ಸಹಕಾರಿ ಸಪ್ತಾಹ: ಲಾಂಛನ ಬಿಡುಗಡೆ, ಸಹಕಾರಿ ರಥಕ್ಕೆ ಚಾಲನೆ

ಉಡುಪಿ: ರಾಜ್ಯ ಮಟ್ಟದ 69ನೇ ಅಖಿಲ ಭಾರತ ಸಹಕಾರಿ ಸಪ್ತಾಹ ನವೆಂಬರ್ 14 ರಿಂದ 21ರವರೆಗೆ ನಡೆಯಲಿದ್ದು, ಸಹಕಾರಿ ಸಪ್ತಾಹದ ಅಂಗವಾಗಿ ಉಡುಪಿಯ ಪುರಭವನದ ಆವರಣದಲ್ಲಿ ಸಹಕಾರಿ ರಥಕ್ಕೆ ಉಡುಪಿ ನಗರ ಸಭಾ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ನಾಯಕ್, ಸಹಕಾರಿ ಧ್ವಜವನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿಯವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸಹಕಾರಿ ಲಾಂಛನವನ್ನು (ಪಿನ್) ಉದ್ಯಮಿ ಪಿ. ಪುರುಶೋಥಮ್ ಶೆಟ್ಟಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಬೆಳಪು, ಅಲೆವೂರು ಹರೀಶ್ ಕಿಣಿ, ರವಿರಾಜ್ ಹೆಗ್ಡೆ ಕೊಡವೂರು , ಚಂದ್ರಹಾಸ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.