ಮುಂದಿನ ಎರಡು ದಿನಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯ ಸೂಚನೆ ನೀಡಿದ ಹವಾಮಾನ ಇಲಾಖೆ

ಉಡುಪಿ: ನ.4 ಮತ್ತು 5 ರಂದು ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚು ಸಂಭವಿಸುವ ಜೊತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ನ.7ರಂದು ಕಾಪುವಿನಲ್ಲಿ ಬಿಜೆಪಿ ಜಿಲ್ಲಾ ಜನಸಂಕಲ್ಪ ಸಮಾವೇಶ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಜಿಲ್ಲಾ ಬಿಜೆಪಿ ಜನಸಂಕಲ್ಪ ಸಮಾವೇಶವು ನ.7ರಂದು ಬೆಳಿಗ್ಗೆ 10.30ಕ್ಕೆ ಕಾಪು ಬಸ್ ನಿಲ್ದಾಣದ ಬಳಿ ಹಾಗೂ ಸಂಜೆ 4ಕ್ಕೆ ಕುಂದಾಪುರ ತಾಲೂಕಿನ ತ್ರಾಸಿ ಮುಳ್ಳಿಕಟ್ಟೆ ರಾ.ಹೆ. ಬಳಿ ನಡೆಯಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಗುರುವಾರದಂದು ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ, ತ್ರಾಸಿಯಲ್ಲಿ ನಡೆಯುವ ಜನಸಂಕಲ್ಪ ಸಮಾವೇಶದ ಪೂರ್ವಭಾವಿಯಾಗಿ ಬೈಂದೂರು […]
ಕಿನ್ನಿಗೋಳಿ: ಪಾದಾಚಾರಿ ಮಹಿಳೆಗೆ ಗುದ್ದಿದ ಕಾರು; ಗಂಭೀರ ಗಾಯ

ಕಿನ್ನಿಗೋಳಿ: ದಾರಿಯಲ್ಲಿ ನಡೆದುಕೊಂದು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಕಾರೊಂದು ಗುದ್ದಿದ್ದು, ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಗಾಯಗೊಂಡ ಮಹಿಳೆಯನ್ನು ಕೆಮ್ರಾಲ್ ಮನೋಲಿ ಬಲ್ಲೆ ನಿವಾಸಿ ಜಯಂತಿ ಶೆಟ್ಟಿ ಎಂದು ಗುರುತಿಸಲಾಗಿದೆ. ಗುರುವಾರದಂದು ಕಿನ್ನಿಗೋಳಿ ಚರ್ಚ್ ಬಳಿ ಸಂತೆ ಮಾರುಕಟ್ಟೆ ನಡೆಯುತ್ತಿದ್ದು, ಜಯಂತಿ ಶೆಟ್ಟಿ ಎಂಬವರು ತರಕಾರಿ ಹಿಡಿದುಕೊಂಡು ನಡೆದು ಬರುತ್ತಿದ್ದ ಸಂದರ್ಭದಲ್ಲಿ ಕಿನ್ನಿಗೋಳಿ ಪೇಟೆಯಿಂದ ಮೂರುಕಾವೇರಿ ಕಡೆಗೆ ವೇಗವಾಗಿ ತೆರಳುತ್ತಿದ್ದ ಬ್ರೀಜಾ ಕಾರು ಮಹಿಳೆಗೆ ಗುದ್ದಿದ್ದು, ಮಹಿಳೆಯು ಎತ್ತಿ ಎಸೆಯಲ್ಪಟ್ಟಿರುವುದರಿಂದ ಗಂಭೀರ ಗಾಯಗಳಾಗಿವೆ. ಕಾರು ಪಕ್ಕದ ಕಟ್ಟೆಗೆ ಡಿಕ್ಕಿ […]
ಪಂಚಾಗಾನುಸಾರ ದ್ವಾದಶಿ ತುಳಸಿ ಪೂಜೆಯ ಆಚರಣೆ

ನ. 4 ಶುಕ್ರವಾರದಂದು ಸಂಜೆ 6.59 ಕ್ಕೆ ಏಕಾದಶಿ ಮುಗಿದು ದ್ವಾದಶಿ ಪ್ರಾರಂಭವಾಗುವುದರಿಂದ ತುಳಸಿ ಪೂಜೆಯನ್ನು ಅಂದು ಸಂಜೆ 6.59 ನಂತರ ಮಾಡಬಹುದು. ಬೆಳಿಗ್ಗೆ ತುಳಸಿ ಪೂಜೆ ಮಾಡುವವರು ನ. 5 ರಂದು ಶನಿವಾರ ಬೆಳಿಗ್ಗೆ ಮಾಡಬಹುದು. ಅಂದು ಸಂಜೆ 5.30 ರವರೆಗೆ ದ್ವಾದಶಿ ಇರುವುದು. (ಸೂರ್ಯ ಸಿದ್ದಾಂತ ಪಂಚಾಂಗ, ಮೊಗೇರಿ)
ಯುಕೆಯ ಕೇಂಬ್ರಿಡ್ಜ್ ನಲ್ಲೂ ಕಾಂತಾರ ಕಲರವ: ಕನ್ನಡಿಗರ ತಂಡದಿಂದ ಕಾಂತಾರ ವೀಕ್ಷಣೆ

ಕೇಂಬ್ರಿಡ್ಜ್: ಯುನೈಟೆಡ್ ಕಿಂಗ್ಡಮ್ ನ ಕೇಂಬ್ರಿಡ್ಜಿನ ವ್ಯೂ ಸಿನಿಮಾ ಹಾಲ್ ನಲ್ಲಿ ಮಂಗಳವಾರ ರಾತ್ರಿಯಂದು 50 ಜನರ ಕನ್ನಡಿಗರ ತಂಡವು ಕಾಂತಾರ ಸಿನಿಮಾವನ್ನು ವೀಕ್ಷಿಸಿ ಆನಂದಿಸಿದೆ. ಯುಕೆ ನ ಕೇಂಬ್ರಿಡ್ಜ್ ನಲ್ಲಿ ನೆಲೆಸಿರುವ ಕನ್ನಡಿಗರ ತಂಡವು ಖಾಸಗಿ ಸಿನಿಮಾ ಪ್ರದರ್ಶನವನ್ನು ಏರ್ಪಡಿಸಿದ್ದು, ನೆಲ-ಜಲದಿಂದ ದೂರವಿದ್ದರೂ ಬೇರುಗಳನ್ನು ಭದ್ರವಾಗಿ ಹಿಡಿದಿಟ್ಟಿದ್ದರ ಕುರುಹಾಗಿ ಕಾಂತಾರ ಚಿತ್ರ ನೋಡಿ ಸಂಭ್ರಮಿಸಿದ್ದಾರೆ. ಗುರುವಾರದಂದು ಮಗದೊಂದು ಪ್ರದರ್ಶನವನ್ನು ಏರ್ಪಾಡು ಮಾಡಿದ್ದು, ತಂಡವು ಕಾಂತಾರ ಗುಂಗಿನಿಂದ ಹೊರಬಂದಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಕೃಪೆ: ನವೀನ್ ಕ್ಯಾಸ್ಟಲೀನೊ