ಬ್ರಹ್ಮಾವರ: ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ರಕ್ಷಣೆಯ ಕುರಿತು ಅರಿವು ಕಾರ್ಯಕ್ರಮ

ಬ್ರಹ್ಮಾವರ: ಚೈಲ್ಡ್ ಲೈನ್-1098, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ರೋಟರಿ ಉಡುಪಿ ಇವರ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಅಂಗವಾಗಿ ಸರ್ಕಾರಿ ಪ್ರಾಥಮಿಕ ಶಾಲೆ ಬ್ರಹ್ಮಾವರ ಇಲ್ಲಿ ಮಕ್ಕಳ ರಕ್ಷಣೆಯ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಧನ್ವಂತರಿ ನರ್ಸಿಂಗ್ ಕಾಲೇಜಿನ […]
ಸರಕಾರಿ ಶಾಲೆ ಉಳಿಸಿ ದೇಶದ ಸಂಸ್ಕೃತಿಯನ್ನು ಬೆಳೆಸಿ: ವಿಜಯ್ ಕೊಡವೂರು

ಉಡುಪಿ: ತಾಲೂಕಿನ ಸುಬ್ರಮಣ್ಯ ಹಿಲ್ 19 ನೆಯ ಶಾಲೆಗೆ ಉಚಿತ ಅಪಘಾತ ವಿಮೆಯನ್ನು ನ.14 ರಂದು ವಿಜಯ್ ಕೊಡವೂರು ಇವರ ಸಂಯೋಜನೆಯಲ್ಲಿ ದಾನಿಗಳಾದ ಅಪೂರ್ವ ಪುತ್ತೂರು ತಂಡದ ಸಹಕಾರದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಕೊಡವೂರು, ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕು. ವಿದ್ಯಾಭ್ಯಾಸದ ಜೊತೆಯಲ್ಲಿ ನಮ್ಮ ದೇಶದ ಪರಂಪರೆ ಮತ್ತು ಇತಿಹಾಸವನ್ನು ನೆನಪಿಸುವ ಮೂಲಕ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸಲಾಗುತ್ತಿದೆ. ಆದುದರಿಂದ ನಾವು ಸರಕಾರಿ ಶಾಲೆಗಳನ್ನು ಉಳಿಸುವ ಅವಶ್ಯಕತೆ ಇದೆ. ಉಡುಪಿ ಜಿಲ್ಲೆಯ ಎಲ್ಲ […]
ನ. 19 ರಂದು ಬೆಳ್ಳೆ ಗ್ರಾಮದಲ್ಲಿ ಡಿಸಿ ಗ್ರಾಮ ವಾಸ್ತವ್ಯ

ಉಡುಪಿ: ಕಾಪು ತಾಲೂಕಿನ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳೆ ಗ್ರಾಮದ ಗೀತಾಮಂದಿರ ಇಲ್ಲಿ ನವೆಂಬರ್ 19 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಲಿದ್ದು, ಬೆಳ್ಳೆ ಗ್ರಾಮಕ್ಕೆ ಒಳಪಡುವ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಮುಂಚಿತವಾಗಿ ಗ್ರಾಮದ ಗ್ರಾಮಕರಣಿಕರ ಕಚೇರಿಗೆ ನೀಡುವಂತೆ ಹಾಗೂ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 21 ರಿಂದ ಭತ್ತ ಖರೀದಿ ನೋಂದಣಿ ಕೇಂದ್ರ ಆರಂಭ: 7 ಕಡೆಗಳಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪನೆ

ಉಡುಪಿ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕುರಿತು ಮಂಗಳವಾರದಂದು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಲಾಯಿತು. ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಸ್ಥಳೀಯವಾಗಿ ಬೆಳದಿರುವ ಭತ್ತವನ್ನು ಖರೀದಿಸಲು ನವೆಂಬರ್ 21 ರಿಂದ ನೋಂದಣಿ ಕೇಂದ್ರಗಳನ್ನು ತೆರೆದು, ರೈತರ ನೋಂದಣಿಯನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯವಾಗಿ ಬೆಳೆಯುವ ಭತ್ತದ ತಳಿಗಳಾದ ಕಜೆ,ಜಯ,ಜ್ಯೋತಿ,ಪಂಚಮುಖಿ,ಸಹ್ಯಾದ್ರಿ, ಉಷಾ,ಅಭಿಲಾಷ,ಎಂಓ4 ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದ್ದು,ಸಾಮಾನ್ಯ ಭತ್ತಕ್ಕೆ ರೂ.2540.00 ದರ ನಿಗದಿಪಡಿಸಲಾಗಿದೆ. ಜಿಲ್ಲೆಯಾದ್ಯಂತ ರೈತರಿಗೆ ಅನುಕೂಲ […]
ಮಣಿಪಾಲ: ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರ

ಮಣಿಪಾಲ: ಪ್ರತಿ ವರ್ಷ ನವೆಂಬರ್ 14 ಅನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಅಂತಃಸ್ರಾವಶಾಸ್ತ್ರ ವಿಭಾಗವು ಸೋಮವಾರದಂದು ಬೃಹತ್ ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. “ನಾಳೆಯನ್ನು ರಕ್ಷಿಸಲು ಮದುಮೇಹ ಶಿಕ್ಷಣ” ಈ ವರ್ಷದ ಧ್ಯೇಯ ವಾಕ್ಯವಾಗಿದೆ. ವಿಶ್ವ ಮಧುಮೇಹ ದಿನವು ಮಧುಮೇಹವನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಜಾಗೃತಿ ಮೂಡಿಸಲು ಅವಕಾಶವನ್ನು ಒದಗಿಸುತ್ತದೆ ಮತ್ತು ಇದರ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು […]