ಅರೆಹೊಳೆ ಪ್ರತಿಷ್ಠಾನದಿಂದ ನಂದಗೋಕುಲ ದೀಪಾವಳಿ ಸಂಭ್ರಮ
ಮಂಗಳೂರು: ಎಲ್ಲರೂ ಒಂದಾಗಿ ಸಂಭ್ರಮಿಸುವ ಹಬ್ಬಗಳು ಭಾಂದವ್ಯವನ್ನು ಗಟ್ಟಿಗೊಳಿಸುತ್ತವೆ ಎಂದು ಫ್ಲೋರಿಡಾ ತುಳು ಎಸೋಸಿಯೇಷನ್ ಸಂಸ್ಥಾಪಕಿ ಶ್ರೀವಲ್ಲಿ ರೈ ಮಾರ್ಟಲ್ ಹೇಳಿದರು. ಅವರು ಅರೆಹೊಳೆ ಪ್ರತಿಷ್ಠಾನ ಆಯೋಜಿಸಿದ್ದ ನಂದಗೋಕುಲ ದೀಪಾವಳಿ ಸಂಭ್ರಮದಲ್ಲಿಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿಅರೆಹೊಳೆ ಪ್ರತಿಷ್ಠಾನವು ಪ್ರತಿವರ್ಷ ಬಾಲಪ್ರತಿಭೆಗಳಿಗೆ ನೀಡುವ ನಂದಗೋಕುಲ ದೀಪಾವಳಿ ಪುರಸ್ಕಾರವನ್ನು ತುಮಕೂರಿನ ಬಾಲಪ್ರತಿಭೆ ಆರ್ಯ ಆರ್ ಭಟ್ ಇವರಿಗೆ ನೀಡಲಾಯಿತು. ಇನ್ನೂರ್ವ ಅತಿಥಿ ದಿನೇಶ್ ಹೊಳ್ಳ ಮಾತನಾಡಿ, ಮಕ್ಕಳನ್ನು ಪ್ರೊತ್ಸಾಹಿಸುವ ಅರೆಹೊಳೆ ಪ್ರತಿಷ್ಠಾನದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಧರ್ಮದರ್ಶಿ ಡಾ. ಹರಿಕೃಷ್ಣ […]
ಬೆಳ್ಮ ಗ್ರಾಮದ ವತಿಯಿಂದ 67 ನೇ ಕರ್ನಾಟಕ ರಾಜ್ಯೋತ್ಸವ
ಮಂಗಳೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆಯವರ ಸಲಹೆ ಸೂಚನೆಯ ಮೇರೆಗೆ ‘ಮನೆಯಂಗಳದಲ್ಲಿ ರಾಜ್ಯೋತ್ಸವ’ ಕಾರ್ಯಕ್ರಮವು ಶ್ರೀಮತಿ ರಾಧಿಕಾ ಶ್ರೀಧರ್ ರವರ ಅಡ್ಕರೆ ಪಡ್ಪುವಿನ ಪಂಜಿಲಪಾಲ್ ಮನೆಯಲ್ಲಿ ಜರುಗಿತು. ವಿದ್ಯಾರ್ಥಿ ವಿದ್ಯಾರ್ಥಿನಿಯರು ನಾಡ ಗೀತೆಯನ್ನು ಹಾಡಿಕಾರ್ಯಕ್ರಮವನ್ನು ಪ್ರಾರಂಭಿಸಿದರು. ಪರಿಷತ್ತಿನ ಪದಾಧಿಕಾರಿ ಗುಣಾಜೆ ರಾಮಚಂದ್ರ ಭಟ್ ರಾಜ್ಯೋತ್ಸವದ ಮಹತ್ತ್ವದ ಬಗ್ಗೆ ಮಾತನಾಡಿ ‘ಕನ್ನಡಾಂಬೆಗೆ ನಮನ’ ಎಂಬ ಸ್ವರಚಿತ ಕವನವನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಹುಸೈನ್ ಬಿ.ಕೆ, ಪ್ರಸನ್ನ ಆಚಾರ್ಯ, ಸಾಯಿ […]