ಎಂಸಿಸಿ ಬ್ಯಾಂಕ್ ಶತಮಾನೋತ್ತರ ದಶಮಾನೋತ್ಸವ ಸಂಭ್ರಮದ ಅದ್ದೂರಿ ಕಾರ್ಯಕ್ರಮ

ಮಂಗಳೂರು: ಎಂಸಿಸಿ ಬ್ಯಾಂಕ್ ನ ಶತಮಾನೋತ್ತರ ದಶಮಾನೋತ್ಸವ ಕಾರ್ಯಕ್ರಮವು ಭಾನುವಾರದಂದು ಮಂಗಳೂರಿನ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಿತು.

ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ದೀಪಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎಂಸಿಸಿ ಸಂಸ್ಥಾಪಕ ಪಿ.ಎಫ್.ಎಕ್ಸ್ ಸಲ್ಡಾನ ಇವರ ಭಾವಚಿತ್ರಕ್ಕೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ, ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನೀಲ್ ಲೋಬೊ ಪುಷ್ಪಾರ್ಚಣೆಯನ್ನು ನೆರವೇರಿಸಿದರು.

ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ ಎಂಸಿಸಿ ಬ್ಯಾಂಕ್ ನೂರಹತ್ತನೆ ಸಂವತ್ಸರವನ್ನು ಸಂಪೂರ್ಣಗೊಳಿಸಿ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರ, ಈ ಅಭಿವೃದ್ಧಿಗೆ ಮೂಲ ಕಾರಣ ಬ್ಯಾಂಕ್ ನೀಡಿದ ಸೇವೆ. ಎಂಸಿಸಿ ಬ್ಯಾಂಕ್ ಕೇಳಿದ್ದಕ್ಕಿಂತ ಹೆಚ್ಚು ಕೊಡುವಂತಹ ಬ್ಯಾಂಕ್ ಇದೀಗ ತನ್ನ ಲಾಭಾಂಶದಲ್ಲಿ ಅಶಕ್ತ ಕುಟುಂಬಗಳಿಗೆ ದತ್ತಿ ದೇಣಿಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗಿ ಬೆಳೆಯಲಿದೆ ಎಂದರು.

ಯಾವುದೇ ಒಂದು ಸಂಸ್ಥೆಯ ಸೇವೆ ಪರಿಪೂರ್ಣತೆಗೆ ಮೂರು ಅಂಶಗಳು ಮುಖ್ಯವಾಗಿದೆ ಉತ್ತಮ ಆಡಳಿತ, ಸಮರ್ಪಣಾ ಮನೋಭಾವದ ಸಿಬ್ಬಂದಿಗಳು, ಮತ್ತು ಗ್ರಾಹಕರು ಇದಲ್ಲಿ ಯಾವುದೇ ಒಂದು ಸಂಸ್ಥೆ ಬೆಳೆದು ನಿಲ್ಲಲು ಸಾಧ್ಯ. ಅದರಂತೆ ಮಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಎಂಸಿಸಿ ಬ್ಯಾಂಕ್, ಇದೀಗ 110 ವರ್ಷಗಳನ್ನು ಪೂರೈಸಿದೆ. ಇದಕ್ಕೆ ಇಲ್ಲಿನ ಆಡಳಿತ ಮಂಡಳಿ, ಸಿಬ್ಬಂದಿಗಳು, ಮತ್ತು ಗ್ರಾಹಕರು ಮೂಲ ಕಾರಣ. ಈ ಸಂಸ್ಥೆಯು ಇನ್ನಷ್ಟು ಯಶಸ್ಸು ಹೊಂದಿ ಅಭಿವೃದ್ಧಿ ಪಥದತ್ತ ಸಾಗಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಎಂಸಿಸಿ ಬ್ಯಾಂಕ್ ಹೆಸರು ಮೂಡಿಬರುವಂತಾಗಲಿ ಎಂದವರು ಶುಭ ಹಾರೈಸಿಸಿದರು.

ಕಾರ್ಯಕ್ರಮದಲ್ಲಿ ಆರ್ಸುಲಾಯ್ನ್ ಮದರ್ ಜನ್ರಲ್ ಸಿಸ್ಟರ್ ಮಿಲ್ಲಿ ಫರ್ನಾಂಡೀಸ್, ಬ್ಯಾಂಕ್ ನ ಮಾಜಿ ಅಧ್ಯಕ್ಷ ವೆಲೆಂಟೈನ್ ಡಿಸಿಲ್ವ, ಮಂಗಳೂರು ಎಂಸಿಸಿ‌ ಬ್ಯಾಂಕ್ ಅಧ್ಯಕ್ಷ ಅನೀಲ್ ಲೋಬೊ, ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ನಿರ್ದೇಶಕರುಗಳಾದ ಆ್ಯಂಡ್ರೂ ಡಿಸೋಜ, ಮಾರ್ಸೆಲ್ ಎಮ್ ಡಿಸೋಜ, ಜೋಸೆಫ್ ಅನಿಲ್ ಪತ್ರಾವೊ, ಹೆರಾಲ್ಡ್ ಮೊಂತೆರೋ, ಎಲ್ರೋಯ್ ಕೆ ಕ್ರಾಸ್ಟೊ, ಜೆ.ಪಿ ರೊಡ್ರಿಗಸ್, ಡೇವಿಡ್ ಡಿಸೋಜ, ರೋಶನ್ ಡಿಸೋಜ, ಡಾ. ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೋ, ಡಾ. ಫ್ರೀಡಾ ಡಿಸೋಜ, ಸಿ.ಜಿ ಪಿಂಟೊ, ಸುಶಾಂತ್ ಸಲ್ಡಾನ್ಹಾ, ಫೆಲಿಕ್ಸ್ ಡಿಕ್ರೂಜ್, ಆಲ್ವಿನ್ ಪಿ ಮೊಂತೇರೊ, ಶರ್ಮಿಳಾ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.