ಕುಕ್ಕರ್ ಬಾಂಬ್ ಸ್ಪೋಟದ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹರಿಸುತ್ತೇವೆ: ಸಂಸದ ತೇಜಸ್ವಿ ಸೂರ್ಯ

ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮಾಡಬೇಕು ಎಂಬುದು ಕೆಲವರ ಉದ್ದೇಶ. ಆರ್ಥಿಕ ಶಕ್ತಿ ಕೇಂದ್ರದಲ್ಲಿ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು ಮತ್ತು ಸ್ಪೋಟದ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹಾರ ಮಾಡುತ್ತೇವೆ ಎಂದರು. ಈ ಹಿಂದೆ ಕರ್ನಾಟಕದಲ್ಲಿ ಸರಣಿ ಕೊಲೆಗಳು ನಡೆದಿದ್ದವು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವ ಕೆಲಸ ನಡೆಯುತ್ತಿದೆ. ಪಿಎಫ್ಐ ಬ್ಯಾನ್ ಮಾಡಿದಂತೆ ಭಯೋತ್ಪಾದಕರ ಬೇರು ಸಮೇತ ಕಿತ್ತು […]

ಕಾರ್ಕಳ: ನ.29 ರಂದು ಕ್ರಿಯೇಟಿವ್ ಕಾಲೇಜಿನಲ್ಲಿ ನುಡಿಹಬ್ಬ; ಡಾ. ಹಿರೇಮಗಳೂರು ಕಣ್ಣನ್ ಭಾಗಿ

ಕಾರ್ಕಳ: ಇಲ್ಲಿನ ಕ್ರಿಯೇಟಿವ್ ಕಾಲೇಜಿನ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.29 ರಂದು ಬೆಳಗ್ಗೆ 10 ಗಂಟೆಯಿಂದ ಹಿರ್ಗಾನ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ನುಡಿಹಬ್ಬ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಖ್ಯಾತ ವಾಗ್ಮಿ, ಚಿಂತಕ ಡಾ. ಹಿರೇಮಗಳೂರು ಕಣ್ಣನ್ ಭಾಗವಹಿಸಲಿದ್ದಾರೆ. ಇಂಧನ ಸಚಿವ ವಿ.ಸುನಿಲ್ ಕುಮಾರ್, ಹಿರ್ಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ನ.24 ರವರೆಗೆ ಕರಾವಳಿ ಸೇರಿದಂತೆ ಕರ್ನಾಟಕದ ಹಲವೆಡೆ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಉಡುಪಿ: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ನ.24 ರವರೆಗೆ ಕರ್ನಾಟಕದ ಹಲವೆಡೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಬೆಂಗಳೂರು, ಉಡುಪಿ, ದ.ಕ, ಉ.ಕ, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಂಗಳವಾರದಿಂದ ದಕ್ಷಿಣ ಕರ್ನಾಟಕದ ಮಂಡ್ಯ, ರಾಮನಗರ, ಮೈಸೂರು, ತುಮಕೂರು ಹಾಗೂ ಉತ್ತರ ಕರ್ನಾಟಕದ ವಿಜಯಪುರ ಮತ್ತು ಹಾವೇರಿ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಚೆಕ್ ಅಮಾನ್ಯ ಪ್ರಕರಣ: ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ

ಉಡುಪಿ:  ಕಾಪು ತಾಲೂಕಿನ ಕುರ್ಕಾಲು ಗ್ರಾಮದ ನಿವಾಸಿ, ಬಂಗೇರ ಫ್ಲೋರ್ ಮಿಲ್ಸ್ ನ ಮಾಲಕ ಆರೋಪಿ ಆಕಾಶ್ ಬಂಗೇರರಿಗೆ ಒಂದು ವರ್ಷ ಶಿಕ್ಷೆ ಹಾಗೂ  6,35,000ರೂ ಪರಿಹಾರ ಹಣವನ್ನು ಉಡುಪಿ ಫಿರ್ಯಾದಿದಾರರಾದ ಕೆ.ಎನ್.ಎಸ್.ಕಾಮತ್ ಎಂಡ್ ಸನ್ಸ್ ನ ಮಾಲಕರಾದ ಕಟಪಾಡಿಯ ಹಿರಿಯ ಪ್ರಜೆ ವಿಠಲ್ ಎನ್.ಕಾಮತ್ ರಿಗೆ ನೀಡುವಂತೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶ ಜ.ಶ್ಯಾಮ್ ಪ್ರಕಾಶ್ ರವರು ಆದೇಶಿಸಿದ್ದಾರೆ. ಚೆಕ್ ಅಮಾನ್ಯ ಪ್ರಕರಣದಲ್ಲಿ ನ.21 ಸೋಮವಾರದಂದು ಸಂಪೂರ್ಣ ವಿಚಾರಣೆ ನಡೆಸಿದ ನ್ಯಾಯಾಲಯ, […]

ಜಗತ್ತಿನ ಮೊದಲ ಸುಪರ್ ಹೀರೋ ಆಧಾರಿತ ತೆಲುಗು ಚಲನಚಿತ್ರ ‘ಹನು-ಮಾನ್’ ಟ್ರೈಲರ್ ಬಿಡುಗಡೆ: ಕೈಮುಗಿದ ನೆಟ್ಟಿಗರು

‘ಹನು ಮಾನ್’ ಪ್ರಶಾಂತ್ ವರ್ಮಾ ಬರೆದು ನಿರ್ದೇಶಿಸಿದ ಮುಂಬರುವ ಭಾರತೀಯ ತೆಲುಗು ಭಾಷೆಯ ಸೂಪರ್ ಹೀರೋ ಚಿತ್ರವಾಗಿದೆ.  ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರದಲ್ಲಿ ತೇಜ ಸಜ್ಜ ಮತ್ತು ಅಮೃತಾ ಅಯ್ಯರ್ ನಟಿಸಿದ್ದಾರೆ. ಈ ಚಿತ್ರವು ಕಾಲ್ಪನಿಕ ಗ್ರಾಮ ಅಂಜನಾದ್ರಿಯ ಮೇಲೆ ಚಿತ್ರಿತವಾಗಿದೆ ಮತ್ತು ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ ನ ಭಾಗವಾಗಿದೆ. ಕೆ ನಿರಂಜನ್ ರೆಡ್ಡಿ ಚಿತ್ರದ ನಿರ್ಮಾಪಕರಾಗಿದ್ದಾರೆ. ಚಿತ್ರವು ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಚಿತ್ರದ ಶೀರ್ಷಿಕೆಯ ಬಗ್ಗೆ ಡೆಕ್ಕನ್ ಕ್ರೋನಿಕಲ್ ಜೊತೆ ಮಾತನಾಡಿದ […]