ಉಡುಪಿ: ಅಪಾರ್ಟ್ ಮೆಂಟ್ ಮಹಡಿಯಿಂದ ಕೆಳಗೆ ಬಿದ್ದು 13 ವರ್ಷದ ಬಾಲಕ ಮೃತ್ಯು
ಉಡುಪಿ ಕನ್ನರ್ಪಾಡಿ ಜಯದುರ್ಗಾ ದೇವಸ್ಥಾನದ ಬಳಿಯ ಫ್ಲ್ಯಾಟ್ ನ ಅಪಾರ್ಟ್ ಮೆಂಟ್ ನಲ್ಲಿದ್ದ ಜೇನು ತೆಗೆಯುವುದನ್ನು ನೋಡುತ್ತಿದ್ದ ಬಾಲಕನೋರ್ವ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ಸೆ.22ರಂದು ನಡೆದಿದೆ. ಮೃತ ಬಾಲಕನನ್ನು ಆಂಧ್ರಪ್ರದೇಶ ಮೂಲದ ಪ್ರಸ್ತುತ ಉದ್ಯಾವರದಲ್ಲಿ ನೆಲೆಸಿರುವ ರೀನಾ ಮಂಡೆಲ್ ಎಂಬವರ ಮಗ 13ವರ್ಷ ಪ್ರಾಯದ ಆಶಿಕ್ ಎಂದು ಗುರುತಿಸಲಾಗಿದೆ. ಬಾಲಕನ ತಾಯಿ ರೀನಾ ಮಂಡೆಲ್ ಅವರು ಜೇನು ತೆಗಿಯುವ ಕೆಲಸ ಮಾಡಿಕೊಂಡಿದ್ದು, 3 ದಿನದ ಹಿಂದೆ ಉಡುಪಿಗೆ ಬಂದು ತಮ್ಮ ಸಂಬಂಧಿಕರೊಂದಿಗೆ ಉದ್ಯಾವರ ಚರ್ಚ್ […]
ಚಿಲ್ಲರೆ ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಪ್ಲಾಟ್ ಫಾರ್ಮ್
ನವದೆಹಲಿ: ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒ.ಎನ್.ಡಿ.ಸಿ), ಕೇಂದ್ರ ಸರ್ಕಾರ ಬೆಂಬಲಿತ ಯೋಜನೆಯಾಗಿದ್ದು, ಇದು ದೇಶದ ಎಲ್ಲಾ ಭಾಗಗಳಲ್ಲಿನ ಸಣ್ಣ ವ್ಯಾಪಾರಿಗಳು ಮತ್ತು ಮಾರಾಟಗಾರರಿಗೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಂತಹ ದೊಡ್ಡ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಿಂದ ಸಾಮಾನ್ಯವಾಗಿ ನಿಯೋಜಿಸಲಾದ ಪ್ರಕ್ರಿಯೆಗಳು ಮತ್ತು ತಂತ್ರಜ್ಞಾನಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ದೇಶದ ಚಿಲ್ಲರೆ ವ್ಯಾಪಾರಿಗಳು ಮತ್ತು ಮಾರಾಟಗಾರರು ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಲು ಅಭಿವೃದ್ದಿ ಪಡಿಸಲಾದ ವೇದಿಕೆ ಇದಾಗಿದೆ. ONDC – जल्द आ रहा है E-Commerce […]
ಚೈನ್ನೈ ಬಳಿ 12000 ವರ್ಷ ಪುರಾತನ ಕಲ್ಲಿನ ಕಲಾಕೃತಿಗಳನ್ನು ಪತ್ತೆಮಾಡಿದ ಭಾರತೀಯ ಪುರಾತತ್ವ ಇಲಾಖೆ
ಚೆನ್ನೈ: ಚೆನ್ನೈನ ಹೊರವಲಯದಲ್ಲಿರುವ ಓರಗಡಂನಲ್ಲಿ ಕಲ್ಲಿನ ಉಪಕರಣಗಳನ್ನು ತಯಾರಿಸಲಾಗುತ್ತಿದ್ದ ಪ್ರಾಚೀನ ಸ್ಥಳವನ್ನು ಭಾರತೀಯ ಪುರಾತತ್ವ ಇಲಾಖೆಯು ಉತ್ಖನನ ಮಾಡಿದೆ. ಈ ಪ್ರದೇಶದಲ್ಲಿ ದೊರೆತ ಕಲಾಕೃತಿಗಳು 12000 ವರ್ಷ ಪುರಾತನವಾಗಿದ್ದಿರಬೇಕೆಂದು ಪುರಾತತ್ವ ಇಲಾಖೆಯು ಅನುಮಾನ ವ್ಯಕ್ತಪಡಿಸಿವೆ. ಇಲ್ಲಿ ಅಗೆತ ಮಾಡಿದ ಒಂದೇ ಸ್ಥಳದಲ್ಲಿ ಸಾವಿರಾರು ವರ್ಷಗಳಿಂದ ಕನಿಷ್ಠ ನಾಲ್ಕು ಪ್ರತ್ಯೇಕ ನಾಗರಿಕತೆಗಳು ವಾಸವಾಗಿರುವ ಪುರಾವೆ ದೊರೆತಿದೆ. ವಡಕ್ಕುಪಟ್ಟು ಗ್ರಾಮದಲ್ಲಿ ನಡೆಸಿದ ಉತ್ಖನನದಲ್ಲಿ ಮೆಸೊಲಿಥಿಕ್ ಅವಧಿಯ ಕೈಗೊಡಲಿಗಳು, ಉಜ್ಜುಗಗಳು, ಸೀಳುವ ಮತ್ತು ಕತ್ತರಿಸುವ ಉಪಕರಣಗಳು ದೊರೆತಿವೆ. ಇವುಗಳೆಲ್ಲವೂ ಭೂಮಿಯ ಮೇಲ್ಮೈಯಿಂದ […]
ಉಡುಪಿ ಅನುಮತಿ ಇಲ್ಲದೆ ರಸ್ತೆ ತಡೆ ನಡೆಸಿ ಪ್ರತಿಭಟನೆ: 11 ಮಂದಿ ಪಿಎಫ್ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಉಡುಪಿ: ದೇಶಾದ್ಯಂತ ಪಿಎಫ್ಐ ಕಚೇರಿಗಳ ಮೇಲೆ ಎನ್.ಐ.ಎ ದಾಳಿ ನಡೆಸಿದ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ನಗರದಲ್ಲಿ ಅನುಮತಿ ಇಲ್ಲದೆ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ 11 ಮಂದಿ ಪಿ.ಎಫ್.ಐ ಕಾರ್ಯಕರ್ತರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಸಂಜೆ ಪೂರ್ವಾನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದಲ್ಲದೆ ರಸ್ತೆ ತಡೆ ನಡೆಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಗರದ ಕಲ್ಪನಾ ಟಾಕೀಸ್ ಬಳಿ ಗುರುವಾರ ಸಂಜೆ ಪ್ರತಿಭಟನೆ ನಡೆಸಿದ ಪಿ.ಎಫ್.ಐ ಕಾರ್ಯಕರ್ತರು ರಸ್ತೆ ತಡೆಗೆ ಯತ್ನಿಸಿದಾಗ ಉಡುಪಿ ನಗರ […]
ಉಡುಪಿ: ವ್ಯಕ್ತಿ ನಾಪತ್ತೆ
1: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾರಾಮ (55) ಎಂಬ ವ್ಯಕ್ತಿಯು 2021 ಆಗಸ್ಟ್ 24 ರಂದು ಸಂಜೆ 5.30 ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 168 ಸೆಂ.ಮೀ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ವೃತ್ತ ಕಚೇರಿ ಮೊ.ನಂ: 9480805432, ಕೋಟ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2564155, 9480805454 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ […]