ಐ-ನೀಡ್ಸ್ ಮಲ್ಟಿ ಬ್ರಾಂಡ್ ಆಪ್ಟಿಕಲ್ ಸ್ಟೋರ್ ನಲ್ಲಿ ‘ಯೊಪೊ’ ವಿಶೇಷ ಆಫರ್
ಉಡುಪಿ: ಕಲ್ಪನಾ ಟಾಕೀಸ್ ಬಳಿಯ ಒರಾಯನ್ ಕಾಂಪ್ಲೆಕ್ಸ್ ನಲ್ಲಿರುವ ಐ-ನೀಡ್ಸ್ ಮಲ್ಟಿ ಬ್ರಾಂಡ್ ಆಪ್ಟಿಕಲ್ ಸ್ಟೋರ್ ನಲ್ಲಿ ಬರ್ಜ್, ಮಿಯಮಾ ಮತ್ತು ಲಿಯೋನ್ ಬ್ರಾಂಡ್ ಗಳಿಂದ ಫ್ರೇಮ್ ಆರಿಸಿ ಮತ್ತು ಯೊಪೊ(ನೀವು ಒಂದಕ್ಕೆ ಮಾತ್ರ ಪಾವತಿಸುತ್ತೀರಿ) ಆಫರ್ ನೊಂದಿಗೆ ಬ್ರಾಂಡೆಡ್ ಕನ್ನಡಕ ಫ್ರೇಮ್ ಅಥವಾ ಪ್ರೀಮಿಯ ಕನ್ನಡಕ ಲೆನ್ಸೆಸ್ ಗಳಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಪಾವತಿಸಿ. ಕೊಡುಗೆ ವಿಶಿಷ್ಟವಾಗಿ spexmojo.com ಮತ್ತು ಪಾರ್ಟ್ನರ್ ಸ್ಟೋರ್ ನಲ್ಲಿ ಮಾತ್ರ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880374225
ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ನಿರ್ಮಲಾ ಬಿರ್ಲಾ
ಉಡುಪಿ: ಬಿರ್ಲಾ ಕಂಪನಿಯ ಮಾಲಕರಾದ ಸಿ.ಕೆ.ಬಿರ್ಲಾರವರ ತಾಯಿ ನಿರ್ಮಲಾ ಬಿರ್ಲಾರವರು ಶ್ರೀಕೃಷ್ಣಮಠಕ್ಕಾಗಮಿಸಿ ದೇವರ ದರ್ಶನ ಪಡೆದು, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಸ್ವಾಗತಿಸಿದರು. ಆಡಳಿತ ವರ್ಗದ ವಾದಿರಾಜ್ ಉಪಸ್ಥಿತರಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲುವುದು ಪಕ್ಕಾ: ಡಿಕೆ ಶಿವಕುಮಾರ್
ಬಳ್ಳಾರಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಸ್ಥ ಡಿಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ. ಯಾರ ಜೊತೆಗೂ ಮೈತ್ರಿ ಇಲ್ಲದೇ ಈ ಸಂಖ್ಯಾಬಲ ಸಾಧಿಸುತ್ತೇವೆ ಎಂದು ಅವರು ಹೇಳಿದ್ದಾರೆ. ರಾಜ್ಯ ವಿಧಾನಸಭೆಯು 224 ಸ್ಥಾನಗಳನ್ನು ಹೊಂದಿದ್ದು, ಬಹುಮತಕ್ಕೆ 150 ಸ್ಥಾನಗಳು ಬೇಕಾಗಿರುತ್ತದೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಭಾರತ್ ಜೋಡೋ ಯಾತ್ರೆಗೆ ಕರ್ನಾಟಕದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ 150 ವಿಧಾನಸಭಾ […]
ಕುಡಾಳ್ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಮಾಜದ 14ನೇ ಸ್ನೇಹಕೂಟ
ಉಡುಪಿ: ಕುಡಾಳ್ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಮಾಜದ 14ನೇ ಸ್ನೇಹಕೂಟ ಕಾರ್ಯಕ್ರಮ ಭಾನುವಾರದಂದು ನೀಲಾವರ ಬಳಿಯ ಸೀತಾನದಿಯ ತಟದಲ್ಲಿರುವ ಬಾವಲಿಗುಡ್ಡೆ ರೆಸಾರ್ಟ್ ನಲ್ಲಿ ನಡೆಯಿತು. ಮಕ್ಕಳು ಸೇರಿದಂತೆ ಒಟ್ಟು 51 ಜನರು ಸ್ನೇಹಕೂಟದಲ್ಲಿ ಭಾಗವಹಿಸಿ ಕೂಟವನ್ನು ಯಶಸ್ವಿಯಾಗಿಸಿದರು.
ವಿರಾಟ್ ಕೊಹ್ಲಿ ಅಭಿಮಾನಿಯ ಕ್ರಿಕೆಟ್ ಕೌಶಲ್ಯ ವೈರಲ್: ಯುವ ಆಟಗಾರ್ತಿ ಮಕ್ಸೂಮಾಗೆ ಲಡಾಖ್ ಆಡಳಿತದ ಬೆಂಬಲ
ಲಡಾಖ್: ಇತ್ತೀಚೆಗೆ ಕಾರ್ಗಿಲ್‌ನ ಕಕ್ಸರ್ ಹೈಸ್ಕೂಲ್‌ನ 6 ನೇ ತರಗತಿಯ ವಿದ್ಯಾರ್ಥಿನಿ ಮಕ್ಸೂಮಾ ಎನ್ನುವ ವಿದ್ಯಾರ್ಥಿನಿಯು ಕ್ರಿಕೆಟ್ ಆಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಲಡಾಖ್ ಆಡಳಿತವು ಕಾರ್ಗಿಲ್‌ನ ಕಕ್ಸರ್‌ನ ಯುವ ಕ್ರಿಕೆಟ್ ಆಟಗಾರ್ತಿ ಮಕ್ಸೂಮಾ ಅವರ ಕ್ರಿಕೆಟ್ ಪ್ರತಿಭೆ ಮತ್ತು ಅವರ ಆಕಾಂಕ್ಷೆಗಳಿಗೆ ಬೆಂಬಲವನ್ನು ನೀಡಿದೆ. ಈ ವೀಡಿಯೊದಲ್ಲಿ ಆಕೆ ಕ್ರಿಕೆಟ್‌ನ ಮೇಲಿನ ತನ್ನ ಉತ್ಸಾಹದ ಬಗ್ಗೆ ಮಾತನಾಡುತ್ತಾಳೆ. ತನ್ನ ಮನೆಯಲ್ಲಿ ತನ್ನ ತಂದೆಯಿಂದ ಮತ್ತು ಶಾಲೆಯಲ್ಲಿ ಶಿಕ್ಷಕರಿಂದ ಪಡೆದ ಬೆಂಬಲ ಮತ್ತು […]