ನಿಟ್ಟೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂದೀಪ್ ಕುಮಾರ್ ಹೆಗ್ಡೆ ಇವರಿಗೆ ಡಾಕ್ಟರೇಟ್

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ಕುಮಾರ್ ಹೆಗ್ಡೆ ಅವರು ‘ಎಫೀಶಿಯೆಂಟ್ ಮೆಶಿನ್ ಲರ್ನಿಂಗ್ ಟೆಕ್ನಿಕ್ಸ್ ಫಾರ್ ಇಂಪ್ರೂವಿಂಗ್ ದಿ ಪ್ರಿಡಿಕ್ಷನ್ ಆಫ್ ಕ್ರೋನಿಕ್ ಡಿಸೀಸ್’ ಎಂಬ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯನ್ನು ನೀಡಿದೆ. ಇವರು ಬೆಂಗಳೂರಿನ ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ […]
ಗುಡ್ಡೆಯಂಗಡಿ: ಬಸ್- ಬೈಕ್ ಮುಖಾಮುಖಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಹಿರಿಯಡಕ: ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರಿಯಡಕ ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಮೀನು ಮಾರುಕಟ್ಟೆ ಬಳಿ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಗುಡ್ಡೆಯಂಗಡಿ ನೆಡ್ಲು ಬೈಲು ನಿವಾಸಿ 33 ವರ್ಷದ ಮನೋಹರ ಜೋಗಿ ಎಂದು ಗುರುತಿಸಲಾಗಿದೆ. ಮನೋಹರ್ ವಾಹನ ಚಾಲಕರಾಗಿದ್ದು, ಕೆಲಸ ಮುಗಿಸಿ ಹಿರಿಯಡಕದಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾರ್ಕಳದಿಂದ ಉಡುಪಿಗೆ ಬರುತ್ತಿದ್ದ ಗಣೇಶ್ ಬಸ್ ಮನೋಹರ್ ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. […]
ಕಳತ್ತೂರು ಅಂಗನವಾಡಿಯಲ್ಲಿ ಪೋಷಣೆ ಅಭಿಯಾನ ಕಾರ್ಯಕ್ರಮ

ಕಳತ್ತೂರು: ಗ್ರಾಮದ 3 ಅಂಗನವಾಡಿ ಕೇಂದ್ರದ ಪೋಷಣೆ ಅಭಿಯಾನ ಕಾರ್ಯಕ್ರಮ ಕಳತ್ತೂರು ಅಂಗನವಾಡಿಯಲ್ಲಿ ನಡೆಯಿತು. ಪೋಷಣೆ ಅಭಿಯಾನ ಕಾರ್ಯಕ್ರಮದಲ್ಲಿ ಮೊಳಕೆ ಬರಿಸಿದ ಹೆಸರುಕಾಳು, ಪೌಷ್ಟಿಕ ಆಹಾರ, ತರಕಾರಿ -ಸೊಪ್ಪುಗಳಿಂದ ಸಿಗುವಂತಹ ಪ್ರಯೋಜನಗಳ ಮಾಹಿತಿ ನೀಡಲಾಯಿತು. ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಮಾಜ ಸೇವಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಾರೂಕ್ ಚಂದ್ರನಗರ ಮಾತನಾಡಿ, ಕಳತ್ತೂರು ಅಂಗನವಾಡಿಯವರ ಕೆಲಸ ಶ್ಲಾಘನಿಯ ಇವರ ಸಮಾಜ ಮುಖಿ ಕೆಲಸ ದೇವರು ಮೆಚ್ಚುವಂತಹದು ಎಂದರು. ಈ […]
ನೀಲಾವರ ಶರನ್ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ಶ್ರೀ ಕ್ಷೇತ್ರ ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆ. 26 ರಿಂದ ಅ. 5ರವರೆಗೆ ನಡೆಯಲಿರುವ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಸೋಮವಾರ ದುರ್ಗಾ ಹೋಮ ನಡೆಯಿತು. ಸಂಜೆ ಶರನ್ನವರಾತ್ರಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಉಡುಪಿ ಶಾಸಕ ರಘುಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೀಲಾವರ ದೇವಳದ ಸಮೀಪದ ಸೀತಾ ನದಿಗೆ 5 ಕೋಟಿ ರೂ. ವೆಚ್ಚದಲ್ಲಿ ಸ್ಥಾನಘಟ್ಟ ನಿರ್ಮಿಸಲು ಈಗಾಗಲೇ ಕಾರ್ಯ ಆರಂಭವಾಗಿದೆ ಮತ್ತು ಭಕ್ತರ ಅನುಕೂಲಕ್ಕಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಯಲಿದೆ […]
ಯುಎಪಿಎ ಅಧಿಕಾರ ಚಲಾಯಿಸಿ ಪಿಎಫ್‌ಐ ನಿಗ್ರಹಿಸಿ: ರಾಜ್ಯಗಳಿಗೆ ಕೇಂದ್ರದ ನಿರ್ದೇಶನ

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿಗಳು ಮತ್ತು ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಸಂಘಗಳೆಂದು ಘೋಷಿಸಿದ ನಂತರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ(ಯುಎಪಿಎ), 1967 ರ ಅಧಿಕಾರವನ್ನು ಅವುಗಳ ವಿರುದ್ಧ ಚಲಾಯಿಸಲು ಕೇಂದ್ರ ಸರ್ಕಾರವು ನಿರ್ದೇಶನ ನೀಡಿದೆ. ನಿನ್ನೆ ಹೊರಡಿಸಿದ ಅಧಿಸೂಚನೆಯಲ್ಲಿ, ಕೇಂದ್ರ ಸರ್ಕಾರವು ಪಿಎಫ್‌ಐ, ಅದರ ಸಹವರ್ತಿಗಳು ಮತ್ತು ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಸಂಘ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಘೋಷಿಸಿದೆ. ಪಿಎಫ್‌ಐ ಮತ್ತು ಸಂಬಂಧಿತ […]