ದುರ್ಗಾ ವೇಷ ಧರಿಸಿ ರಸ್ತೆ ಗುಂಡಿಯಲ್ಲಿ ನಡೆದ ಬಾಲಕಿ: ಹುಬ್ಬಳ್ಳಿಯ ನಗರ ಪಾಲಿಕೆ ಗಮನ ಸೆಳೆಯಲು ವಿನೂತನ ವಿಧಾನ
ಹುಬ್ಬಳ್ಳಿ: 2ನೇ ತರಗತಿಯ ಬಾಲಕಿಯೊಬ್ಬಳು ನವರಾತ್ರಿಯ ವೇಳೆ ದುರ್ಗೆಯ ವೇಷ ಧರಿಸಿ ಇಲ್ಲಿನ ಕೊಚ್ಚೆ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಡೆದಿದ್ದಾಳೆ. ಹುಬ್ಬಳ್ಳಿಯ ರಸ್ತೆಗಳ ದುರವಸ್ಥೆಯ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ಆಕೆ ಈ ಕ್ರಮ ಕೈಗೊಂಡಿದ್ದಾಳೆ. 9 ವರ್ಷದ ಹರ್ಷಿತಾ ಎಂದು ಗುರುತಿಸಲಾದ ಬಾಲಕಿಯು ದುರ್ಗೆಯ ವೇಷ ಧರಿಸಿ ಮಳೆನೀರಿನ ಕೊಚ್ಚೆ, ಕೆಸರಿನಿಂದ ತುಂಬಿರುವ ಹೊಂಡಗಳಿಂದ ಕೂಡಿದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಒಂದು ಹರಿದಾಡುತ್ತಿದೆ. ಕೆಸರಿನ ನೀರಿನಿಂದ ತುಂಬಿದ ಅಂತಹ ಒಂದು ಗುಂಡಿಯ ಮಧ್ಯದಲ್ಲಿ ಆಕೆ […]
ನೇಕಾರರ ಮಕ್ಕಳ ಉನ್ನತ ಶಿಕ್ಷಣಕ್ಕೆ ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ವಿದ್ಯಾರ್ಥಿವೇತನ
ಉಡುಪಿ: ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ನೇಕಾರರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ರಾಜ್ಯದಲ್ಲಿ ನೋಂದಣಿಯಾದ ಶಿಕ್ಷಣ ಸಂಸ್ಥೆಗಳಲ್ಲಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ, ಬಿ.ಎ, ಬಿ.ಎಸ್ಸಿ, ಬಿ.ಕಾಂ, ಎಲ್.ಎಲ್.ಬಿ, ಪ್ಯಾರಾ ಮೆಡಿಕಲ್, ಬಿ.ಫಾರ್ಮಾ, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ಹಾಗೂ ಎಂ.ಬಿ.ಬಿ.ಎಸ್, ಬಿ.ಇ, ಬಿ.ಟೆಕ್ ಮತ್ತು ಇತರೆ ಸ್ನಾತಕೋತ್ತರ ಕೋರ್ಸ್ಗಳನ್ನು ವ್ಯಾಸಾಂಗ ಮಾಡುತ್ತಿರುವ ನೇಕಾರರ ಮಕ್ಕಳಿಂದ ವಿದ್ಯಾರ್ಥಿವೇತನಕ್ಕೆ ಸೇವಾಸಿಂಧು ತಂತ್ರಾಂಶದ ಮೂಲಕ ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳಿಗೆ […]
ಮಾಹೆ ಗಾಂಧಿಯನ್ ಸೆಂಟರಿನಲ್ಲಿ ಗಾಂಧಿ ಜಯಂತಿ ಆಚರಣೆ
ಮಣಿಪಾಲ: ಜಾತಿ, ಧರ್ಮ, ಬಣ್ಣ, ಜನಾಂಗ ಇತ್ಯಾದಿ ತಾರತಮ್ಯದಿಂದ ಮುಕ್ತವಾದ ಮತ್ತು ಶಾಂತಿ, ಸಮಾನತೆ, ಅಹಿಂಸೆ ಮತ್ತು ಸಹಿಷ್ಣುತೆಯ ಮೇಲೆ ಆಧರಿತವಾದ ‘ಗಾಂಧಿಯ ಪ್ರಾಪಂಚಿಕ ದೃಷ್ಟಿ ಮತ್ತು ಪ್ರಪಂಚ’ ಬೇಕು ಎಂದು ಮಾಹೆಯ ಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ಪ್ರತಿಪಾದಿಸಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ಗಾಂಧಿ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯವರು ಆದರ್ಶಪ್ರಾಯವಾದ ಜೀವನ ನಡೆಸಿದವರು ಮತ್ತು ಅವರ ಆದರ್ಶಗಳ […]
ನಾಟಾ ಪರೀಕ್ಷೆಯಲ್ಲಿ ಎಕ್ಸ್ ಪರ್ಟ್ ಕಾಲೇಜು ವಿದ್ಯಾರ್ಥಿಗಳ ಸಾಧನೆ
ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆಗೊಳಿಸಿದ ರಾಜ್ಯ ಮಟ್ಟದ ಆರ್ಕಿಟೆಕ್ಚರ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬಿ. ಆದಿತ್ಯ ಹೊಳ್ಳ ಅವರು 4ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಆರ್ಯ ಜಾದವ್ (48), ನಿತ್ಯಾಶ್ರೀ ಎಚ್.ಎಲ್. (101), ಮೇಘನಾ ಹನುಮಂತ್ ನಾಯ್ಕ್ (156), ಸಂಜನಾ ರಾಜೇಂದ್ರಕುಮಾರ್ ಅಂಗಡಿ (218), ಪ್ರಾರ್ಥನ್ ಎಂ.ಬೇವೂರು (263), ಚಿರಂತ್ ಎಸ್. (300), ಗಗನ್ ದೀಪ್ ಡಿ.ಎಂ. (391), ಅಕ್ಷತಾ ಎಚ್. ಮಸದಾರ್ (396), ಸಿಂಚನಾ ಕೆ. (458), ಅತೀಶ್ […]
ಅ. 6 ರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ನೇರ ನೇಮಕಾತಿಗಾಗಿ ದಾಖಲೆಗಳ ಪರಿಶೀಲನೆ
ಉಡುಪಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8 ನೇ ತರಗತಿ) ನೇರ ನೇಮಕಾತಿಗೆ ಸಂಬಂಧಿಸಿದಂತೆ 1:2 ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು schooleducation.kar.nic.in ನಲ್ಲಿ ಪ್ರಕಟಿಸಲಾಗಿರುತ್ತದೆ. ಸದರಿ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಕಾರ್ಯವು, ಮಣಿಪಾಲದ ರಜತಾದ್ರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿನ ಸಮಾಜ ವಿಷಯದ 1 ರಿಂದ 40 ರ ವರೆಗಿನ ಕ್ರಮ ಸಂಖ್ಯೆಯ ಅಭ್ಯರ್ಥಿಗಳಿಗೆ ಅಕ್ಟೋಬರ್ 6 ರಂದು ಬೆಳಗ್ಗೆ ಹಾಗೂ 41 ರಿಂದ 100 […]