ಹಿರಿಯಡಕ ಪಿಯು ಹಾಗೂ ಪದವಿ ಕಾಲೇಜಿನಲ್ಲಿ ಕಳ್ಳತನ: ದೂರು ದಾಖಲು
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಸಾವಿರಾರು ರೂ.ಗಳನ್ನು ಕಳವು ಮಾಡಿಕೊಂಡು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ ಪ್ರವೇಶದ್ವಾರದ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಕಾಲೇಜಿನೊಳಗೆ ಒಳ ನುಗ್ಗಿದ ಕಳ್ಳರು ಪ್ರಾಂಶುಪಾಲರ ಕಚೇರಿಗೆ ಲಗ್ಗೆ ಇಟ್ಟಿದ್ದಾರೆ. ಅಲ್ಲಿ ಕಪಾಟಿನ ಬೀಗವನ್ನು ಒಡೆದು 9 ಸಾವಿರ ರೂ ನಗದು […]
ಅತ್ಯಾಚಾರ ಪ್ರಕರಣಗಳಲ್ಲಿ ಎರಡು ಬೆರಳಿನ ಪರೀಕ್ಷೆಯನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್: ದ್ವಿಸದಸ್ಯದ ಪೀಠದಿಂದ ತೀರ್ಪು
ನವದೆಹಲಿ: ಅತ್ಯಾಚಾರ ಪ್ರಕರಣಗಳಲ್ಲಿ “ಎರಡು ಬೆರಳಿನ ಪರೀಕ್ಷೆ”ಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿಷೇಧಿಸಿದೆ ಮತ್ತು ಅಂತಹ ಪರೀಕ್ಷೆಗಳನ್ನು ನಡೆಸುವ ವ್ಯಕ್ತಿಗಳನ್ನು ದುರ್ನಡತೆಯ ತಪ್ಪಿತಸ್ಥರೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಿದೆ. ‘ಎರಡು ಬೆರಳು ಪರೀಕ್ಷೆ’ ಇಂದಿಗೂ ನಡೆಯುತ್ತಿರುವುದು ವಿಷಾದನೀಯ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಿಷಾದಿಸಿದೆ. “ಈ ನ್ಯಾಯಾಲಯವು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಆಪಾದಿಸುವ ಪ್ರಕರಣಗಳಲ್ಲಿ ಎರಡು ಬೆರಳು ಪರೀಕ್ಷೆಯ ಬಳಕೆಯನ್ನು ಪದೇ ಪದೇ ನಿರಾಕರಿಸಿದೆ. ಪರೀಕ್ಷೆ ಎಂದು ಕರೆಯಲ್ಪಡುವ ಇದಕ್ಕೆ […]
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ
ಉಡುಪಿ: ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಆಚರಿಸಲಾಯಿತು. ಕುಮಾರಿ ಅನಘಾ ಹೊಳ್ಳ ಸರ್ದಾರ್ ವಲ್ಲಭ ಭಾಯಿ ಪಟೇಲ್ ಕುರಿತು ಮಾತನಾಡಿದರು. ಶಿಕ್ಷಕ ಶೇಖರ ಬೋವಿ ರಾಷ್ಟ್ರೀಯ ಏಕತಾ ದಿನದ ಮಹತ್ವದ ಕುರಿತು ಮಾತನಾಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿ ಏಕತಾ ಪ್ರತಿಜ್ಞೆಯನ್ನು ಬೋಧಿಸಿದರು. ಶಿಕ್ಷಕ ವಸಂತ ಜೋಗಿ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ಶಿಕ್ಷಕಿ ಇಂದಿರಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಲ್ […]
ವಿಜಯಪುರ ಮಹಾನಗರ ಪಾಲಿಕೆಯ ಚುನಾವಣೆ: 17 ಸ್ಥಾನ ಬಿಜೆಪಿ ತೆಕ್ಕೆಗೆ; ಬಹುಮತದ ಕೊರತೆ
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸ್ಪಷ್ಟ ಬಹುಮತದ ಕೊರತೆ ಎದುರಾಗಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಮತ ಎಣಿಕೆ ಮುಕ್ತಾಯವಾದೆ. 35 ವಾರ್ಡ್‌ಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 10, ಎಐಎಂಐಎಂ 2 ಮತ್ತು ಜೆಡಿಎಸ್ ಅಭ್ಯರ್ಥಿ 1 ವಾರ್ಡ್‌ನಲ್ಲಿ ಚುನಾಯಿತರಾಗಿದ್ದಾರೆ ಎಂದು ಘೋಷಿಸಲಾಯಿತು. ಉಳಿದ ಐದು ವಾರ್ಡ್‌ಗಳಲ್ಲಿ ಪಕ್ಷೇತರರು ಆಯ್ಕೆಯಾಗಿದ್ದಾರೆ. ಪಕ್ಷೇತರರ ಬೆಂಬಲದೊಂದಿಗೆ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು […]
ಪ್ರಕೃತಿಯ ವರದಾನ ತೆಂಗಿನೆಣ್ಣೆಯಿಂದ ಚಳಿಗಾಲದ ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ಮುಕ್ತಿ ಹಾಡಿ
ಸಂಸ್ಕೃತದಲ್ಲಿ ನಾರೀಕೇಳವೆಂದು ಕರೆಸಿಕೊಳ್ಳುವ ಕಲಿಯುಗದ ಕಲ್ಪವೃಕ್ಷವೆಂಬ ತೆಂಗಿನಕಾಯಿಯ ಉಪಯೋಗಗಳು ಒಂದಲ್ಲ ಎರಡಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಮೊದಲನೆ ಸ್ಥಾನ ಗೋವಿಗಾದರೆ ಎರಡನೆ ಸ್ಥಾನ ತೆಂಗಿನಕಾಯಿಗೆ ಮೀಸಲು. ಗೋವು ಮತ್ತು ತೆಂಗಿನಕಾಯಿಯ ಪ್ರತಿಯೊಂದು ಅಂಶಗಳೂ ಬಹುಉಪಯೋಗಿ. ಪ್ರಕೃತಿ ಮನುಕುಲಕ್ಕೆ ನೀಡಿದ ಅತ್ಯಂತ ಉತ್ಕೃಷ್ಟ ಉಡುಗೊರೆಗಳೆಂದರೆ ಅದು ಗೋವಿನ ಹಾಲು ಮತ್ತು ತೆಂಗಿನಎಣ್ಣೆ. ತೆಂಗಿನೆಣ್ಣೆಯ ವಿಶಿಷ್ಟತೆ ಉಷ್ಣವಲಯದ ಪ್ರಾಕೃತಿಕ ಬೆಳೆಯಾಗಿರುವ ತೆಂಗಿನೆಣ್ಣೆಯ ವಿಶಿಷ್ಟತೆ ಒಂದೆರೆಡಲ್ಲ. # ಲಾರಿಕ್ ಆಸಿಡ್ ಅನ್ನು ಹೊಂದಿರುವುದರಿಂದ ಉತ್ತಮವಾದ ಚರ್ಮ-ಸ್ನೇಹಿ ಕೊಬ್ಬಿನಾಮ್ಲವಾಗಿದೆ # ಒಲೀಕ್ ಆಸಿಡ್ ಅನ್ನು […]