ಬೆಂಗಳೂರು ಪೊಲೀಸರಿಂದ ಚಂದನ ಚೋರರ ಬಂಧನ: ಒಟ್ಟು 3 ಕೋಟಿ ರೂ. ಮೌಲ್ಯದ ಸೊತ್ತು ವಶ

ಬೆಂಗಳೂರು: ಎಂಟು ಚಂದನ ಚೋರರನ್ನು ಬಂಧಿಸಿರುವ ಹೈಗ್ರೌಂಡ್ಸ್ ಪೊಲೀಸರು, ಒಟ್ಟು 3 ಕೋಟಿ ರೂ. ಮೌಲ್ಯದ 730 ಕೆಜಿ ಶ್ರೀಗಂಧ ಮತ್ತು 170 ಕೆಜಿ ಶ್ರೀಗಂಧದ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಗೋವಿಂದ ಸ್ವಾಮಿ, ಕೆ.ಮಧು ಅಲಿಯಾಸ್ ಮಾದ, ವೆಂಕಟೇಶ್, ವರದರಾಜು, ರಮಾಚಂದ್ರ, ವಸೀಮ್ ಬೇಗ್, ರಾಮಚಂದ್ರಪ್ಪ, ನಂಜೇಗೌಡ ಮುಂತಾದವರ ತಂಡವು ಆಗಸ್ಟ್ 1 ರಂದು ಗಾಲ್ಫ್ ಕ್ಲಬ್ ಆವರಣದಲ್ಲಿರುವ ಶ್ರೀಗಂಧದ ಮರವನ್ನು ಕಡಿದು ಹಾಕಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಹಾಯಕ ಪೊಲೀಸ್ […]

ಕೇಂದ್ರ ಸರ್ಕಾರಿ ಮಹಿಳಾ ನೌಕರರಿಗೆ 60 ದಿನಗಳ ವಿಶೇಷ ಹೆರಿಗೆ ರಜೆ: ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ

ನವದೆಹಲಿ: ಕೇಂದ್ರ ಸರಕಾರದ ಹೊಸ ನೀತಿಯ ಪ್ರಕಾರ, ಎಲ್ಲಾ ಕೇಂದ್ರ ಸರ್ಕಾರಿ ಮಹಿಳಾ ನೌಕರರು 60 ದಿನಗಳ ವಿಶೇಷ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ. ಜನನದ ನಂತರ ಮಗುವಿನ ಮರಣದ ಸಂದರ್ಭದಲ್ಲಿ ಅಥವಾ ಹೆರಿಗೆಯ ಮೊದಲು ಅಥವಾ ಹೆರಿಗೆಯ ಸಮಯದಲ್ಲಿ ಮಗುವನ್ನು ಕಳೆದುಕೊಂಡರೆ 60 ದಿನಗಳ ವಿಶೇಷ ಹೆರಿಗೆ ರಜೆ ನೀಡಲಾಗುತ್ತದೆ. ಈ ಸಂಬಂಧ ಶುಕ್ರವಾರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ. ತಾಯಿಯ ಜೀವನದ ಮೇಲೆ ದೂರಗಾಮಿ ಪರಿಣಾಮ ಬೀರುವ ಮಗುವಿನ ಜನನದ ನಂತರ ಅಥವಾ […]

ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ: ಪ್ರಧಾನಿ ಮೋದಿ

ಮಂಗಳೂರು: ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿಗೆ ಮಂಗಳೂರಿನ ಜನತೆ ಭರ್ಜರಿ ಸ್ವಾಗತ ನೀಡಿದ್ದರು. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಮೋದಿ, “ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ. ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಭಾಗಿಯಾದುದು ಸಂತಸ ತಂದಿದೆ” ಎಂದು ತಮ್ಮ ಮಂಗಳೂರು ಭೇಟಿಯ ಸಮಯದಲ್ಲಿ ಜನರಿಂದ ದೊರೆತ ಪ್ರೀತಿಗೆ ವಿನಮ್ರತೆಯನ್ನು ವ್ಯಕ್ತಪಡಿಸಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.   ಚಿತ್ರ: ಪ್ರಧಾನಿ ಮೋದಿ/ಟ್ವಿಟರ್

ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮುನ್ನಡೆ ಸಾಧಿಸಿದ ಭಾರತ: ಶೇಕಡಾ 7 ಕ್ಕಿಂತ ಹೆಚ್ಚು ಆರ್ಥಿಕ ಬೆಳವಣಿಗೆ ನಿರೀಕ್ಷೆ

ನವದೆಹಲಿ: ಭಾರತವು ಯುನೈಟೆಡ್ ಕಿಂಗ್‌ಡಮ್ ಅನ್ನು ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಮುನ್ನಡೆ ಸಾಧಿಸಿದೆ. 2021 ರ ಅಂತಿಮ ಮೂರು ತಿಂಗಳಲ್ಲಿ ಭಾರತವು ಐದನೇ ಅತಿದೊಡ್ಡ ಆರ್ಥಿಕತೆಯಾಗಲು ಮುನ್ನಡೆ ಸಾಧಿಸಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ. ಐಎಂಎಫ್‌ನ ಜಿಡಿಪಿ ಅಂಕಿಅಂಶಗಳ ಪ್ರಕಾರ, ಮೊದಲ ತ್ರೈಮಾಸಿಕದಲ್ಲಿ ಭಾರತ ತನ್ನ ಮುನ್ನಡೆಯನ್ನು ವಿಸ್ತರಿಸಿದೆ. ಈ ವರ್ಷ ಭಾರತದ ಆರ್ಥಿಕತೆಯು ಶೇಕಡಾ 7 ಕ್ಕಿಂತ ಹೆಚ್ಚು ಬೆಳೆಯುವ ಮುನ್ಸೂಚನೆ ಇದೆ ಎಂದು ಐಎಂಎಫ್ ಹೇಳಿದೆ. ಈ ತ್ರೈಮಾಸಿಕದಲ್ಲಿ ಭಾರತೀಯ […]

ಆನಂದ ಎನ್. ಪುತ್ರನ್ ನಿಧನ: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸಂತಾಪ

ಉಡುಪಿ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣರವರ ತಂದೆ ಆನಂದ ಎನ್. ಪುತ್ರನ್ ರವರ ನಿಧನಕ್ಕೆ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರ ಶಾಂತಿಯನ್ನು ಕರುಣಿಸಲಿ ಹಾಗೂ ಯಶ್ಪಾಲ್ ಸುವರ್ಣ ಮತ್ತು ಅವರ ಕುಟುಂಬ ವರ್ಗ, ಬಂಧು-ಮಿತ್ರರು ಹಾಗೂ ಅಭಿಮಾನಿಗಳಿಗೆ ಹಿರಿಯರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕುಯಿಲಾಡಿ ತಿಳಿಸಿದ್ದಾರೆ.