ಕಾಪು ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ
ಕಾಪು: ಕಾಪು ಪೇಟೆ ಗೌಡ ಸಾರಸ್ವತ ಸಮಾಜದ ಆಡಳಿತಕ್ಕೆ ಒಳಪಟ್ಟಿರುವ ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಅ.11ರಂದು ಚಂಡಿಕಾಯಾಗ ಪೂರ್ಣಾಹುತಿ ಮತ್ತು ಅನ್ನಸಂತರ್ಪಣೆ ನಡೆಯಿತು. ಹಳೇ ಮಾರಿಗುಡಿಯ ಅರ್ಚಕ ವೇ.ಮೂ. ಕಮಲಾಕ್ಷ ಭಟ್ ಅವರ ನೇತೃತ್ವದಲ್ಲಿ ವೈದಿಕ ವೃಂದದ ಸಹಭಾಗಿತ್ವದೊಂದಿಗೆ ಚಂಡಿಕಾಯಾಗ ಪೂರ್ಣಾಹುತಿಯ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ ಹಾಲು ಪಾಯಸ ಸಹಿತವಾಗಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಮಾರಿಯಮ್ಮ ದೇವಿಯ ದರ್ಶನ ಸೇವೆ ನಡೆದು ಭಕ್ತರಿಗೆ ಅನುಗ್ರಹ ಪ್ರಸಾದ ವಿತರಿಸಲಾಯಿತು. ಕಾಪು […]
ಸುರತ್ಕಲ್ ಟೋಲ್ ಗೇಟ್ ಶೀಘ್ರ ತೆರವು: ಮುತ್ತಿಗೆ ಕೈ ಬಿಡಲು ಮನವಿ
ಸುರತ್ಕಲ್: ಇಲ್ಲಿನ ಅಕ್ರಮ ಟೋಲ್ ಗೇಟ್ ಅನ್ನು ಇನ್ನೂ ತೆರವುಗೊಳಿಸದಿರುವುದನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು ಅಕ್ಟೋಬರ್ 18ರಂದು ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಜಿಲ್ಲಾಡಳಿತದ ಪರವಾಗಿ ಪಣಂಬೂರು ಪೊಲೀಸ್ ಉಪ ಆಯುಕ್ತರ ಕಚೇರಿಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಮದನ್ ಮೋಹನ್, ಸುರತ್ಕಲ್ ಟೋಲ್ ಗೇಟ್ ತೆರವು ಪ್ರಕ್ರಿಯೆಯ ಆಡಳಿತಾತ್ಮಕ ಕೆಲಸಗಳು ನಡೆಯುತ್ತಿದ್ದು, ಶೀಘ್ರ […]
ಶಾಸಕ ಹರೀಶ್ ಪೂಂಜಾಗೆ ಜೀವ ಬೆದರಿಕೆ ಪ್ರಕರಣ: ಕಾರು ಓವರ್ ಟೇಕ್ ವಿಚಾರದಲ್ಲಿ ನಿಂದನೆ; ಎಸ್ಪಿ ಋಷಿಕೇಷ್ ಸೋನಾವಣೆ ಸ್ಪಷ್ಟಣೆ
ಬೆಳ್ತಂಗಡಿ: ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ತಲವಾರು ತೋರಿಸಿ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಿಯಾಜ್(38) ನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಫಳ್ನೀರ್ ನಿವಾಸಿ ರಿಯಾಜ್ ಎಂಬಾತನನ್ನು ಸ್ಕಾರ್ಪಿಯೋ ಕಾರಿನ ಸಹಿತ ವಶಕ್ಕೆ ಪಡೆಯಲಾಗಿದೆ. ಬಂಧನದ ಬಳಿಕ ದೂರುದಾರರಾದ ಹರೀಶ್ ಪೂಂಜಾ ಕಾರು ಚಾಲಕ ನವೀನ್, ರಿಯಾಜ್ ಗುರುತು ಪತ್ತೆ ಹಚ್ಚಿದ್ದಾರೆ. ಆರೋಪಿ ಬಂಧನದ ಬಗ್ಗೆ ದ.ಕ ಜಿಲ್ಲಾ ಎಸ್ಪಿ ಋಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದು, ಆರೋಪಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ […]
ಮಾಹೆ: ನಿರ್ದೇಶಕ ದಿನೇಶ್ ಶೆಣೈ ಚೊಚ್ಚಲ ಚಲನಚಿತ್ರ ‘ಮಧ್ಯಂತರ’ ಪ್ರದರ್ಶನ
ಮಣಿಪಾಲ: ಬರಹಗಾರ ಮತ್ತು ನಿರ್ದೇಶಕ ದಿನೇಶ್ ಶೆಣೈ ಚೊಚ್ಚಲ ಚಲನಚಿತ್ರ ‘ಮಧ್ಯಂತರ’ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಪ್ರದರ್ಶನಗೊಂಡಿತು. ಮಾಹೆ ಪರಿಸರದಲ್ಲಿ ಬೆಳೆದ, ಸದ್ಯ ದೆಹಲಿಯಲ್ಲಿ ವಾಸಿಸುತ್ತಿರುವ ಶೆಣೈ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಬದುಕನ್ನು ಅವಲೋಕಿಸುವುದು ಮತ್ತು ವೈವಿಧ್ಯಮಯ ಚಲನಚಿತ್ರಗಳನ್ನು ನೋಡುವುದು ಉತ್ತಮ ಚಲನಚಿತ್ರವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ‘ಮಧ್ಯಂತರ’ದಲ್ಲಿನ ಹೆಚ್ಚಿನ ವಿವರಗಳು ಸಿನಿಮಾದೊಂದಿಗಿನ ಅವರ ಎರಡು ದಶಕಗಳಿಗೂ ಹೆಚ್ಚಿನ ಒಡನಾಟದ ಸಮಯದಲ್ಲಿನ ಅವಲೋಕನ ಮತ್ತು ಅನುಭವದಿಂದ ಜನಿಸಿದವುಗಳಾಗಿವೆ ಎಂದರು. ತಮ್ಮ […]
ಕೋಹ್ಲಿ ಅಭಿಮಾನಿಯಿಂದ ರೋಹಿತ್ ಶರ್ಮಾ ಬೆಂಬಲಿಗನ ಹತ್ಯೆ: ಟ್ವಿಟರ್ ನಲ್ಲಿ ಅರೆಸ್ಟ್ ಕೊಹ್ಲಿ ಟ್ರೆಂಡ್
ಚೆನ್ನೈ: ಐಪಿಲ್ ಕ್ರಿಕೆಟ್ ನ ಹುಚ್ಚು ಅಭಿಮಾನವು ಯುವಕನೊಬ್ಬನ ಹತ್ಯೆಯಲ್ಲಿ ದುರಂತ ಅಂತ್ಯ ಕಂಡಿದೆ. ತಮಿಳುನಾಡಿನಲ್ಲಿ ರೋಹಿತ್ ಶರ್ಮಾ ಬೆಂಬಲಿಗನನ್ನು ವಿರಾಟ್ ಅಭಿಮಾನಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಘಟನೆಯಲ್ಲಿ 24 ವರ್ಷದ ಪಿ ವಿಘ್ನೇಶ್ ಅನ್ನು ಎಸ್ ಧರ್ಮರಾಜ್ ಎನ್ನುವವನು ಕೊಲೆಮಾಡಿದ್ದಾನೆ. ಈ ಇಬ್ಬರೂ ಅರಿಯಲೂರು ಜಿಲ್ಲೆಯ ಪೊಯ್ಯೂರು ಗ್ರಾಮದವರು. ವಿಘೇಶ್ ಮುಂಬೈ ಇಂಡಿಯನ್ ಅಭಿಮಾನಿಯಾಗಿದ್ದರೆ, ಧರ್ಮರಾಜ್ ಆರ್.ಸಿ.ಬಿಯ ಕಟ್ಟರ್ ಅಭಿಮಾನಿ. ಈ ಇಬ್ಬರೂ ಕೂಡಾ ಮದ್ಯ ಸೇವಿಸಿದ್ದರು. ಆರಂಭಿಕ ತನಿಖೆಯ ಪ್ರಕಾರ, ಇಂಡಿಯನ್ ಪ್ರೀಮಿಯರ್ […]