ಎಂಸಿಸಿ ಬ್ಯಾಂಕ್ ಶತಮಾನೋತ್ತರ ದಶಮಾನೋತ್ಸವ ಸಂಭ್ರಮದ ಅದ್ದೂರಿ ಕಾರ್ಯಕ್ರಮ
ಮಂಗಳೂರು: ಎಂಸಿಸಿ ಬ್ಯಾಂಕ್ ನ ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮವು ಭಾನುವಾರದಂದು ಮಂಗಳೂರಿನ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಿತು. ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ದೀಪಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಂಸಿಸಿ ಸಂಸ್ಥಾಪಕ ಪಿ.ಎಫ್.ಎಕ್ಸ್ ಸಲ್ಡಾನ ಇವರ ಭಾವಚಿತ್ರಕ್ಕೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನೀಲ್ ಲೋಬೊ ಪುಷ್ಪಾರ್ಚಣೆಯನ್ನು ನೆರವೇರಿಸಿದರು. ಮಂಗಳೂರು […]
ಕೊಡವೂರು ವಾರ್ಡ್ ಸಮಿತಿ ವತಿಯಿಂದ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಕಾರ್ಯಕ್ರಮ
ಉಡುಪಿ: ಕೊಡವೂರು ವಾರ್ಡ್ ಸಮಿತಿ ವತಿಯಿಂದ ನಗರಸಭಾ ಸದಸ್ಯ ವಿಜಯ್ ಕೊಡವೂರು ನೇತೃತ್ವದಲ್ಲಿ ಸಂಚಾರಿ ಆಸ್ಪತ್ರೆ ಎನ್ನುವ ಕಲ್ಪನೆಯೊಂದಿಗೆ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದ್ದು, ಮಲ್ಪೆ ಸರ್ಕಾರಿ ಆಸ್ಪತ್ರೆಯ ಉಪಕೇಂದ್ರದ ಸಹಕಾರದೊಂದಿಗೆ ಮನೆಯಿಂದ ಹೊರ ಹೋಗಲು ಅಸಮರ್ಥ ರೋಗಿಗಳು, ಅಂಗವಿಕಲರು, ಹಾಗೂ ವೃದ್ಧರ ಮನೆಗಳನ್ನು ಗುರುತಿಸಿ ಮಹಿಳಾ ಸಮಿತಿಯ ಸಹಕಾರ ಹಾಗೂ ದಾನಿಗಳ ನೆರವಿನಿಂದ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿ ತಿಂಗಳು ಆಯ್ದ 13 ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಹಾಗೂ […]
ಗಿಡಮೂಲಿಕೆಗಳ ‘ರಾಣಿ’ ತುಳಸಿ ಗಿಡದ ಆರೋಗ್ಯಕಾರಿ ಪ್ರಯೋಜನಗಳು
ಭಾರತೀಯ ಪರಂಪರೆಯಲ್ಲಿ ತುಳಸಿ ಗಿಡಕ್ಕೆ ದೈವಿಕ ಸ್ಥಾನವನ್ನು ನೀಡಲಾಗಿದೆ. ತುಳಸಿ ಗಿಡವು ಆರೋಗ್ಯವರ್ಧಕವಾಗಿರುವುದರಿಂದ ಗಿಡಮೂಲಿಕೆಗಳಲ್ಲಿ ಅದಕ್ಕೆ ‘ರಾಣಿ’ಯ ಸ್ಥಾನಮಾನವನ್ನು ನೀಡಲಾಗಿದೆ. ಒತ್ತಡ ಶಮನಕಾರಿ: ತುಳಸಿಯ ಹೊಂದಿಕೆಯ ಗುಣ ಅದ್ಭುತವಾಗಿದ್ದು ಅದು ದೈಹಿಕ ಮತ್ತು ಭಾವನಾತ್ಮಕ ಒತ್ತಡಕ್ಕೆ ಹೊಂದಿಕೊಳ್ಳುತ್ತದೆ ಮಾತ್ರವಲ್ಲ ಒತ್ತಡವನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ. ಇದು ಬಾಹ್ಯ ಒತ್ತಡ- ಉಂಟುಮಾಡುವ ಅಂಶಗಳ ಪ್ರಭಾವವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ಮನಸ್ಸು ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ತುಳಸಿಯ ಶಾಂತಗೊಳಿಸುವ ಗುಣಲಕ್ಷಣಗಳು ಮನಸ್ಸಿನಲ್ಲಿ ಕ್ಷೇಮದ ಭಾವವನ್ನು ಸೃಷ್ಟಿಸುತ್ತದೆ, ಸಂಘರ್ಷ […]
ಡಿ.2 ರಂದು ಎಂಜಿಎಂ ಕಾಲೇಜಿನಲ್ಲಿ ಕನಕ ಗಾಯನ ಸ್ಪರ್ಧೆ
ಉಡುಪಿ: ಕನಕದಾಸ ಅಧ್ಯಯನ ಸಂಶೋಧನ ಪೀಠ, ಕನಕದಾಸ ಸಂಗೀತೋತ್ಸವ ಸಮಿತಿ, ಮಾಹೆ, ಎಂಜಿಎಂ ಕಾಲೇಜು ಹಗೂಸರಿಗಮ ಭಾರತಿ ಸಂಗೀತ ವಿದ್ಯಾಲಯ ಜಂಟಿ ಸಹಯೋಗದಲ್ಲಿ 44 ನೆಯ ವಾದಿರಾಜ ಕನಕದಾಸ ಸಂಗೀತೋತ್ಸವ ಕಾರ್ಯಕ್ರಮವು ಡಿ.9 ಮತ್ತು 10 ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಟಪದಲ್ಲಿ ನಡೆಯಲಿದೆ. ಆ ಪ್ರಯುಕ್ತ ಪ್ರಾಥಮಿಕ, ಪ್ರೌಢ, ಕಾಲೇಜು, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕನಕ ಗಾಯನ ಸ್ಪರ್ಧೆಯು ಡಿ.3 ರಂದು ಮಧ್ಯಾಹ್ನ 2 ಗಂಟೆಗೆ ಎಂಜಿಎಂ ಕಾಲೇಜಿನ ಆವರಣದಲ್ಲಿರುವ ಗೀತಾಂಜಲಿಯಲ್ಲಿ […]