ಮಣಿಪಾಲ: ತಪೋವನ ವತಿಯಿಂದ ಕಥಾಕಮ್ಮಟ ಕಾರ್ಯಾಗಾರ
ಮಣಿಪಾಲ: ನವೆಂಬರ್ 27 ರಂದು ತಪೋವನ ಮತ್ತು ಚಂದ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ಹೊಸ ಕಥೆಗಾರರಿಗಾಗಿ ಖ್ಯಾತ ಸಾಹಿತಿ ವಸುಧೇಂದ್ರ ಅವರಿಂದ ಕಥಾ ಕಮ್ಮಟ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಾಗಾರದ ಶುಲ್ಕ 1000ರೂ. ಊಟೋಪಚಾರದ ವ್ಯವಸ್ಥೆ ಇದೆ. ಹೆಚ್ಚಿನ ವಿವರಗಳಿಗಾಗಿ 8762563517 ಅನ್ನು ಸಂಪರ್ಕಿಸುವಂತೆ ರೇವತಿ ನಾಡಿಗೇರ್ ತಿಳಿಸಿದ್ದಾರೆ.
ಡೈನೋಸಾರ್‌ಗಳನ್ನು ಕೊಂದ ಬೃಹತ್ ಕ್ಷುದ್ರಗ್ರಹದ ಪ್ರಭಾವವು ತಿಂಗಳುಗಳ ಕಾಲ ಬೃಹತ್ ಭೂಕಂಪಗಳನ್ನು ಭೂಮಿಯಾದ್ಯಂತ ಸೃಷ್ಟಿಸಿತ್ತು!
ಸುಮಾರು 66 ಮಿಲಿಯನ್ ವರ್ಷಗಳ ಹಿಂದೆ, ಯುಕಾಟಾನ್ ಪರ್ಯಾಯ ದ್ವೀಪದ ಬಳಿ ಸುಮಾರು 6.2 ಮೈಲುಗಳಷ್ಟು (10 ಕಿಲೋಮೀಟರ್) ದೊಡ್ಡದಾಗಿರುವ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಿತ್ತು. ಈ ಕ್ಷುದ್ರಗ್ರಹದ ಬಡಿತ ಹೇಗಿತ್ತೆಂದರೆ ಸಂಪೂರ್ಣ ಭೂಗ್ರಹವು ಕತ್ತಲೆಯಲ್ಲಿ ಮುಳುಗಿತ್ತು ಮತ್ತು ಭೂಮಿಯ ಮೇಲಿನ 80% ಪ್ರಾಣಿಗಳ ಜೀವಿತಾವಧಿಯನ್ನು ನಾಶಮಾಡುವಂತಹ ಸಾಮೂಹಿಕ ಅಳಿವಿಗೆ ಕಾರಣವಾಗಿತ್ತು. ಭೂಮಿಯ ಮೇಲಿನ ಬೃಹದಾಕಾರದ ಪ್ರಾಣಿಗಳಾಗಿದ್ದ ಡೈನೋಸಾರ್ ಗಳನ್ನು ಈ ಕ್ಷುದ್ರಗ್ರಹವು ಹೇಳಹೆಸರಿಲ್ಲದಂತೆ ನಾಶಮಾಡಿ ಬಿಟ್ಟಿತ್ತು. ಜಿಯೋಲಾಜಿಕಲ್ ಸೊಸೈಟಿ ಆಫ್ ಅಮೇರಿಕಾದ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಿದ ಹೊಸ […]
ಪ್ರಾಚೀನ ಭಾರತದ ನಳಂದವೇ ಬೌದ್ಧ ಜ್ಞಾನದ ಪ್ರಮುಖ ಕೇಂದ್ರವಾಗಿತ್ತು: ನಿಕೋಲಸ್ ವ್ರೀಲ್ಯಾಂಡ್
ಮಣಿಪಾಲ: ಟಿಬೆಟಿಗೆ ಬೌದ್ಧ ಧರ್ಮವು ಜೀವನದ ಸಂಕೋಲೆಗಳಿಂದ ಮುಕ್ತಿ ಮತ್ತು ಜ್ಞಾನದ ಸಂದೇಶವನ್ನು ಹೊತ್ತು ಭಾರತದಿಂದಲೇ ವಿಸ್ತರಿಸಿದೆ. ಪ್ರಾಚೀನ ಭಾರತದ ನಳಂದವೇ ಬೌದ್ಧ ಜ್ಞಾನದ ಪ್ರಮುಖ ಕೇಂದ್ರವಾಗಿತ್ತು ಮತ್ತು ಪದ್ಮಸಂಭವ ಅಲ್ಲಿನ ಬೌದ್ಧ ಧರ್ಮಗುರುವಾಗಿ ಟಿಬೆಟ್ ನಲ್ಲಿ ಬೌದ್ಧಧರ್ಮವನ್ನು ವಿಸ್ತರಿಸಿದರು ಎಂದು ನಂಬಲಾಗಿದೆ. ತಾತ್ವಿಕವಾಗಿ, ಬೌದ್ಧಧರ್ಮವು ಪರಿಸರಾತ್ಮಕ ದೃಷಿಕೋನ ಮತ್ತು ಜೀವನ ವಿಧಾನವನ್ನು ಪ್ರತಿಪಾದಿಸುತ್ತದೆ ಮತ್ತು ಪ್ರಸ್ತುತ ನಡೆಯುತ್ತಿರುವ COP27 ಸಮ್ಮೇಳನದ ತತ್ವ ಗಳನ್ನು ಒಳಗೊಂಡಂತೆ ಜಗತ್ತನ್ನು ಪ್ರಾಕೃತಿಕ ಸುಸ್ಥಿರತೆಯತ್ತ ಕೊಂಡೊಯ್ಯುವ ಪ್ರಯತ್ನಗಳಿಗೆ ಇದೊಂದು ದಾರಿಯಾಗಿದೆ ಎಂದು […]
ಶಿಕ್ಷಕರ ಅರ್ಹತಾ ಪರೀಕ್ಷೆ-2022 ಕೀ ಉತ್ತರ ಪ್ರಕಟಣೆ: ನ. 17ರ ವರೆಗೆ ಆಕ್ಷೇಪಣೆಗೆ ಅವಕಾಶ
ಶಿಕ್ಷಕರ ಅರ್ಹತಾ ಪರೀಕ್ಷೆಯ (ಟಿಇಟಿ-2022) ಕೀ ಉತ್ತರಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಕೀ ಉತ್ತರಗಳಿಗೆ ನವೆಂಬರ್ 17ರ ಸಂಜೆ 5.30ರ ವರೆಗೆ ಆಕ್ಷೇಪ ಸಲ್ಲಿಸಬಹುದಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಬೆಳೆ ವಿಮಾ ಮೊತ್ತ ಪಾವತಿ ಬಾಕಿಯಿದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ: ತೋಟಗಾರಿಕಾ ಇಲಾಖೆ
ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಹವಾಮಾನಾಧಾರಿತ ಬೆಳೆವಿಮೆ ಯೋಜನೆಯಡಿ ಪ್ರಸಕ್ತ ಸಾಲಿನ ಅಕ್ಟೋಬರ್ 31 ರಿಂದ ಅಗ್ರಿಕಲ್ಚರ್ ಇನ್ಸೂರೆನ್ಸ್ ವಿಮಾ ಕಂಪನಿಯ ವತಿಯಿಂದ ರೈತರ ಖಾತೆಗೆ ಕ್ಲೇಮ್ ಮೊತ್ತವು ಜಮೆ ಆಗುತ್ತಿದ್ದು, ಬೈಂದೂರು ತಾಲೂಕಿನಲ್ಲಿ ವಿಮೆ ಮಾಡಿಸಿದ 9 ಗ್ರಾಮ ಪಂಚಾಯತ್‌ನ 1114 ರೈತ ವಿಮಾ ಪ್ರಕರಣಗಳಿಗೆ ರೂ. 113,87,406 (1 ಕೋಟಿ 13 ಲಕ್ಷ), ಹೆಬ್ರಿ ತಾಲೂಕಿನ ಬೆಳ್ವೆ ಮತ್ತು ಮಡಾಮಕ್ಕಿ ಗ್ರಾಮಗಳ 48 ರೈತರ ವಿಮಾ ಪ್ರಕರಣಗಳಿಗೆ ರೂ. 17,35,077(17.35 ಲಕ್ಷ), ಕುಂದಾಪುರ ತಾಲೂಕಿನ […]