ಕುದ್ರು ನೆಸ್ಟ್ ದ್ವೀಪದ ಮನೆಯಲ್ಲಿ ಯಕ್ಷಾವತಾರದಲ್ಲಿ ಕಂಗೊಳಿಸಿದ ಚೆಲುವ ಕನ್ನಡಿಗ ನಟ ರಮೇಶ್ ಅರವಿಂದ್

ಕುಂದಾಪುರ: ಕನ್ನಡ ಚಿತ್ರರಂಗದ ಹೆಸರಾಂತ ನಟ ರಮೇಶ್ ಅರವಿಂದ್ ಉಡುಪಿ ಜಿಲ್ಲೆಯಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಆಚಾರ ವಿಚಾರ ಸಂಸ್ಕೃತಿಗಳನ್ನು ಆಸ್ವಾದಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ತನ್ನ ಯಕ್ಷಗಾನದ ವೇಷಭೂಷಣಗಳನ್ನು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಹಂಚಿಕೊಂಡಿರುವ ನಟ ರಮೇಶ್ ಅರವಿಂದ್, “ಪ್ರಶ್ನೆ-ಕಳೆದ ಬಾರಿ ನೀವು ಮೊದಲ ಬಾರಿಗೆ ಯಾವಾಗ ಏನನ್ನಾದರೂ ಮಾಡಿದ್ದೀರಿ? ಉತ್ತರ-ನಿನ್ನೆ. ಮೊದಲ ಬಾರಿಗೆ ಯಕ್ಷಗಾನದ ಪ್ರಸಾಧನವನ್ನು ಪ್ರಯತ್ನಿಸಿದೆ. ಈ ಶ್ರೇಷ್ಠ ಕಲಾ ಪ್ರಕಾರದೊಂದಿಗೆ ಸಂಬಂಧ ಹೊಂದಿರುವ ಎಲ್ಲರ ಬಗ್ಗೆಯೂ ಇರುವ ನನ್ನ […]

ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲು, ನಗರಸಭೆಯಿಂದ ರಚಿಸಲ್ಪಟ್ಟ ಅರ್ಹ ಸ್ವ-ಸಹಾಯ ಗುಂಪುಗಳ ಹಾಗೂ ಪ್ರದೇಶ ಮಟ್ಟದ ಒಕ್ಕೂಟದ 18 ರಿಂದ 45 ವರ್ಷದೊಳಗಿನ ಅರ್ಹ ಮಹಿಳಾ ಸದಸ್ಯರಿಂದ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿ.ಯು.ಸಿ ಉತ್ತೀರ್ಣರಾಗಿರುವ, ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರುವ ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿ […]

ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ ಆರ್ಮಿ ಡೇ ಪರೇಡ್

ಬೆಂಗಳೂರು: ರಾಷ್ಟ್ರ ರಾಜಧಾನಿಯ ಹೊರಗೆ ಪ್ರಮುಖ ಕಾರ್ಯಕ್ರಮಗಳನ್ನು ನಡೆಸುವ ಉಪಕ್ರಮಗಳ ಭಾಗವಾಗಿ ಮುಂದಿನ ವರ್ಷ ಆರ್ಮಿ ಡೇ ಪರೇಡ್ ಅನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. 1949 ರಲ್ಲಿ ಈ ದಿನದಂದು ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಮೊದಲ ಭಾರತೀಯ ಅಧಿಕಾರಿ ಅಧಿಕಾರ ವಹಿಸಿಕೊಂಡ ನೆನಪಿಗಾಗಿ ಪ್ರತಿ ವರ್ಷ ಜನವರಿ 15 ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ. ಮುಂದಿನ ಆರ್ಮಿ ಡೇ ಪರೇಡ್ ಬೆಂಗಳೂರಿನಲ್ಲಿ ಜನವರಿ 15, 2023 ರಂದು ನಡೆಯಲಿದೆ. ಸೇನಾ ದಿನದ ಪರೇಡ್ ಅನ್ನು ರಾಷ್ಟ್ರ ರಾಜಧಾನಿಯಿಂದ […]

903 ಕೋಟಿ ರೂಪಾಯಿ ಹೂಡಿಕೆ ವಂಚನೆ ಭೇದಿಸಿದ ತೆಲಂಗಾಣ ಪೊಲೀಸರು: ವಂಚನೆಗೆ ಚೀನಾ-ದುಬೈ ನಂಟು

ಹೈದರಾಬಾದ್: ಬಹುಕೋಟಿ ಹೂಡಿಕೆ ವಂಚನೆಯನ್ನು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಬುಧವಾರ ಭೇದಿಸಿದ್ದು, ಇಬ್ಬರು ಚೀನಾ ಪ್ರಜೆಗಳು ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ. ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಪ್ರಕಾರ, ಹೂಡಿಕೆ ವಂಚನೆಯ ಮೊತ್ತ 903 ಕೋಟಿ ರೂಗಳಾಗಿವೆ. ವಂಚನೆಯು ದುಬೈ, ಚೀನಾ ಮತ್ತು ಕಾಂಬೋಡಿಯಾ ಜೊತೆ ಸಂಪರ್ಕ ಹೊಂದಿದ್ದು, ಭಾರತದಾದ್ಯಂತ ಹರಡಿದೆ. ಮಹತ್ವದ ಪ್ರಗತಿಯಲ್ಲಿ, ಹೈದರಾಬಾದ್ ಪೊಲೀಸರ ಸೈಬರ್ ಕ್ರೈಮ್ ವಿಭಾಗವು ಕಾಂಬೋಡಿಯಾ, ದುಬೈ ಮತ್ತು ಚೀನಾದಲ್ಲಿ ಸಂಪರ್ಕ ಹೊಂದಿರುವ 903 ಕೋಟಿ ರೂಪಾಯಿ […]

ಶಿರೂರು, ಕಡ್ತಲದಲ್ಲಿ ಅಧಿಕಾರಿಗಳ ಗ್ರಾಮವಾಸ್ತವ್ಯ

ಉಡುಪಿ:ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಅಕ್ಟೋಬರ್ 15 ರಂದು ಬೆಳಗ್ಗೆ 11 ಗಂಟೆಗೆ ಉಡುಪಿ ತಾಲೂಕು ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿರೂರು ಗ್ರಾಮದ ಕಲ್ಲಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ನಡೆಸಲಿದ್ದು, ಶಿರೂರು ಗ್ರಾಮದ ಗ್ರಾಮಸ್ಥರು ತಮ್ಮ ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಕರಣಿಕರ ಕಚೇರಿಯಲ್ಲಿ ನೀಡಬಹುದಾಗಿದೆ. ಕಡ್ತಲ ಗ್ರಾಮದಲ್ಲಿ ಕಾರ್ಕಳ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಕಳ ತಾಲೂಕು ತಹಶೀಲ್ದಾರರು ಅಕ್ಟೋಬರ್ 15 ರಂದು ಬೆಳಗ್ಗೆ […]