ ಭಜನಾ ಸಪ್ತಾಹ ಅಂಗವಾಗಿ ನವೆಂಬರ್ 28 ರಂದು ಮೂಲ್ಕಿ ರವೀಂದ್ರ ಪ್ರಭುರವರಿಂದ ಭಕ್ತಿ ಸಂಗೀತ ಕ್ರಾಯಕ್ರಮ ನಡೆಯಿತು. ಅವರನ್ನು ದೇವಳದ ವತಿಯಿಂದ ಗೌ ರವಿಸಲಾಯಿತು. ಬಳಿಕ ರಾತ್ರಿ ಶ್ರೀದೇವರ ಪೇಟೆ ಉತ್ಸವ ವಸಂತಪೂಜೆ , ಅಷ್ಟಾವಧಾನ ಸೇವೆ, ತೊಟ್ಟಿಲು ಸೇವೆ, ಮಹಾಪೂಜೆಯನ್ನು ಅರ್ಚಕ ಜಯದೇವ ಭಟ್ ನೆರವೇರಿಸಿದರು. ಗಣಪತಿ ಭಟ್, ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ, ಕಾಶೀನಾಥ್ ಭಟ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಊರ […]
ವಿವಿಧ ದೇವಸ್ಥಾನಗಳಲ್ಲಿ ಷಷ್ಠಿ ಮಹೋತ್ಸವ ಆಚರಣೆ
ಉಡುಪಿ: ಷಷ್ಠಿ ಪ್ರಯುಕ್ತ ವಿವಿಧ ದೇವಸ್ಥಾನಗಳ ನಾಗ ಸನ್ನಿಧಿಯಲ್ಲಿ ಪೂಜಾ ಕಾರ್ಯಗಳು ನಡೆದವು. ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ ಕುಂಜಿಬೆಟ್ಟಿನಲ್ಲಿ ನಾಗಪಾತ್ರಿ ಗೋಪಾಲ್ ಕೃಷ್ಣ ಸಾಮಗರ ಮಾರ್ಗದರ್ಶನದಲ್ಲಿ ಚಂಡಿಕಾ ಹೋಮ, ನಾಗದೇವರಿಗೆ ವಿಶೇಷ ಅಭಿಷೇಕ ನಡೆಯಿತು. ಶ್ರೀ ವಾಸುಕಿ ಅನಂತ ಪದ್ಮನಾಭ ದೇವಸ್ಥಾನ ಬಡಗುಪೇಟೆಯಲ್ಲಿ ಷಷ್ಠಿ ಮಹೋತ್ಸವದ ಪ್ರಯುಕ್ತ ದೇವರ ಸನ್ನಿಧಾನದಲ್ಲಿ ಆಶ್ಲೇಷ ಬಲಿಸೇವೆ, ಪಲ್ಲ ಪೂಜೆ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಸಾರ್ವಜನಿಕ ಅನ್ನಸಂತರಪಣೆಯಲ್ಲಿ ಭೋಜನ ಪ್ರಸಾದ ಸ್ವೀಕರಿಸಿದರು. ಕಿದಿಯೂರು ಹೋಟೆಲ್ […]