ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ ಸಂಘಟನೆ ವತಿಯಿಂದ 2ನೇ ರಾಜ್ಯ ಮಟ್ಟದ ಅಧಿವೇಶನ

ಉಡುಪಿ: ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ದಿ ಸಂಘ ಗಂಗಾವತಿ, ಕೇಂದ್ರ ಕಛೇರಿ ವಿಜಯಪುರ, ಆಲ್ ಇಂಡಿಯಾ ಟೆಂಟ್ ಎಂಡ್ ಡೆಕೋರೇಷನ್ ವೆಲ್ ಫೇರ್ ಅಸೋಷಿಯನ್ ನವದೆಹಲಿ ಹಾಗೂ ಧ್ವನಿ, ಬೆಳಕು ಸಂಯೋಜಕರ ಸಂಘಟನೆ ಉಡುಪಿ ಇದರ ಉಡುಪಿ ಜಿಲ್ಲಾ ದಶಮಾನೋತ್ಸವ ಪ್ರಯುಕ್ತ ಉಡುಪಿ ವೈಭವದ 2ನೇ ರಾಜ್ಯಮಟ್ಟದ ಅಧಿವೇಶನ ಆದಿತ್ಯವಾರ ಉಡುಪಿ ಬೀಡಿನಗುಡ್ಡೆ ಬಯಲು ರಂಗಮಂಟಪದಲ್ಲಿ ಜರಗಿತು. ಧ್ವನಿ ಮತ್ತು ಬೆಳಕಿನ ವಸ್ತು ಪ್ರದರ್ಶನ ಮಾರಾಟ ಮಳಿಗೆಯ ಉದ್ಘಾಟನೆಯನ್ನು ಶ್ರೀ ಜನಾರ್ಧನ […]

ಇತಿಹಾಸ ಸೃಷ್ಟಿಸಿದ ಕಾಂತಾರ: 15 ದಿನಗಳಲ್ಲಿ ವಿಶ್ವದಾದ್ಯಂತ 100 ಕೋಟಿ ರೂ ಗಳಿಕೆ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾಗಳ ಪೈಕಿ ಕಾಂತಾರವೂ ಒಂದಾಗಿದ್ದು, ಸಿನಿಮಾವು 15 ದಿನಗಳಲ್ಲಿ ವಿಶ್ವದಾದ್ಯಂತದ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಕೆ ಮಾಡಿದೆ. ಭಾರತದ ನಿವ್ವಳ ಸಂಗ್ರಹ 78.14 ಕೋಟಿ ರೂಗಳಾಗಿವೆ. ಇದಕ್ಕೂ ಮುಂಚೆ ಕನ್ನಡದ 5 ಚಲನಚಿತ್ರಗಳು ಈ ಇತಿಹಾಸ ನಿರ್ಮಿಸಿದ್ದು, ಕಾಂತಾರ ಸದ್ಯ 6 ನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ 1207 ಕೋಟಿ ರೂ ಗಳಿಸುವ ಮೂಲಕ ಹೊಂಬಾಳೆ ಬ್ಯಾನರ್ಸ್ ನ ಯಶ್ ಅಭಿನಯದ ಕೆಜಿಎಫ್ 2 ಅಗ್ರಸ್ಥಾನದಲ್ಲಿದ್ದರೆ, ಇದರ ಹಿಂದಿನ […]

ಕೇರಾ ಸುರಕ್ಷಾ ವಿಮಾ ಯೋಜನೆ ಅಕ್ಟೋಬರ್ 31 ರಂದು ಮುಕ್ತಾಯ

ಉಡುಪಿ: ತೆಂಗು ಅಭಿವೃದ್ಧಿ ಮಂಡಳಿಯು ಓರಿಯೆಂಟಲ್ ವಿಮಾ ಕಂಪನಿ ಲಿಮಿಟೆಡ್ ಸಹಯೋಗದೊಂದಿಗೆ ಜಾರಿಗೆ ತಂದಿರುವ ಕೇರಾ ಸುರಕ್ಷಾ ವಿಮಾ ಯೋಜನೆಯಡಿ ತೆಂಗಿನ ಮರ ಹತ್ತುವವರಿಗೆ, ನೀರಾ ತಂತ್ರಜ್ಞರಿಗೆ, ತೆಂಗು ಕೊಯ್ಲು ಮಾಡುವವರಿಗೆ ಮತ್ತು ತೆಂಗಿನ ಮರಗಳ ಸ್ನೇಹಿತರು ತರಬೇತಿದಾರರಿಗೆ ಗರಿಷ್ಠ ಐದು ಲಕ್ಷ ರೂಪಾಯಿಗಳವರೆಗೆ ಆಕಸ್ಮಿಕ ವಿಮಾ ರಕ್ಷಣೆಯನ್ನು ಒದಗಿಸುತ್ತಿದ್ದು, ಪ್ರಸ್ತುತ ಫಲಾನುಭವಿಯ ಪ್ರೀಮಿಯಂ ಮೊತ್ತ 99 ರೂ. ಗಳಾಗಿದ್ದು, ಈ ಯೋಜನೆಯು ಅಕ್ಟೋಬರ್ 31 ರಂದು ಮುಕ್ತಾಯವಾಗಲಿದೆ. ಕೇರಾ ಸುರಕ್ಷಾ ವಿಮಾ ಯೋಜನೆಯು ಅಪಘಾತ ವಿಮಾ […]

ಭಾರತದ ಹೈದರಾಬಾದಿಗೆ ‘ವಿಶ್ವ ಹಸಿರು ನಗರ ಪ್ರಶಸ್ತಿ 2022’ ಯ ಗರಿ

ದಕ್ಷಿಣ ಕೊರಿಯಾ: ಶುಕ್ರವಾರ ಜೆಜುನಲ್ಲಿ ನಡೆದ ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಹಾರ್ಟಿಕಲ್ಚರ್ ಪ್ರೊಡ್ಯೂಸರ್ಸ್ (ಎಐಪಿಎಚ್) ವಿಶ್ವ ಹಸಿರು ನಗರ ಪ್ರಶಸ್ತಿಗಳು 2022 ರಲ್ಲಿ ತೆಲಂಗಾಣದ ಹೈದರಾಬಾದ್ ನಗರವು ಒಟ್ಟಾರೆಯಾಗಿ ‘ವಿಶ್ವ ಹಸಿರು ನಗರ ಪ್ರಶಸ್ತಿ 2022’ ಮತ್ತು ‘ಆರ್ಥಿಕ ಪುನಶ್ಚೇತನ ಮತ್ತು ಅಂತರ್ಗತ ಬೆಳವಣಿಗೆಗಾಗಿ ಹಸಿರು ಬದುಕು’ ಪ್ರಶಸ್ತಿಯನ್ನು ಗೆದ್ದಿದೆ. ಪ್ಯಾರಿಸ್, ಮೆಕ್ಸಿಕೋ ಸಿಟಿ, ಮಾಂಟ್ರಿಯಲ್, ಫೋರ್ಟಲೆಜಾ ಮತ್ತು ಬೊಗೋಟಾದಂತಹ ನಗರಗಳನ್ನು ಸೋಲಿಸಿದ ಭಾರತದ ಹೈದರಾಬಾದ್ ವಿಜೇತನಾಗಿ ಹೊರಹೊಮ್ಮಿದೆ. ಎಲ್ಲಾ ಆರು ವಿಭಾಗಗಳಲ್ಲಿ ಅತ್ಯುತ್ತಮವೆನಿಸಿಕೊಂಡ ಹೈದರಾಬಾದ್ ನಗರ […]

ಅಕ್ಟೋಬರ್ 17 ರಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರೀಯ ಅಪ್ರೆಂಟಿಷಿಪ್ ಮೇಳ

ಉಡುಪಿ: ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಅಕ್ಟೋಬರ್ 17 ರಂದು ಬೆಳಗ್ಗೆ 9.30 ಕ್ಕೆ ಮಣಿಪಾಲ ಪ್ರಗತಿನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರೀಯ ಅಪ್ರೆಂಟಿಷಿಪ್ ಮೇಳ ನಡೆಯಲಿದೆ. ಅಪ್ರೆಂಟಿಷಿಪ್ ಮೇಳದಲ್ಲಿ ಭಾಗವಹಿಸಲು ಐ.ಟಿ.ಐ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳು https://www.apprenticeshipindia.gov.in/candidate- registration ನಲ್ಲಿ ಹಾಗೂ ನೋಂದಣಿಯಾಗುವ ಅಭ್ಯರ್ಥಿಗಳಿಗೆ ಅಪ್ರೆಂಟಿಶಿಪ್ ತರಬೇತಿ ನೀಡುವ ಕಂಪನಿ ಹಾಗೂ ಕೈಗಾರಿಕೆಗಳು https://www.apprenticeshipindia.gov.in/establishment-registrationನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮೇಳದಂದು ಸಂಸ್ಥೆಯಲ್ಲಿ ಶಿಶಿಕ್ಷು ನೋಂದಣಿ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.ನಂ:9900329668, 9964247101, […]