ತನ್ನ 30 ವರ್ಷಗಳ ಪ್ರತಿಜ್ಞೆ ಪೂರ್ಣಗೊಳಿಸಿದ ಪ್ರಧಾನಿ ಮೋದಿ: ಇದೇ ಮೊದಲ ಬಾರಿಗೆ ಅಯೋಧ್ಯೆಯ ಲಕ್ಷದೀಪೋತ್ಸವದಲ್ಲಿ ಭಾಗಿ

ಅಯೋಧ್ಯಾ: 1990 ಸೆಪ್ಟೆಂಬರ್ 25 ರಂದು ಸೋಮನಾಥ-ಅಯೋಧ್ಯೆ ರಾಮ ರಥಯಾತ್ರೆ ಪ್ರಾರಂಭವಾಯಿತು. ಆಗ ಗುಜರಾತ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ ಅವರು ಗುಜರಾತ್ ನಿಂದ ಹೊರಡುವ ಯಾತ್ರೆಯ ಸಾರಥಿಯಾಗಿದ್ದರು. ಈ ಏಕತಾ ಯಾತ್ರೆಯು ಕಾಶ್ಮೀರದ ಲಾಲ್ ಚೌಕ್‌ನಲ್ಲಿ 26 ಜನವರಿ 1992 ರಂದು ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಮುಕ್ತಾಯಗೊಂಡಿತು. ಇದಕ್ಕೂ ಕೆಲ ದಿನಗಳ ಮುನ್ನ ಜನವರಿ 14 ರಂದು, ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಭಗವಾನ್ ಶ್ರೀರಾಮನ ಆಶೀರ್ವಾದವನ್ನು ಕೋರಿದ ಬಳಿಕ ಮೋದಿಯವರು […]

ದೀಪಾವಳಿ ಹಬ್ಬಕ್ಕೆ ಭಾರತ ಕ್ರಿಕೆಟ್ ತಂಡದ ಉಡುಗೊರೆ: ವಿರಾಟ್ ರೂಪ ತೋರಿದ ಕೊಹ್ಲಿ; ಸೋತ ಪಾಕ್

ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವಕಪ್ 2022ರ ಸೂಪರ್ 12ರ ಪಂದ್ಯದಲ್ಲಿ ಭಾರತವು (160/6) ಪಾಕಿಸ್ತಾನವನ್ನು (159/8) 4 ವಿಕೆಟ್‌ಗಳಿಂದ ಸೋಲಿಸಿದೆ. ವಿರಾಟ್ ಕೊಹ್ಲಿ ತಮ್ಮ ಎಂದಿನ ಸ್ಪೋಟಕ ಲಯಕ್ಕೆ ಮರಳಿದ್ದು, ಅಜೇಯ 82 ರನ್ ಗಳಿಸಿದ್ದಾರೆ.  ಪಂದ್ಯ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳ ಸುರಿಮಳೆಯೆ ಹರಿದು ಬರುತ್ತಿದೆ. ವಿರಾಟ್ ಕೊಹ್ಲಿ ಅವರು 54 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಭಾರತ ತಂಡಕ್ಕೆ ವಿಜಯಲಕ್ಷ್ಮಿ ಒಲಿಯುವಂತೆ ಮಾಡಿದ್ದಾರೆ. ಮೊದಲ ಏಳು ಓವರ್‌ಗಳಲ್ಲಿ ಅಗ್ರ ನಾಲ್ಕು ಆಟಗಾರರನ್ನು ಕಳೆದುಕೊಂಡರೂ […]

ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತದ ರಾಷ್ಟ್ರಗಾನದ ಉದ್ಘೋಷ: ಭಾವುಕರಾದ ರೋಹಿತ್ ಶರ್ಮಾ

ಮೆಲ್ಬೋರ್ನ್: ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಭಾನುವಾರದಂದು ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟಿ20 ವಿಶ್ವ ಕಪ್ ನಲ್ಲಿ ತನ್ನ ಸೂಪರ್ 12 ಪಂದ್ಯದಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡವನ್ನು ಎದುರಿಸುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಭಾರತದ ರಾಷ್ಟ್ರಗಾನವನ್ನು ನುಡಿಸಲಾಗಿದ್ದು, ಇಡಿಯ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ರಾಷ್ಟ್ರಭಕ್ತಿಯ ಉದ್ಘೋಷ ರಾಷ್ಟ್ರಗಾನದ ರೂಪದಲ್ಲಿ ಮೊಳಗಿದೆ. ನಾಯಕ ರೋಹಿತ್ ಶರ್ಮಾ ಅವರು ಕೊನೆಯ ಕ್ಷಣದಲ್ಲಿ ಭಾವುಕರಾಗಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರತೀಯ […]

ದೀಪಾವಳಿ ಪ್ರಯುಕ್ತ ಪ್ಲೇ ಝೋನ್ ನಲ್ಲಿ ಭರ್ಜರಿ ಕೊಡುಗೆ: ಪ್ರತಿ ಮೊಬೈಲ್ ಖರೀದಿಯ ಮೇಲೆ ಖಚಿತ ಉಡುಗೊರೆ

ಉಡುಪಿ: ಇಲ್ಲಿನ ತ್ರಿವೇಣಿ ಸರ್ಕಲ್, ಆದರ್ಶ ಆಸ್ಪತ್ರೆ ಸಮೀಪ ಹಾಗೂ ಕೆ.ಎಸ್.ಆರ್.ಟಿ.ಸಿ. ನರ್ಮ್ ಬಸ್ ನಿಲ್ದಾಣದ ಬಳಿಯ ಪ್ಲೇ ಝೋನ್ ಮೊಬೈಲ್ ಅಂಗಡಿಯಲ್ಲಿ ದೀಪಾವಳಿ ಪ್ರಯುಕ್ತ ಭರ್ಜರಿ ಕೊಡುಗೆಗಳನ್ನು ನೀಡಲಾಗುತ್ತಿದೆ. ಈ ಕೊಡುಗೆಗಳು ಜನವರಿ 1 ರವರೆಗೆ ಲಭ್ಯವಿದೆ. ಪ್ರತೀ ತಿಂಗಳು 1 ಟಿ.ವಿ.ಎಸ್ ಜುಪಿಟರ್ ಹಾಗೂ 5 ಎಲ್.ಎ.ಡಿ ಟಿವಿ ಗೆಲ್ಲುವ ಅವಕಾಶ. ಖರೀದಿಯ ಮೇಲೆ ಉಚಿತ ಉಡುಗೊರೆ ಮಾತ್ರವಲ್ಲದೆ 5000ಕ್ಕೂ ಮಿಕ್ಕಿ ಬಹುಮಾನಗಳಿವೆ. ಲಕ್ಕಿ ಡ್ರಾ ನಲ್ಲಿ ಎಲೆಕ್ಟ್ರಿಕ್ ಸೈಕಲ್ ಪಡೆಯುವ ಅವಕಾಶ. ಶೂನ್ಯ […]