ಅಕ್ಟೋಬರ್ 12 ರಂದು ಹೆಬ್ರಿ ತಾ.ಪಂ ಜಮಾಬಂದಿ ಕಾರ್ಯಕ್ರಮ
ಉಡುಪಿ: ಹೆಬ್ರಿ ತಾಲೂಕು ಪಂಚಾಯತ್ನ 2021-22 ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಗಳ ಜಮಾಬಂದಿ ಕಾರ್ಯಕ್ರಮವು ಅಕ್ಟೋಬರ್ 12 ರಂದು ಬೆಳಗ್ಗೆ 10.30 ಕ್ಕೆ ಹೆಬ್ರಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ತೆಂಕಪೇಟೆ ಶಾರದಾ ವಿಸರ್ಜನೆ, ಕೊಂಕಣಿ ಯಕ್ಷಗಾನ ಪ್ರದರ್ಶನ
ತೆಂಕಪೇಟೆ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶಾರದಾ ದೇವಿಗೆ ದೇವಳದ ಅರ್ಚಕ ದಯಾಘನ್ ಭಟ್ ಮಹಾ ಮಂಗಳಾರತಿ ಬೆಳಗಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಗುರುವಾರದಂದು ಸಂಜೆ ಶ್ರೀ ಶಾರದಾ ದೇವಿಯ ಉತ್ಸವವು ದೇವಾಲಯದಿಂದ ಹೊರಟು ಐಡಿಯಲ್ ಸರ್ಕಲ್, ಡಯಾನಾ ಸರ್ಕಲ್, ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್, ಕೊಳದಪೇಟೆ ಮೂಲಕ ದೇವಾಲಯಕ್ಕೆ ಬಂದು ದೇವಾಲಯದ ಪದ್ಮ ಸರೋವರದಲ್ಲಿ ಶಾರದಾ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಶೋಭಾಯಾತ್ರೆಯ ಸಮಯ ಉಡುಪಿ ನಗರವನ್ನು ತಳಿರು ತೋರಣ ವಿದ್ಯುತ್ ದೀಪಗಳಿಂದ ಅಲಂಕರಿತಗೊಳಿಸಲಾಗಿತ್ತು. […]
ಅಕ್ಟೋಬರ್ 13 ರಿಂದ16 ರವರೆಗೆ ದಕ್ಷಿಣ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ: ಲಾಂಛನ ಬಿಡುಗಡೆ
ಮಂಡ್ಯ: ಇಲ್ಲಿನ ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ದಕ್ಷಿಣ ಭಾರತದ ಮಹಾಕುಂಭಮೇಳದ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶುಕ್ರವಾರದಂದು ಬಿಡುಗಡೆಗೊಳಿಸಿದರು. ಅಕ್ಟೋಬರ್ 13,14,15,16 ರಂದು ಕೆಆರ್ ಪೇಟೆಯ ಅಂಬಿಗರಹಳ್ಳಿ, ಸಂಗಾಪುರ ಹಾಗೂ ಪುರದ ಕಾವೇರಿ-ಹೇಮಾವತಿ-ಲಕ್ಷ್ಮಣ ತೀರ್ಥಗಳ ಸಮಾಗಮವಾಗುವ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿದಿನ ಗಂಗಾರತಿ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಹಾಕುಂಭಮೇಳದ ವಿಶೇಷ ಲಾಂಛನ ಸಿದ್ದಪಡಿಸಲಾಗಿದೆ. ಮಹಾಕುಂಭಮೇಳದ ಸಿದ್ದತೆ ಕುರಿತು ಬೊಮ್ಮಾಯಿಯವರು ಮಾಹಿತಿ ಪಡೆದುಕೊಂಡಿದ್ದಾರೆ. ಇದು ರಾಜ್ಯದ ಮಹತ್ವದ […]
ಪ.ಜಾತಿ/ಪ.ಪಂಗಡದ ಮೀಸಲಾತಿ ಏರಿಕೆಗೆ ರಾಜ್ಯ ಸರ್ಕಾರ ನಿರ್ಧಾರ: ಪ.ಜಾತಿಗೆ 17ಶೇ ಮತ್ತು ಪ.ಪಂಗಡಕ್ಕೆ 7ಶೇ ಏರಿಕೆ
ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಸಂಬಂಧಿಸಿದಂತೆ ಸರ್ವ ಪಕ್ಷ ಸಭೆಯಲ್ಲಿ ಕಾನೂನು ಮತ್ತು ಸಂವಿಧಾನಾತ್ಮಕವಾಗಿ ಮೀಸಲಾತಿ ಹೆಚ್ಚಿಸುವ ಕುರಿತು ಸರ್ವಸಮ್ಮತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ನ್ಯಾ.ನಾಗಮೋಹನ್ ದಾಸ್ ವರದಿ ಪ್ರಕಾರ ಪರಿಶಿಷ್ಟ ಜಾತಿ ಸಮುದಾಯಕ್ಕೆ ಶೇ.15 ರಿಂದ ಶೇ.17 ಹಾಗೂ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ.3 ರಿಂದ ಶೇ.7 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದ […]
ಯಾವುದೇ ಆ್ಯಪ್ ಬಳಸಿ ಆದರೆ ವಾಟ್ಸಾಪ್ ನಿಂದ ದೂರವಿರಿ ಎಂದರೇಕೆ ಟೆಲಿಗ್ರಾಂ ಸಂಸ್ಥಾಪಕ ಪಾವೆಲ್ ಡುರೊವ್?
ತ್ವರಿತ ಸಂದೇಶ ಸೇವೆ ಟೆಲಿಗ್ರಾಮ್ನ ಸಂಸ್ಥಾಪಕ ಪಾವೆಲ್ ಡುರೊವ್ ತಮ್ಮ ಟೆಲಿಗ್ರಾಮ್ ಚಾನೆಲ್ನಲ್ಲಿ ಮಾತನಾಡಿ,13 ವರ್ಷಗಳಿಂದ ಕಣ್ಗಾವಲು ಸಾಧನವಾಗಿರುವ ವಾಟ್ಸಾಪ್ ನಿಂದ ದೂರವಿರಬೇಕು ಎಂದು ಹೇಳಿದ್ದಾರೆ. ಪ್ರತಿ ವರ್ಷ ವಾಟ್ಸಾಪ್ನಲ್ಲಿ ಸಮಸ್ಯೆ ಉಂಟಾಗುತ್ತಿದ್ದು, ಅದು ತನ್ನ ಬಳಕೆದಾರರ ಡೇಟಾವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಇಲ್ಲಿ ಟೆಲಿಗ್ರಾಮ್ ಉಪಯೋಗಿಸಲು ಜನರನ್ನು ಒತ್ತಾಯಿಸುತ್ತಿಲ್ಲ. 700ಮಿ+ ಸಕ್ರಿಯ ಬಳಕೆದಾರರು ಮತ್ತು 2ಮಿ+ ದೈನಂದಿನ ಸೈನ್ಅಪ್ಗಳೊಂದಿಗೆ, ಟೆಲಿಗ್ರಾಮ್ಗೆ ಹೆಚ್ಚುವರಿ ಪ್ರಚಾರದ ಅಗತ್ಯವಿಲ್ಲ. ನೀವು ಇಷ್ಟಪಡುವ ಯಾವುದೇ ಸಂದೇಶ […]