ಉಜ್ಜಯಿನಿ ಮಹಾಕಾಲೇಶ್ವರ ಮಂದಿರ ಕಾರಿಡಾರ್ ಅಭಿವೃದ್ದಿ ಯೋಜನೆಯ ಮೊದಲನೆ ಹಂತ ಪೂರ್ಣ: ಮಂತ್ರಮುಗ್ದಗೊಳಿಸುವ ಮಂದಿರದ ಮೊದಲ ನೋಟ
ಭೋಪಾಲ್: ಉಜ್ಜಯಿನಿಯಲ್ಲಿ 750 ಕೋಟಿ ರೂಪಾಯಿ ವೆಚ್ಚದ ಮಹಾಕಾಲೇಶ್ವರ ದೇವಸ್ಥಾನ ಕಾರಿಡಾರ್ ಅಭಿವೃದ್ಧಿ ಯೋಜನೆಯ ಮೊದಲ ಹಂತವನ್ನು ಅಕ್ಟೋಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ತಿಳಿಸಿದ್ದಾರೆ. ಸಂಪೂರ್ಣ ಕಾಮಗಾರಿಯನ್ನು ಪರಿಶೀಲಿಸಿದ ಚೌಹಾಣ್, ಮೊದಲ ಹಂತವನ್ನು 316 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಮಹಾಕಾಲೇಶ್ವರ ಕಾರಿಡಾರ್‌ನ ಮೊದಲ ಹಂತದ ಭಾಗವಾಗಿ ಅಭಿವೃದ್ಧಿ ಪಡಿಸಿದ ಮೂಲಸೌಕರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 11 ರಂದು ದೇಶಕ್ಕೆ […]
ಗೋಕರ್ಣ ಪರ್ತಗಾಳಿ ಮಠಾಧೀಶರಿಂದ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ಭೇಟಿ
ಉಡುಪಿ: ಭಾನುವಾರದಂದು ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಇಲ್ಲಿನ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ಭೇಟಿ ನೀಡಿದರು. ಗೋಕರ್ಣ ಪರ್ತಗಾಳಿ ಜೀವವೋತ್ತಮ ಮಠಾಧಿಪತಿಯಾಗಿ ಪ್ರಥಮ ಬಾರಿಗೆ ಭೇಟಿ ನೀಡಿದ ಶ್ರೀಪಾದರನ್ನು ತೆಂಕಪೇಟೆಯ ಐಡಿಯಲ್ ಸರ್ಕಲ್ ನಿಂದ ಮೆರವಣಿಗೆಯಲ್ಲಿ ಪೂರ್ಣ ಕುಂಭ ಸ್ವಾಗತ, ಚಂಡೆ, ಮಂಗಳವಾದ್ಯದ ಮೂಲಕ ಸ್ವಾಗತಿಸಿ ದೇವಾಲಯಕ್ಕೆ ಕರೆತರಲಾಯಿತು. ದೇವರ ಭೇಟಿಯ ಬಳಿಕ ವೇದಿಕೆಯಲ್ಲಿನ ಶ್ರೀಮದ್ ಭಾಗವತ ಗೃಂಥಕ್ಕೆ ಆರತಿ ಬೆಳಗಿಸಿದರು. ಪ್ರವಚನಕಾರದ ವಿದ್ವಾನ್ ಅನಂತಕೃಷ್ಣ ಆಚಾರ್ಯರನ್ನು ಶಾಲು ಹೊದಿಸಿ ಗೌರವಿಸಿದರು. ದೇವಳದ […]