ಮಾನಸಿಕ ಅಸ್ವಸ್ಥ ಯುವಕ ನಾಪತ್ತೆ

ಉಡುಪಿ: ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಸಾಲ್ಮರ ಸ್ಪಂದನ ಮಾನಸಿಕ ಅಸ್ವಸ್ಥ ವಸತಿ ಕೇಂದ್ರದಲ್ಲಿ ವಾಸವಿದ್ದ ಶಿವ (21) ಎಂಬ ಯುವಕನು ಬುದ್ಧಿಮಾಂದ್ಯನಾಗಿದ್ದು, ಅಕ್ಟೋಬರ್ 8 ರಂದು ಬೆಳಗ್ಗೆ 11 ಗಂಟೆಯಿಂದ ಸಂಸ್ಥೆಯಿಂದ ನಾಪತ್ತೆಯಾಗಿರುತ್ತಾರೆ. 5 ಅಡಿ 6 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ನಂ. 0820-2526444, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕರು […]

ತ್ರಿಶಾ ಕ್ಲಾಸಸ್: ಸಂಭ್ರಮದ ವಿಕಸನ ಶಿಬಿರಕ್ಕೆ ತೆರೆ

ಉಡುಪಿ: ತ್ರಿಶಾ ಕ್ಲಾಸಸ್ ನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ 7 ದಿನಗಳ ಉಚಿತ ‘ವಿಕಸನ’ ಕಾರ್ಯಕ್ರಮವನ್ನು ಅಕ್ಟೋಬರ್ ೬ ರಂದು ಉದ್ಘಾಟಿಸಲಾಗಿದ್ದು, ಅಕ್ಟೋಬರ್ 12 ರಂದು ಶಿಬಿರವು ಸಮಾಪನೆಗೊಂಡಿತು ಸಂಪನ್ನಗೊಂಡಿತು. ಸಂಸ್ಥೆಯ ಅಧ್ಯಕ್ಷ ಸಿಎ ಗೋಪಾಲಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿತ್ಯ ನೂತನವಾಗಿರುವ ಈ ಜಗತ್ತಿನಲ್ಲಿ ಪ್ರತಿನಿತ್ಯವೂ ವ್ಯಕ್ಯಿತ್ವದಲ್ಲಿ ವಿಕಸನವನ್ನು ಹೊಂದುತ್ತಾ ಮುಂದುವರಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಶಿಬಿರವು ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಶಿಬಿರದಲ್ಲಿ ಭಾಗವಹಿಸಿದ್ದ ಉಡುಪಿಯ […]

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಉಡುಪಿ : ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಉಪಾಧ್ಯಕ್ಷರಾಗಿ ಸುಕೇಶ್ ಕುಂದರ್ ಹೆರ್ಗ, ನಾರಾಯಣ್ ಕುಂದರ್ ಕಲ್ಮಾಡಿ, ಗಣೇಶ್ ದೇವಾಡಿಗ ದೊಡ್ಡಣಗುಡ್ಡೆ, ಶರತ್ ಶೆಟ್ಟಿ ಲಕ್ಷ್ಮೀನಗರ, ಕಿರಣ್ ಕುಂದರ್ ಬಡಾನಿಡಿಯೂರು, ಕುಮಾರಿ ದೀಪಾ ಬಡಾನಿಡಿಯೂರು. ಪ್ರಧಾನ ಕಾರ್ಯದರ್ಶಿಗಳಾಗಿ ಸತೀಶ್ ಕುಮಾರ್ ಮಂಚಿ, ನವೀನ್ ಶೆಟ್ಟಿ ಕನ್ನರ್ಪಾಡಿ, ಪ್ರವೀಣ್ ಜಿ ಕೊಡವೂರು, ಸತೀಶ್ ಪುತ್ರನ್ ದೊಡ್ಡಣಗುಡ್ಡೆ, […]

ಶಾಸಕ ಹರೀಶ್ ಪೂಂಜಾಗೆ ಜೀವ ಬೆದರಿಕೆ: ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಜಿಲ್ಲಾ ಬಿಜೆಪಿ ಒತ್ತಾಯ

ಉಡುಪಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ವಾಹನ ತಡೆದು, ತಲವಾರು ಝಳಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಮತ್ತು ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಕರಾವಳಿ ಜಿಲ್ಲೆಯು ಅನೇಕ ದಿನಗಳಿಂದ ಶಾಂತಿಯ ವಾತಾವರಣದಲ್ಲಿದ್ದು, ಕೆಲವು ಶಕ್ತಿಗಳು ಅಶಾಂತಿ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ, ಪಕ್ಷದ ಶಾಸಕರಾದ ಹರೀಶ್ ಪೂಂಜಾ ರವರು ನಿನ್ನೆ ರಾತ್ರಿ ಊರಿಗೆ ವಾಪಾಸು ಬರುತ್ತಿದ್ದ ಸಂದರ್ಭ ಕಾರಿಗೆ ಅಡ್ಡಹಾಕಿ […]

ಅಂಬಲಪಾಡಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸತತ 15ನೇ ವರ್ಷದ‌‌ ಪಾದಯಾತ್ರೆ

ಉಡುಪಿ: ಅಂಬಲಪಾಡಿ ಗ್ರಾಮ ಪಂಚಾಯತ್ ನ ಕ್ರಿಯಾಶೀಲ ಸದಸ್ಯ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಬಲಪಾಡಿ ಇದರ ಅಧ್ಯಕ್ಷ ಸುನಿಲ್ ಕುಮಾರ್ ಕಪ್ಪೆಟ್ಟು ಅವರ ನೇತೃತ್ವದಲ್ಲಿ ಸತತ 15ನೇ ವರ್ಷದ‌‌ ಪಾದಯಾತ್ರೆಯು ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ಧನ ಮತ್ತು ಮಹಾಕಾಳಿ ಅಮ್ಮನವರ ಸನ್ನಿಧಿಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದವರೆಗೆ, ಶುಕ್ರವಾರ ಮುಂಜಾನೆ 3 ಗಂಟೆಗೆ ವರುಣ ದೇವನ ಕೃಪೆಯೊಂದಿಗೆ ಶುಭಾರಂಭವಾಯಿತು. ಈ ಪಾದಯಾತ್ರೆ ಹೊರಡುವ ಶುಭ ಸಂಧರ್ಭದಲ್ಲಿ ಊರಿನ ಹಿರಿಯರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಬಲಪಾಡಿ […]