2023 ಕ್ಕೆ ಫ್ರೆಂಚ್ ಭವಿಷ್ಯ ದಿಗ್ದರ್ಶಕ ನಾಸ್ಟ್ರಾಡಾಮಸ್ ನುಡಿದ ಭವಿಷ್ಯವಾಣಿಗಳು ಏನನ್ನುತ್ತವೆ?
ಫ್ರೆಂಚ್ ಭವಿಷ್ಯ ದಿಗ್ದರ್ಶಕ ನಾಸ್ಟ್ರಾಡಾಮಸ್ ನಮ್ಮ ಜಗತ್ತನ್ನು ರೂಪಿಸಿದ ಅಡಾಲ್ಫ್ ಹಿಟ್ಲರ್, ಎರಡನೇ ಮಹಾಯುದ್ದ, ಸೆಪ್ಟೆಂಬರ್ 11 ರ ಭಯೋತ್ಪಾದಕ ದಾಳಿ, ಜಾನ್ ಎಫ್ ಕೆನಡಿ ಹತ್ಯೆ ಮತ್ತು ಫ್ರೆಂಚ್ ಕ್ರಾಂತಿಯಂತಹ ಹೆಗ್ಗುರುತಿನ ಘಟನೆಗಳನ್ನು ನಿಖರವಾಗಿ ಊಹಿಸಿದ್ದಾರೆ ಎಂದು ನಂಬಲಾಗಿದೆ. ಡಿಸೆಂಬರ್ 1503 ರಲ್ಲಿ ದಕ್ಷಿಣ ಫ್ರಾನ್ಸ್‌ನ ಸೇಂಟ್ ರೆಮಿ ಡಿ ಪ್ರೊವೆನ್ಸ್‌ನಲ್ಲಿ ಮೈಕೆಲ್ ಡಿ ನಾಸ್ಟ್ರಾಡೇಮ್ ಆಗಿ ಜನಿಸಿದ ಈತ ಜುಲೈ 2, 1566 ರಂದು ನಿಧನರಾದರು. ಇವರು ಬರೆದ ಪುಸ್ತಕ ಲೆಸ್ ಪ್ರೊಫೆಟೀಸ್ ಸರಿಸುಮಾರು […]
ರಾಜ್ಯಮಟ್ಟದ ಜಂಪ್ ರೋಪ್ ಸ್ಪರ್ಧೆ: ಜ್ಞಾನಸುಧಾ ವಿದ್ಯಾರ್ಥಿನಿ ಚಿನ್ಮಯಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಕಾರ್ಕಳ : ಕೊಪ್ಪಳದ ಶ್ರೀ ಕರಿಸಿದ್ದೇಶ್ವರ ಸಮುದಾಯ ಭವನದಲ್ಲಿ ಪದವಿ ಪೂರ್ವಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜರುಗಿದ ರಾಜ್ಯಮಟ್ಟದ ಜಂಪ್‌ರೋಪ್ ಕ್ರೀಡಾಸ್ಪರ್ಧೆಯಲ್ಲಿ 30 ಸೆಕೆಂಡ್ ಸ್ಪೀಡ್ ಡಬಲ್ ಅಂಡರ್ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು.ಚಿನ್ಮಯಿ.ಎಸ್.ದೇಶ್‌ಪಾಂಡೆ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಈಕೆ ಶ್ರೀನಿವಾಸ್ ದೇಶ್‌ಪಾಂಡೆ ಹಾಗೂ ಮನಸ್ವಿನಿ.ಎಸ್.ದೇಶಪಾಂಡೆ ದಂಪತಿಗಳ ಸುಪುತ್ರಿ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಸೌಜನ್ಯ ಹೆಗ್ಡೆಯವರು ಮಾರ್ಗದರ್ಶನ ಮಾಡಿದ್ದಾರೆ. ಸಾಧಕ ವಿದ್ಯಾರ್ಥಿನಿಯನ್ನುಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್ ಟ್ರಸ್ಟ್ನ […]
ಹೋಟೇಲ್ ಗಳಲ್ಲಿ ಹಸಿ ಕಸ ನಿರ್ವಹಣೆಗಾಗಿ ಬಲ್ಕ್ ವೇಸ್ಟ್ ಜಾಗೃತಿ ಕಾರ್ಯಕ್ರಮ
ಉಡುಪಿ: ನಗರ ಸಭೆ ಉಡುಪಿ ಹಾಗೂ ಸಿತಾರ ಸಂಸ್ಥೆ ದಾವಣಗೆರೆ ಇವರ ಸಹಯೋಗದಲ್ಲಿ ಸ್ವಚ್ಛ ಭಾರತ್ ಅಭಿಯಾನ (ನಗರ)ದ ಅಡಿಯಲ್ಲಿ ಬಲ್ಕ್ ವೇಸ್ಟ್ ಉತ್ಪಾದಕರಿಗೆ ಜಾಗೃತಿ ಕಾರ್ಯಕ್ರಮವು ನಗರದ ಕಿದಿಯೂರು ಹೋಟೆಲ್‌ನಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಬೀಡು ವಾರ್ಡಿನ ನಗರಸಭಾ ಸದಸ್ಯ ಟಿ.ಜಿ ಹೆಗ್ಡೆ ಮಾತನಾಡಿ, ಉಡುಪಿ ನಗರ ಸಭೆಯು ಸ್ವಚ್ಛತೆ ವಿಭಾಗದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಸ್ವಚ್ಚ ಸರ್ವೇಕ್ಷಣಾ -2022 ರಲ್ಲಿ ರಾಜ್ಯದಲ್ಲಿ ಉಡುಪಿ ನಗರವು ಮೊದಲ ಸ್ಥಾನ ಪಡೆಯಲು ನಗರ ಪ್ರದೇಶಗಳಲ್ಲಿ […]
ಶಂಕರನಾರಾಯಣ: ರಸ್ತೆ ಕಾಮಗಾರಿಗಾಗಿ ಮರಗಳ ತೆರವು; ಸಾರ್ವಜನಿಕ ಅಹವಾಲು ಸಭೆ
ಶಂಕರನಾರಾಯಣ: ಸೋಮೇಶ್ವರ-ಕೋಟೇಶ್ವರ ಜಿಲ್ಲಾ ಮುಖ್ಯ ರಸ್ತೆಯಲ್ಲಿರುವ ರಸ್ತೆ ಅಗಲೀಕರಣ ಕಾಮಗಾರಿಗೆ ಅಡಚಣೆಯಾಗುವ ಅಕೇಶಿಯಾ ಹಾಗೂ ಇತರೆ ಜಾತಿಯ 147 ಮರಗಳನ್ನು ಮತ್ತು ಕುಂದಾಪುರ ತಾಲೂಕು ಕೋಟ-ಗೋಳಿಯಂಗಡಿ ಹಾಗೂ ಬ್ರಹ್ಮಾವರ-ಜನ್ನಾಡಿ ರಸ್ತೆ ಅಗಲೀಕರಣ ಕಾಮಗಾರಿಗೆ ಅಡಚಣೆಯಾಗುವ ಒಟ್ಟು 123 ಮರಗಳನ್ನು ತೆರವುಗೊಳಿಸುವ ಹಿನ್ನೆಲೆ ನವೆಂಬರ್ 29 ರಂದು ಮಧ್ಯಾಹ್ನ 3 ಗಂಟೆಗೆ ಶಂಕರನಾರಾಯಣ ವಲಯ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ. ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಭೆಯಲ್ಲಿ ಹಾಜರಾಗಿ ಅಥವಾ ಸದ್ರಿ ದಿನಾಂಕದ ಒಳಗೆ ವೃಕ್ಷ […]
ಕರಾಟೆ ಸ್ಪರ್ಧೆ: ಮುಕುಂದಕೃಪಾ ವಿದ್ಯಾರ್ಥಿನಿ ಅಚಲಾ ರಾಷ್ಟ್ರಮಟ್ಟಕ್ಕೆ ಆಯ್ಕೆ
ಉಡುಪಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಇಲಾಖೆಗಳ ಸಹಕಾರದಲ್ಲಿ ನಡೆದ 30-40 ಕೆ. ಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಮುಕುಂದ ಕೃಪಾ ಆಂಗ್ಲ ಮಾಧ್ಯಮ ಹಿ.ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಅಚಲಾ.ಬಿ. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಸುಜಾತಾ ಶಾಂತಾರಾಮ್ ಶೆಟ್ಟಿ ಹಾಗೂ ಸೀತಾರಾಮ ಪೂಜಾರಿ ಉಪಸ್ಥಿತರಿದ್ದರು. ಈಕೆ ಗುರುಗಳಾದ ಸೀತಾರಾಮ ಪೂಜಾರಿ ಇವರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾಳೆ. ಪಲಿಮಾರು ಹಿರಿಯ ಶ್ರೀಪಾದರ ಶಿಷ್ಯರಾದ ಶ್ರೀ […]