ಕಾರ್ಕಳ: ಛತ್ರಪತಿ ಶಿವಾಜಿ ಮಹಾರಾಜರ 12 ಅಡಿ ಪುತ್ಥಳಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ
ಕಾರ್ಕಳ: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಬೆಂಗಳೂರು ಇದರ ಕಾರ್ಕಳ ತಾಲೂಕು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಕಳ ಬೈಪಾಸ್ ರಸ್ತೆ ಶ್ರೀ ಭವಾನಿ ಮಿಲ್ ಬಳಿ ಛತ್ರಪತಿ ಶಿವಾಜಿ ಮಹಾರಾಜರ 12 ಅಡಿ ಎತ್ತರದ ಪುತ್ಥಳಿಯುಳ್ಳ ವೃತ್ತ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಶನಿವಾರದಂದು ನಡೆಯಿತು. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ಬೈಕ್ ಜಾಥಾ ನಡೆಯಿತು. ಕೃಪೆ: ವಿ. ಸುನಿಲ್ ಕುಮಾರ್/ಟ್ವಿಟರ್
ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಮೇಕಿಂಗ್ ಫೋಟೋ ಬಿಡುಗಡೆ
ಹೇಮಂತ್ ಎಂ ರಾವ್ ಕಥೆ ಮತ್ತು ನಿರ್ದೇಶನ ಹಾಗೂ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ನಟನೆ ಮತ್ತು ನಿರ್ಮಾಣದ ‘ಸಪ್ತ ಸಾಗರದಾಚೆ ಎಲ್ಲೋ’ ಚಲನಚಿತ್ರವು ಸೆಟ್ಟೇರಿದ್ದು, ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಸಿನಿಮಾದ ಮೇಕಿಂಗ್ ಫೋಟೋಗಳನ್ನು ರಕ್ಷಿತ್ ಶೆಟ್ಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ‘ಮನು’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಹೊಸತನದೊಂದಿಗೆ ಬರುವ ರಕ್ಷಿತ್ ಈ ಬಾರಿ ಹೊಸತೇನನ್ನು ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಕ್ಷಿತ್‌ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ […]
ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬಂಧಿತರ ಸಂಖ್ಯೆ 14 ಕ್ಕೆ ಏರಿಕೆ
ಮಂಗಳೂರು: ಜುಲೈ 26 ರಂದು ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಶನಿವಾರದಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ ಎಂದು ವರದಿಯಾಗಿದೆ. ಸುಳ್ಯ ನಿವಾಸಿ ಶಾಹಿದ್ ಬೆಳ್ಳಾರೆ ಬಂಧಿತ ಆರೋಪಿ ಎನ್ನಲಾಗಿದೆ. ಸುಳ್ಯದ ಶಾಹಿದ್ ಬೆಳ್ಳಾರೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಮತ್ತು ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆಯ ಸಂಬಂಧಿಕನಾಗಿದ್ದಾನೆ ಎನ್ನಲಾಗಿದೆ. […]
ಬಹುಮುಖ ಪ್ರತಿಭೆ ಮುದ್ದು ಮೂಡುಬೆಳ್ಳೆಯವರಿಗೆ ರಂಗ ಚಾವಡಿ 2022 ಪ್ರಶಸ್ತಿ
ಮಂಗಳೂರು: ಪ್ರತಿಷ್ಠಿತ ರಂಗ ಚಾವಡಿ 2022ರ ಪ್ರಶಸ್ತಿಗೆ ಸಾಹಿತಿ, ಜಾನಪದ ವಿದ್ವಾಂಸ ಮುದ್ದು ಮೂಡುಬೆಳ್ಳೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ನವಂಬರ್ 20 ರಂದು ಭಾನುವಾರ ಸಂಜೆ 4.30ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಇವರು ತನ್ನ16 ನೇ ವಯಸ್ಸಿನಿಂದ ಜಾನಪದ ಸಾಹಿತ್ಯದ ಕಡೆಗೆ ಆಕರ್ಷಿತರಾಗಿದ್ದಾರೆ. ಸರಕಾರದ ನ್ಯಾಯಾಂಗ ಹಾಗೂ ಪ್ರಸಾರ ಇಲಾಖೆಯಲ್ಲಿ ಹಾಗೂ ಆಕಾಶವಾಣಿಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಮಂಗಳೂರು ವಿಶ್ವವಿದ್ಯಾಲಯದ ಶ್ರೀ ನಾರಾಯಣ ಗುರು ಅಧ್ಯಯನ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿಯೂ […]
ಸಹಕಾರಿ ಸಪ್ತಾಹ: ಲಾಂಛನ ಬಿಡುಗಡೆ, ಸಹಕಾರಿ ರಥಕ್ಕೆ ಚಾಲನೆ
ಉಡುಪಿ: ರಾಜ್ಯ ಮಟ್ಟದ 69ನೇ ಅಖಿಲ ಭಾರತ ಸಹಕಾರಿ ಸಪ್ತಾಹ ನವೆಂಬರ್ 14 ರಿಂದ 21ರವರೆಗೆ ನಡೆಯಲಿದ್ದು, ಸಹಕಾರಿ ಸಪ್ತಾಹದ ಅಂಗವಾಗಿ ಉಡುಪಿಯ ಪುರಭವನದ ಆವರಣದಲ್ಲಿ ಸಹಕಾರಿ ರಥಕ್ಕೆ ಉಡುಪಿ ನಗರ ಸಭಾ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ನಾಯಕ್, ಸಹಕಾರಿ ಧ್ವಜವನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿಯವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸಹಕಾರಿ ಲಾಂಛನವನ್ನು (ಪಿನ್) ಉದ್ಯಮಿ ಪಿ. ಪುರುಶೋಥಮ್ ಶೆಟ್ಟಿ ಬಿಡುಗಡೆಗೊಳಿಸಿದರು. ಈ […]