ಸ್ವಿಗ್ಗಿ ಸಂಸ್ಥೆ ಡೆಲಿವರಿ ಹುಡುಗರ ಮುಷ್ಕರ: ಶಾಸಕ ಕೆ. ರಘುಪತಿ ಭಟ್ ಸಂಧಾನ ಸಭೆ 

ಉಡುಪಿ: ಸ್ವಿಗ್ಗಿ ಸಂಸ್ಥೆ ಅಳವಡಿಸಿದ ಕೆಲವೊಂದು ನಿಯಮಗಳ ವಿರುದ್ಧ ಡೆಲಿವರಿ ಹುಡುಗರು ತುಳುನಾಡ ರಕ್ಷಣಾ ವೇದಿಕೆಯ ಬೆಂಬಲದೊಂದಿಗೆ ಮುಷ್ಕರ ನಡೆಸುತ್ತಿದ್ದು, ಸೆ. 03 ರಂದು ಶಾಸಕ ಕೆ. ರಘುಪತಿ ಭಟ್ ಅವರು ಸ್ವಿಗ್ಗಿ ಸಂಸ್ಥೆಯ ಅಧಿಕಾರಿಗಳು ಹಾಗೂ ಡೆಲಿವರಿ ಬಾಯ್ಸ್ ಜೊತೆ ಸಂಧಾನ ಸಭೆ ನಡೆಸಿದರು. ಸಂಸ್ಥೆಯ ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಡೆಲಿವರಿ ಮಾಡುವ ಹುಡುಗರು ಸಭೆಯಲ್ಲಿ ಗಮನಕ್ಕೆ ತಂದರು. ಇದನ್ನು ಶೀಘ್ರದಲ್ಲಿ ಸರಿಪಡಿಸುವಂತೆ ಸ್ವಿಗ್ಗಿ ಸಂಸ್ಥೆಯ ಅಧಿಕಾರಿಗಳಿಗೆ ಶಾಸಕ ಕೆ. ರಘುಪತಿ ಭಟ್ ರವರು ಸೂಚಿಸಿ […]

ಗಣೇಶ ಹಬ್ಬದ ಪ್ರಯುಕ್ತ ಸೆಪ್ಟಂಬರ್ 4 ರಂದು ಮದ್ಯ ಮಾರಾಟ ನಿಷೇಧ: ಜಿಲ್ಲಾಧಿಕಾರಿ ಆದೇಶ

ಉಡುಪಿ: ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ, ಬೈಲೂರು, ಕೌಡೂರು ಹಾಗೂ ನೀರೆ ಗ್ರಾಮ, ಕಾಪು ತಾಲೂಕಿನ ಪುರಸಭಾ ವ್ಯಾಪ್ತಿ, ಕಾಪು ಪಡು, ಮಲ್ಲಾರು, ಮೂಳೂರು, ಉಳಿಯಾರಗೋಳಿ ಹಾಗೂ ಮಜೂರು ಗ್ರಾಮ, ಕುಂದಾಪುರ ತಾಲೂಕು ನಗರ ಠಾಣಾ ವ್ಯಾಪ್ತಿಯ ಕಸಬಾ, ವಡೇರಹೋಬಳಿ ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳ ವ್ಯಾಪ್ತಿಯಲ್ಲಿ ಬಾರ್ ಮತ್ತು ವೈನ್‌ಶಾಪ್‌ಗಳು ತೆರೆದಿದ್ದಲ್ಲಿ ಮದ್ಯಪಾನಾಸಕ್ತರು ಮದ್ಯಪಾನ […]

ಸೆಪ್ಟಂಬರ್ 5 ರಂದು ರಜತಾದ್ರಿಯಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ

ಉಡುಪಿ: ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಚೇರಿ ಉಡುಪಿ ಜಿಲ್ಲೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ತಾಲೂಕು ಹಾಗೂ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣಾ ಸಮಿತಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಎಸ್.ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಸೆಪ್ಟಂಬರ್ 5 ರಂದು ಮಧ್ಯಾಹ್ನ 2.30 ಕ್ಕೆ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ […]

ಕಾರ್ಕಳ: ಹೊಟೇಲ್ ಮಯೂರ ಇಂಟರ್ ನ್ಯಾಶನಲ್ ಉದ್ಘಾಟನೆ

ಕಾರ್ಕಳ: ಶುಕ್ರವಾರದಂದು ಇಲ್ಲಿನ ಕುದುರೆಮುಖ ರಸ್ತೆಯ ಪುಲ್ಕೇರಿ ಬೈಪಾಸ್ ಬಳಿ ನೂತನವಾಗಿ ನಿರ್ಮಿಸಿದ ವಸತಿ ಗೃಹ, ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಲಲಿತಾ ಸಭಾಂಗಣವನ್ನೊಳಗೊಂಡ ಹೊಟೇಲ್ ಮಯೂರ ಇಂಟರ್ ನ್ಯಾಶನಲ್ ನ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಲ್ಲೂರು ಪರವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಉದ್ಯಮಿ ಹುರ್ಲಾಡಿ ರಘುವೀರ್ ಎ. ಶೆಟ್ಟಿ ಮಾತನಾಡಿ, ಉದ್ಯಮದಲ್ಲಿ ಸಮಾಜ ಸೇವೆಯೊಂದಿಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ದೇವರ ಅನುಗ್ರಹ ಲಭ್ಯವಾಗಿ ಯಶಸ್ವಿಯಾಗುತ್ತದೆ. ಈ ಸಂಸ್ಥೆಯೂ ಯಶಸ್ಸನ್ನು ಕಾಣಲಿ ಎಂದು […]

ವಿಶ್ವದ ಅತ್ಯಂತ ದುಬಾರಿ ಸಂಪೂರ್ಣ ಕಪ್ಪು ಕೋಳಿ ಅಯಮ್ ಸೆಮಾನಿ: ಒಂದು ಜೋಡಿ ಬೆಲೆ 5000 ಡಾಲರ್!

ಅಯಮ್ ಸೆಮಾನಿ ಇಂಡೋನೇಷ್ಯಾದಲ್ಲಿ ಕಾಣಸಿಗುವ ಅಪರೂಪದ ಮತ್ತು ತುಲನಾತ್ಮಕವಾಗಿ ಆಧುನಿಕ ಕೋಳಿ ತಳಿಯಾಗಿದೆ. ಇವು ಪ್ರಬಲವಾದ ಜೀನ್ ಅನ್ನು ಹೊಂದಿದ್ದು ಅದು ಹೈಪರ್ಪಿಗ್ಮೆಂಟೇಶನ್ (ಫೈಬ್ರೊಮೆಲನೋಸಿಸ್) ಅನ್ನು ಉಂಟುಮಾಡುತ್ತದೆ, ಇದು ಕೋಳಿಯನ್ನು ಸಂಪೂರ್ಣವಾಗಿ ಕಪ್ಪು ಮಾಡುತ್ತದೆ. ಎಷ್ಟೆಂದರೆ ಇವುಗಳ ಗರಿಗಳು, ಕೊಕ್ಕು, ಮಾಂಸ, ಮೂಳೆಗಳು ಮತ್ತು ಆಂತರಿಕ ಅಂಗಗಳು ಸೇರಿದಂತೆ ಎಲ್ಲವೂ ಕೃಷ್ಣಮಯಂ! ಇಂಡೋನೇಷಿಯನ್ ಭಾಷೆಯಲ್ಲಿ ಅಯಮ್ ಎಂದರೆ “ಕೋಳಿ”, ಸೆಮಾನಿ ಎಂದರೆ (ಮೂಲತಃ ಜಾವಾನೀಸ್ ಪದ) “ಸಂಪೂರ್ಣವಾಗಿ ಕಪ್ಪು” (ಮೂಳೆಗಳವರೆಗೆ). ಒಂದು ಹಕ್ಕಿಯು ನಿಜವಾದ ಆಯಮ್ ಸೆಮಾನಿಯಾಗಲು […]