ಗುಂಡೆಸೆತ ಸ್ಪರ್ಧೆ: ಎಕ್ಸಲೆಂಟ್ ಪ್ರೌಢಶಾಲೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
ಕುಂದಾಪುರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಡೆದ ಕುಂದಾಪುರ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎಕ್ಸಲೆಂಟ್ ಪ್ರೌಢಶಾಲೆ ಸುಣ್ಣಾರಿ ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿಗಳಾದ ಯತೀಶ್ ಶೆಟ್ಟಿ ಮತ್ತು ಸಿರಿಕಾ ಶೆಟ್ಟಿ ಇವರು ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿಯ ಅಕ್ಷರ್ ಎನ್ ಶೆಟ್ಟಿ ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳನ್ನು ಎಂ.ಎ ಹೆಗ್ಡೆ ಎಜುಕೇಶನಲ್ ಆ್ಯಂಡ್ ಚಾರೀಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ, […]
ಪ.ಜಾತಿ ಮತ್ತು ಪ. ಪಂಗಡದ ಬಗ್ಗೆ ಕಾಂಗ್ರೆಸ್ ಕೇವಲ ಮತಬ್ಯಾಂಕ್ ರಾಜಕಾರಣ ಮಾಡಿದೆ: ಬಿ ಶ್ರೀರಾಮುಲು
ಬಳ್ಳಾರಿ: ಹಲವು ದಶಕಗಳ ಕಾಲ ಆಳ್ವಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡಗಳ ಬಗ್ಗೆ ಕೇವಲ ಮತಬ್ಯಾಂಕ್ ರಾಜಕಾರಣ ಮಾಡಿದ್ದರು. ಈ ಸಮುದಾಯಗಳ ಕುರಿತು ಶಕುನಿ ವಾತ್ಸಲ್ಯವನ್ನು ಪ್ರದರ್ಶನ ಮಾಡಿದ್ದರು ಎಂದು ರಾಜ್ಯದ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟೀಕಿಸಿದ್ದಾರೆ. ಬಳ್ಳಾರಿಯಲ್ಲಿ ನ 20ರಂದು ಬಿಜೆಪಿ ಎಸ್.ಟಿ. ಮೋರ್ಚಾ ನವಶಕ್ತಿ ಸಮಾವೇಶ ನಡೆಯುವ ಸ್ಥಳವನ್ನು ಪರಿಶೀಲಿಸಿದ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಮುಖ್ಯಮಂತ್ರಿ ಬಸವರಾಜ […]
ಅಂಕೋಲಾದಲ್ಲೂ ಕಾಂತಾರ ಪಂಜುರ್ಲಿ ದೈವದ ಕಲರವ: ಕಲಾವಿದನ ಕೈಯಲ್ಲಿ ಮೂಡಿದ ಸುಂದರ ಕಲಾಕೃತಿ
ಅಂಕೋಲಾ: ಇಲ್ಲಿನ ಅವರ್ಸಾದಲ್ಲಿ ಕಲಾವಿದ ದಿನೇಶ್ ಮೇತ್ರಿಯವರ ಕೈಚಳಕದಲ್ಲಿ ಕಾಂತಾರದ ಪಂಜುರ್ಲಿ-ಗುಳಿಗ ದೈವದ ಕಲಾಕೃತಿಯೊಂದು ಮೂಡಿದ್ದು ಜನಮನ ಸೂರೆಗೊಂಡಿದೆ. ಈ ಕಲಾಕೃತಿಯನ್ನು ಅಮರ್ ನಾಯ್ಕ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.
ಮೋದಿ ಕನಸಿನ ಸದೃಢ ಸ್ವಾವಲಂಬಿ ‘ಹೊಸ ಭಾರತ’ಕ್ಕಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ: ರಾಜನಾಥ್ ಸಿಂಗ್
ಮಣಿಪಾಲ: ಯುವಕರು ಹೊಸ ಆವಿಷ್ಕಾರ, ತಂತ್ರಜ್ಞಾನಗಳನ್ನು ಅಭಿವೃದ್ದಿ ಪಡಿಸಿ ಹೊಸ ಕಂಪನಿ, ಸಂಶೋಧನಾ ಸಂಸ್ಥೆ ಮತ್ತು ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲಿಷ್ಠ ಮತ್ತು ಸ್ವಾವಲಂಬಿ ‘ಹೊಸ ಭಾರತ’ದ ಕನಸನ್ನು ಸಾಕಾರಗೊಳಿಸಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ ಕರೆ ನೀಡಿದರು. ಅವರು ಶುಕ್ರವಾರದಂದು ಮಾಹೆಯ 30 ನೇ ಘಟಿಕೋತ್ಸವದ ಮೊದಲನೆ ದಿನ ಮತ್ತು ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ಹೊಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಯುವಕರ ಶಕ್ತಿಯನ್ನು ಜಗತ್ತೇ ಗುರುತಿಸುತ್ತಿದೆ. […]
ಉಡುಪಿ: ವೃತ್ತಗಳ ಮರು ನಾಮಕರಣ; ರಾಜ್ಯ ಸರ್ಕಾರ ಆದೇಶ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಪ್ರಮುಖ ವೃತ್ತಗಳಿಗೆ ನಾಮಕರಣ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಪುರಸಭೆಗಳ ಅಧಿನಿಯಮ 1964-211ರ ಅನ್ವಯ ನಾಮಕರಣ ಮಾಡಲು ಸರ್ಕಾರ ಅನುಮತಿ ನೀಡಿ ಆದೇಶಿಸಿದೆ. ಬನ್ನಂಜೆ ವೃತ್ತವು ನಾರಾಯಣಗುರು ವೃತ್ತ, ಕಲ್ಸಂಕ ವೃತ್ತವು ಮಧ್ವಾಚಾರ್ಯ ವೃತ್ತ, ಡಯಾನಾ ವೃತ್ತವು ವಾದಿರಾಜ ವೃತ್ತ, ಸಂತೆಕಟ್ಟೆ ಕಲ್ಯಾಣಪುರ ರಸ್ತೆ ಜಂಕ್ಷನ್ ಅನ್ನು ಕೋಟಿ ಚೆನ್ನಯ್ಯ ವೃತ ಹಾಗೂ ಬ್ರಹ್ಮಗಿರಿ ದೊಡ್ಡ ವೃತ್ತವು ಆಸ್ಕರ್ ಫೆರ್ನಾಂಡಿಸ್ ವೃತ್ತ ಎಂದು ಮರುನಾಮಕರಣ ಮಾಡಲಾಗಿದೆ. ಪರ್ಕಳದಿಂದ ಕೋಡಂಗೆ ಹಾಗೂ […]