4500 ವರ್ಷಗಳ ಹಿಂದೆಯೇ ಸಿಂಧೂ ನಾಗರಿಕತೆಯ ಸಮಯದಲ್ಲಿತ್ತು ಅದ್ಭುತ ಒಳಚರಂಡಿ ವ್ಯವಸ್ಥೆ!
ಆಧುನಿಕ ತಂತ್ರಜ್ಞಾನಗಳನ್ನು ಹೊಂದಿದ್ದೇವೆಂದು ಬೀಗುತ್ತಿರುವ ನಮ್ಮ ನಗರಗಳು ಒಂದೇ ಒಂದು ಮಳೆಗೆ ಮುಳುಗಿ ಹೋಗುತ್ತಿವೆ. ರಾಷ್ಟೀಯ ಹೆದ್ದಾರಿಗಳೆಲ್ಲಾ ನದಿಯಂತಾಗಿ ರಸ್ತೆ ಮೇಲೆ ಸರಾಗವಾಗಿ ಓಡಾಡಬೇಕಾದ ವಾಹನಗಳು ಆಮೆಯಂತೆ ನಿಧಾನವಾಗಿ ಈಜುತ್ತಾ ಸಾಗುವಂತಾಗಿದೆ. ಕೆರೆ, ಕಾಲುವೆಗಳನ್ನೆಲ್ಲಾ ಒತ್ತುವರಿ ಮಾಡಿ, ರಸ್ತೆ ನಿವೇಶನಗಳನ್ನು ನಿರ್ಮಿಸುವಾಗ ಸಮರ್ಪಕ ಒಳಚರಂಡಿ ವ್ಯವಸ್ಥೆಯನ್ನೇ ಮಾಡದೆ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಕಟ್ಟಡ ನಿರ್ಮಾಣಗಳನ್ನು ಮಾಡಿದ್ದರ ಪರಿಣಾಮ ಇಂದು ಹಳ್ಳಿ ನಗರಗಳೆನ್ನದೆ ಎಲ್ಲರನ್ನೂ ಕಾಡುತ್ತಿದೆ. ಇಂತಹ ನಾವು ಕನಿಷ್ಠ 4-5 ಸಾವಿರ ವರ್ಷಗಳ ಇತಿಹಾಸವಿರುವ ಭಾರತದ ಸಿಂಧೂ […]
ಮಂಗಳೂರು: ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನ ಆಚರಣೆ
ಮಂಗಳೂರು: ಸೋಮವಾರದಂದು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಹೆಸರಾಂತ ಇ.ಎನ್.ಟಿ ಶಸ್ತ್ರ ಚಿಕಿತ್ಸಕ ಡಾ.ಕಿಶೋರ್ ಶೆಟ್ಟಿ ಕಾರ್ಯಕರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪದವಿಪೂರ್ವ ಹಂತವೆಂಬುದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಅಡಿಪಾಯ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶಿಸ್ತು, ಸಮರ್ಪಣಾ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ನಮ್ಮ ಕನಸು ಯಾವಾಗಲೂ ದೊಡ್ಡದಾಗಿರಬೇಕು ಎಂದರು. ಈ ಸಂದರ್ಭದಲ್ಲಿಎಕ್ಸ್ಪರ್ಟ್ ನ ನೂತನ ಸಭಾಂಗಣ ‘ಎಕ್ಸ್ಪೋಡಿಯಂ’ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. […]
ಶಿಕ್ಷಕರ ದಿನಾಚರಣೆಯಂದು ಪಿಎಂ-ಶ್ರೀ ಶಾಲಾ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ
ನವದೆಹಲಿ: ಶಿಕ್ಷಕರ ದಿನಾಚರಣೆಯಂದು ಭಾರತದಾದ್ಯಂತದ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣ ಯೋಜನೆಗೆ ಪ್ರಧಾನಿ ಮೋದಿ ಶ್ರೀ ಕಾರ ನೀಡಿದ್ದಾರೆ. ಸೋಮವಾರ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ, “ಇಂದು, ಶಿಕ್ಷಕರ ದಿನದಂದು ನಾನು ಹೊಸ ಉಪಕ್ರಮವನ್ನು ಘೋಷಿಸಲು ಸಂತೋಷಪಡುತ್ತೇನೆ. ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ (PM-SHRI) ಯೋಜನೆ ಅಡಿಯಲ್ಲಿ ಭಾರತದಾದ್ಯಂತ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣವಾಗಲಿದೆ. ಇವುಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಪೂರ್ಣ ಚೈತನ್ಯವನ್ನು ಆವರಿಸುವ ಮಾದರಿ ಶಾಲೆಗಳಾಗುತ್ತವೆ” […]
ಶ್ರೀ ಸಿದ್ಧಿ ವಿನಾಯಕ ಫ್ರೆಂಡ್ಸ್ ಕುಮ್ರಗೊಡು ವತಿಯಿಂದ ಬಾಲಕನಿಗೆ ಧನಸಹಾಯ
ಬ್ರಹ್ಮಾವರ : ಶ್ರೀ ಸಿದ್ಧಿ ವಿನಾಯಕ ಫ್ರೆಂಡ್ಸ್ ಕುಮ್ರಗೊಡು ಇವರು ಗಣೇಶ್ ಚತುರ್ಥಿಯ ಪ್ರಯುಕ್ತ ವೇಷಗಳನ್ನು ಧರಿಸಿ ಒಂದು ಲಕ್ಷ ರೂ ಗಳನ್ನು ಸಂಗ್ರಹಿಸಿದ್ದು, ಈ ಹಣವನ್ನು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ 9 ವರ್ಷದ ಪುಟ್ಟ ಬಾಲಕ, ಕೊಕ್ಕರ್ಣೆ ಕಲ್ಲುಗೊಳಿ ನಿವಾಸಿಯಾದ ರಂಜನ್ ಚಿಕಿತ್ಸೆಗೆ ಧನಸಹಾಯ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕಾರ್ಕಳ ಜ್ಞಾನಸುಧಾ ಕಾಲೇಜಿನಲ್ಲಿ ನಿವೃತ್ತ ಹಿರಿಯ ಶಿಕ್ಷಕರಿಗೆ ಗೌರವಾರ್ಪಣೆ
ಉಡುಪಿ: ಇಂದಿನ ಶಿಕ್ಷಣದಲ್ಲಿ ಸಾಮಾಜಿಕ ಜಾಲತಾಣಗಳ ಭರಾಟೆಯಿಂದ ರಸಕ್ಕಿಂತ ಕಸವೇ ಹೆಚ್ಚು ತುಂಬಿದೆ. ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಜೊತೆಗೆ ಪೋಷಕರು ಸಹ ಕೈ ಜೋಡಿಸಿದಲ್ಲಿ ಆದರ್ಶ ಸಮಾಜ ನಿರ್ಮಾಣವಾವಾಗಲು ಸಾಧ್ಯ ಎಂದು ಉಡುಪಿಯ ಡಾ.ಟಿ.ಎಂ.ಎ.ಪೈ.ಕಾಲೇಜ್ ಆಫ್ ಎಜ್ಯುಕೇಷನ್ ಸಂಸ್ಥೆಯ ಸಂಯೋಜನಾಧಿಕಾರಿ, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಹಿರಿಯ ಶಿಕ್ಷಕರನ್ನು ಗೌರವಿಸಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರು ಮಕ್ಕಳ ಎರಡನೆ ಪಾಲಕರು. ಅಂತಹ […]