ಮಲ್ಪೆ-ಹೆಬ್ರಿ ಚತುಷ್ಪಥದಲ್ಲಿ ಟೋಲ್ ಸಂಗ್ರಹಣೆ ಇಲ್ಲ: ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯ ಮಲ್ಪೆ-ಹೆಬ್ರಿ ನಡುವಿನ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಸಿದ್ದವಾದ ಬಳಿಕ ಯಾವುದೇ ಟೋಲ್ ಅಥವಾ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುವುದಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ಹೇಳಿದರು. ಪೆರ್ಡೂರಿನಲ್ಲಿ ರಾಹೆ-169ಎ ವಿಭಾಗದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಸಚಿವೆ, ಮಲ್ಪೆಯಿಂದ ಹೆಬ್ರಿವರೆಗಿನ ವಿಸ್ತರಣೆಯು ಉಡುಪಿಯಲ್ಲಿ ಅಭಿವೃದ್ಧಿ ಮತ್ತು ಅವಕಾಶಗಳ ಹೊಸ ಅಲೆಯನ್ನು ಅನಾವರಣಗೊಳಿಸುತ್ತದೆ. ಈ ಸಂಪರ್ಕವನ್ನು ನವೀಕರಿಸಲು ಮೋದಿ ಸರ್ಕಾರವು […]

ಹಿಂದೂಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಅಪ್ರೆಂಟಿಶಿಪ್

ಉಡುಪಿ: ಹಿಂದೂಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್ ತರಬೇತಿ ಸಂಸ್ಥೆಯ ವತಿಯಿಂದ ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಎಲೆಕ್ಟ್ರಿಷಿಯನ್, ವೆಲ್ಡರ್, ಸಿ.ಓ.ಪಿ.ಎ, ಫೌಂಡ್ರಿಮ್ಯಾನ್ ಮತ್ತು ಶೀಟ್ ಮೆಟಲ್ ವರ್ಕರ್ ಟ್ರೇಡ್‌ನಲ್ಲಿ ಅಪ್ರೆಂಟಿಶಿಪ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಮಾನ್ಯತೆ ಪಡೆದ ಐ.ಟಿ.ಐ ಗಳಿಂದ ಕುಶಲಕರ್ಮಿಗಳ ತರಬೇತಿ ಯೋಜನೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 8 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಉಡುಪಿ ಮೊ.ನಂ: 9945856670, 8197440155 […]

ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಹಣಾಹಣಿ

ನವದೆಹಲಿ: ಕರ್ನಾಟಕದ ‘ಸೋಲಿಲ್ಲದ ಸರದಾರ’ ಕಾಂಗ್ರೆಸ್ ಅಧ್ಯಕ್ಷಗಿರಿಗೆ ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾದರೆ, ಎಸ್ ನಿಜಲಿಂಗಪ್ಪ (1968-69) ನಂತರ ಕರ್ನಾಟಕದಿಂದ ಆಯ್ಕೆಯಾದ ಎಐಸಿಸಿಯ ಎರಡನೇ ಅಧ್ಯಕ್ಷರಾಗುತ್ತಾರೆ. ರಾಜಕೀಯದಲ್ಲಿ 50 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಖರ್ಗೆ ಅವರು ದಕ್ಷಿಣ ಭಾರತದಿಂದ ಅಧ್ಯಕ್ಷ ಗಾದಿಗೆ ಸ್ಪರ್ಧಿಸುವ ಆರನೇ ಕಾಂಗ್ರೆಸ್ಸಿಗ. ಒಂದು ವೇಳೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಆಯ್ಕೆಯಾದಲ್ಲಿ ಖರ್ಗೆಯವರು ಜಗಜೀವನ್ ರಾಮ್ ನಂತರ ಉನ್ನತ ಹುದ್ದೆಯನ್ನು ಅಲಂಕರಿಸಿದ ಎರಡನೇ ದಲಿತ ನಾಯಕರಾಗಲಿದ್ದಾರೆ. […]

ಅಕ್ಟೋಬರ್ 2 ರಂದು ಗಾಂಧಿ ಭವನ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ

ಉಡುಪಿ: ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಇವರ ಸಹಯೋಗದಲ್ಲಿ ಗಾಂಧಿ ಭವನ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನಾ ಕಾರ್ಯಕ್ರಮವು ಅಕ್ಟೋಬರ್ 2 ರಂದು ಬೆಳಗ್ಗೆ 9.30 ಕ್ಕೆ ನಗರದ ಅಜ್ಜರಕಾಡು ಭುಜಂಗಪಾರ್ಕ್ ಹತ್ತಿರ ನಡೆಯಲಿದೆ. ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.

ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಕೆ ಪ್ರಶಾಂತ್ ಬಾಳಿಗಾ ಅವಿರೋಧ ಆಯ್ಕೆ

ಉಡುಪಿ: ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ 30 ನೇ ವಾರ್ಷಿಕ ಮಹಾಸಭೆ ಸೆ. 25 ರಂದು ಸಂಘದ ಕೋಟೇಶ್ವರ ಗೋವಿಂದರಾಯ ವಿಠ್ಠಲ್ ಕಾಮತ್ ಸಭಾಂಗಣದಲ್ಲಿ ಜರುಗಿತು. ಕೆ ಪ್ರಶಾಂತ್ ಬಾಳಿಗಾ, ಕೆ.ಕೆ. ಫಿಶ್ ನೆಟ್ ಕೋ ನೇಜಾರ್ ಇವರು 2022-2023 ಸಾಲಿಗೆ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹರೀಶ್ ಕುಂದರ್, ಯು ಅಜಿತ್ ಶೆಣೈ, ಎಂ ವಸಂತ್ ಕಿಣಿ, ಕಾರ್ಯದರ್ಶಿಯಾಗಿ ಎಂ ವಲ್ಲಭ್ ಭಟ್, ಕೋಶಾಧಿಕಾರಿಯಾಗಿ ಕೃಷ್ಣ ಪ್ರಸಾದ್, ಜೊತೆ ಕಾರ್ಯದರ್ಶಿಯಾಗಿ ಕೆ ಸುರೇಶ ಶೆಣೈ, […]