ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ ಆರೈಕೆ ದಿನವನ್ನು ಆಚರಿಸಲಾಯಿತು.
ಮಣಿಪಾಲ: ಅಕ್ಟೋಬರ್ ಎರಡನೇ ಶನಿವಾರದಂದು ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ ಆರೈಕೆ ದಿನವನ್ನು ಆಚರಿಸಲಾಗುತ್ತದೆ. ವಾಯ್ಸ್ ಫಾರ್ ವಿಶ್ರಾಂತಿ ದಿನವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಅದೇ ದಿನ ಆಚರಿಸಲಾಗುತ್ತದೆ. ವಿಶ್ವ ಹಾಸ್ಪೈಸ್ ಮತ್ತು ಪ್ರಶಾಮಕ ಆರೈಕೆ ದಿನವನ್ನು ಆಚರಿಸುವುದರ ಮುಖ್ಯ ಉದ್ದೇಶ ಪ್ರಶಾಮಕ ಆರೈಕೆ ಅಗತ್ಯಗಳನ್ನು ಪರಿಹರಿಸುವುದು ಮತ್ತು ಅವಶ್ಯವಿರುವ ರೋಗಿಗಳಿಗೆ ಪ್ರಶಾಮಕ ಆರೈಕೆಯ ಅರಿವು ಹೆಚ್ಚಿಸುವ ದೃಷ್ಟಿಯನ್ನು ಹಂಚಿಕೊಳ್ಳುವುದು. ಈ ಅಭಿಯಾನವು ಜೀವನ-ಸೀಮಿತ ಕಾಯಿಲೆಯಿಂದ ಬಳಲುತ್ತಿರುವ ಜನರು ಮತ್ತು ಅವರ ಕುಟುಂಬಗಳ ವೈದ್ಯಕೀಯ, ಸಾಮಾಜಿಕ, ಪ್ರಾಯೋಗಿಕ […]
ತುಳು ಭಾಷೆಗೆ ಸಂವಿಧಾನಿಕ ಮಾನ್ಯತೆಗಾಗಿ ಅಕ್ಟೋಬರ್ 10 ರಂದು ಮಿನಿ ವಿಧಾನಸೌಧದೆದುರು ಪ್ರತಿಭಟನೆ
ಮಂಗಳೂರು/ಉಡುಪಿ: ತುಳುನಾಡಿನ ಮತ್ತು ತುಳುವರ ಮಾತೃ ಭಾಷೆ ತುಳುವಿಗೆ ಭಾರತೀಯ ಸಂವಿಧಾನದ 347 ನೇ ವಿಧಿಯ ಪ್ರಕಾರ ಕರ್ನಾಟಕದ ಅಧಿಕೃತ ಭಾಷೆ ಎಂದು ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಅಕ್ಟೋಬರ್ 10 ರಂದು ಬೆಳಿಗ್ಗೆ 9.30 ಗಂಟೆಯಿಂದ ಮಂಗಳೂರಿನ ಮಿನಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ. ಭಾರತೀಯ ಸಂವಿಧಾನದ 29 ನೇ ವಿಧಿಯು ವಿಶಿಷ್ಟವಾದ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿರುವ ನಾಗರಿಕರ ಒಂದು ವಿಭಾಗವು ಅದನ್ನು ಸಂರಕ್ಷಿಸುವ ಹಕ್ಕನ್ನು ಹೊಂದಿದೆ ಎಂದು ಹೇಳಿದೆ. ತುಳುವಿಗೆ ತನ್ನದೇ […]
ನಿಮ್ಮ ಸ್ಮಾರ್ಟ್ ಫೋನ್ 5ಜಿ ಸೇವೆಗೆ ತಯಾರಾಗಿದೆಯೆ?
ದೇಶಾದ್ಯಂತ 5ಜಿ ಸೇವೆಗಳು ಲಭಿಸುವ ದಿನಗಳು ಇನ್ನು ಹೆಚ್ಚು ದೂರವಿಲ್ಲ. ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ಕಂಪನಿಗಳು ದೇಶದ ಕೆಲವು ಭಾಗಗಳಲ್ಲಿ ತಮ್ಮ 5ಜಿ ಸೇವೆಗಳನ್ನು ಈಗಾಗಲೇ ಪ್ರಾರಂಭಿಸಿವೆ. ಏರ್ಟೆಲ್ 5ಜಿ ಈಗಾಗಲೇ ಕಳೆದ ವಾರದಿಂದ 8 ನಗರಗಳಲ್ಲಿ ಲಭ್ಯವಿದೆ ಮತ್ತು ಇಂದಿನಿಂದ ಜಿಯೋ 5ಜಿ ಸೇವೆಯು 4 ನಗರಗಳಲ್ಲಿ ಲಭ್ಯವಿರಲಿದೆ. ಎಲ್ಲಾ ಸ್ಮಾರ್ಟ್ಫೋನ್ಗಳು ಏರ್ಟೆಲ್ ಅಥವಾ ಜಿಯೋ 5 ಜಿ ಅನ್ನು ಬೆಂಬಲಿಸುವುದಿಲ್ಲ. 5ಜಿ ನೆಟ್ವರ್ಕ್ ಹೊಂದಿರುವ ಸ್ಮಾರ್ಟ್ಫೋನ್ಗಳು ಮಾತ್ರ ಜಿಯೋ ಮತ್ತು ಏರ್ಟೆಲ್ ನಿಂದ […]
ಅಪ್ಪು ಗಂಧದಗುಡಿಗೆ ಶುಭ ಹಾರೈಸಿದ ಪ್ರಧಾನಿ ಮೋದಿ
ಅಪ್ಪು ಜಗತ್ತಿನಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ನೆಲೆಸಿದ್ದಾರೆ. ಅವರು ತೇಜಸ್ಸಿನ ಪ್ರತೀಕ, ಚೈತನ್ಯದ ಚಿಲುಮೆ ಮತ್ತು ಸರಿಸಾಟಿಯಿಲ್ಲದ ಪ್ರತಿಭಾವಂತರಾಗಿದ್ದರು. ‘ಗಂಧದ ಗುಡಿ’ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗು ಪರಿಸರ ಸಂರಕ್ಷಣೆಗೆ ಸಲ್ಲಿಸಲಾದ ಗೌರವ. ಈ ಪ್ರಯತ್ನಕ್ಕೆ ನನ್ನ ಶುಭ ಹಾರೈಕೆಗಳು ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಗಂಧದ ಗುಡಿ ಚಿತ್ರ ಬಿಡುಗಡೆ ಬಗ್ಗೆ ಪ್ರಧಾನಿ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟಿಸಿದ್ದರು. ನಮಸ್ತೆ ನರೇಂದ್ರ ಮೋದಿ ಅವರೇ, ಅಪ್ಪು ಅವರ […]
ಮಹಾರಾಷ್ಟ್ರದ ಲಾತೂರಿನಲ್ಲಿ 12 ನೇ ಶತಮಾನದ ಚಾಲುಕ್ಯ ಶಿಲಾಶಾಸನ ಪತ್ತೆ
ಲಾತೂರ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿಲಂಗಾ ತಾಲ್ಲೂಕಿನ ಕಾಸರ್ ಬಾಲ್ಕುಂದ ಗ್ರಾಮದಲ್ಲಿ 12 ನೇ ಶತಮಾನದ್ದೆನ್ನಲಾದ ಕಲ್ಯಾಣದ ಚಾಲುಕ್ಯರ ಕಾಲದ ಕನ್ನಡ ಲಿಪಿಯ ಶಿಲಾಸನವೊಂದು ಪತ್ತೆಯಾಗಿದೆ. 24 ಸಾಲುಗಳ ಶಾಸನವು ಹಳೆಗನ್ನಡದಲ್ಲಿದೆ. ಮಹಾರಾಷ್ಟ್ರದ ವಿದ್ಯುತ್ ಉಪ ಕೇಂದ್ರದ ನಿರ್ವಾಹಕ ಕೃಷ್ಣ ತ್ರಯಂಬಕ ಗುಡಡೆ ಎನ್ನುವವರು ಈ ಶಾಸನವನ್ನು ಪತ್ತೆಹಚ್ಚಿದ್ದಾರೆ. ಕೃಷ್ಣರವರು ಇದುವರೆಗೆ 10 ಶಿಲಾಸಾನಗಳನ್ನು ಪತ್ತೆ ಹಚ್ಚಿದ್ದು, ಇದರಲ್ಲಿ ಆರು ಕನ್ನಡ ಲಿಪಿಯಲ್ಲಿದ್ದರೆ, ಉಳಿದ ನಾಲ್ಕು ದೇವನಾಗರಿ ಲಿಪಿಯಲ್ಲಿದೆ. ಶಾಸನವು ಅದರ ಪ್ರತಿಷ್ಠಾಪನೆಯ ದಿನಾಂಕವನ್ನು ರೌದ್ರ ಸಂವತ್ಸರ […]