ಸೆಪ್ಟೆಂಬರ್ 3 ರಂದು ನವೀಕೃತ ನಾರಾಯಣಗುರು ಆಡಿಟೋರಿಯಂ ಲೋಕಾರ್ಪಣೆ

ಉಡುಪಿ: ಬನ್ನಂಜೆ ಬಿಲ್ಲವರ ಸೇವಾ ಸಂಘದ ನವೀಕೃತ ನಾರಾಯಣಗುರು ಆಡಿಟೋರಿಯಂ ಸೆಪ್ಟೆಂಬರ್ ೩ ಶನಿವಾರ ಸಂಜೆ 4 ಗಂಟೆಗೆ ಲೋಕಾರ್ಪಣೆಗೊಳ್ಳಲಿದ್ದು, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ವಿ. ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಬಿ.ಎನ್. ಶಂಕರ ಪೂಜಾರಿ, ನಗರಸಭಾ ಸದಸ್ಯೆ ಸವಿತಾ ಹರೀಶ್ ರಾಂ ಉಪಸ್ಥಿತರಿರಲಿದ್ದಾರೆ. ಸಂಜೆ 4 […]
ಸಮಾಜ ಸೇವೆಯಲ್ಲಿ ಛಾಯಾಗ್ರಹಣದ ಪಾತ್ರ ಪ್ರಮುಖ: ಡಾ.ಜಯಗೌರಿ ಹಡಿಗಾಲ್

ಉಡುಪಿ: ಸಮಾಜ ಸೇವೆಯಲ್ಲಿ ಛಾಯಾಗ್ರಹಣ ಪ್ರಮುಖ ಪಾತ್ರ ವಹಿಸುತ್ತದೆ, ಸಮಾಜದ ಸೇವೆಗಾಗಿ ನಡೆಯುವ ಕಾರ್ಯಕ್ರಮಗಳನ್ನು ದಾಖಲು ಮಾಡುವುದು ತುಂಬಾ ಮುಖ್ಯ ಎಂದು ರೋಟರಿ ಕ್ಲಬ್ 3182 ಜಿಲ್ಲಾ ಗವರ್ನರ್ ಜಯ ಗೌರಿ ಹಡಿಗಾಲ್ ಅಭಿಪ್ರಾಯಪಟ್ಟರು. ಅವರು ಮಣಿಪಾಲದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಹಾಗೂ ರೋಟರಿ ಕ್ಲಬ್ ಮಣಿಪಾಲದ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಿಳಾ ಛಾಯಾಗ್ರಾಹಕಿಯಾರಾದ ವಿದ್ಯಾ ಪಿ. ಹೆಬ್ಬಾರ್, ಪೂರ್ಣಿಮಾ ಪ್ರಕಾಶ್ ಶೆಟ್ಟಿ, ವಿಮಲಾ ಕಲ್ಮಾಡಿ ಹಾಗೂ […]
ಲಯನ್ಸ್ ಕ್ಲಬ್ ವತಿಯಿಂದ ಮದರ್ ಥೆರೆಸಾ ಜನ್ಮ ದಿನಾಚರಣೆ

ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ ಮತ್ತು ಲಯನ್ಸ್ ಕ್ಲಬ್ ಮಣಿಪಾಲ್ ವ್ಯಾಲಿ ಇವರ ಸಹಯೋಗದೊಂದಿಗೆ ಆಗಸ್ಟ್ 27 ರಂದು ಪುರಭವನದಲ್ಲಿ ಮದರ್ ತೆರೇಸಾ ಅವರ 112ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಸಾದ್ ನೇತ್ರಾಲಯದ ಡಾಕ್ಟರ್ ಮೈತ್ರಿ ತುಂಗಾ ಇವರು ಕಣ್ಣಿನ ಆರೈಕೆ, ಜಾಗರೂಕತೆ ಹಾಗೂ ನೇತ್ರ ದಾನದ ಬಗ್ಗೆ ವಿವರಿಸಿದರು. ಅಪಘಾತದಲ್ಲಿ ಕಾಲಿಗೆ ಏಟಾಗಿ ಚಿಕಿತ್ಸೆ ನಡೆಸುತ್ತಿರುವ ಕುಕ್ಕಿಕಟ್ಟೆಯ ಅಭಿಷೇಕ್ ಶೇಟ್ ಅವರ ತಾಯಿಗೆ ಸಹಾಯಧನವನ್ನು ಕ್ಲಬ್ಬಿನ ಪರವಾಗಿ ಪಿಡಿಜಿ ಲಯನ್ ಸುರೇಶ್ […]
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಾಹಿತಿ ನೀಡಿದವರಿಗೆ 25 ಲಕ್ಷ ಬಹುಮಾನ ಘೋಷಿಸಿದ ಎನ್‌ಐಎ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಮತ್ತು ಆತನ ಸಹಚರರ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದ್ದು, ಡಿ ಕಂಪನಿಯು ಭಾರತದಲ್ಲಿ ಶಸ್ತ್ರಾಸ್ತ್ರ, ಡ್ರಗ್ಸ್, ನಕಲಿ ಭಾರತೀಯ ಕರೆನ್ಸಿ ಕಳ್ಳಸಾಗಣೆ ಮಾಡುವ ಘಟಕವನ್ನು ಸ್ಥಾಪಿಸಿರುವ ಬಗ್ಗೆ ಹಾಗೂ ಪಾಕಿಸ್ತಾನಿ ಏಜೆನ್ಸಿಗಳು ಮತ್ತು ಭಯೋತ್ಪಾದಕ ಸಂಘಟನೆಗಳ ಸಹಾಯದಿಂದ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಚಿಸಿರುವ ಬಗ್ಗೆ ಸಂಸ್ಥೆಯು ತನಿಖೆ ನಡೆಸಿದೆ. ಎನ್‌ಐಎ ಆತನ ಫೋಟೋ ಬಿಡುಗಡೆ […]
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಮಾತೃ ವಿಯೋಗ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ತಾಯಿ ಪಾವೊಲಾ ಮೈನೋ ಆಗಸ್ಟ್ 27 ರಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯು ಮಂಗಳವಾರದಂದು ಇಟಲಿಯಲ್ಲಿ ನಡೆಯಿತು. ಕಳೆದ ವಾರ ಸೋನಿಯಾ ಗಾಂಧಿ ತಮ್ಮ ತಾಯಿಯನ್ನು ಭೇಟಿಯಾಗಲು ಇಟಲಿಗೆ ತೆರಳಿದ್ದರು. ಗಾಂಧಿಯವರ ಈ ಪ್ರವಾಸವು ವೈದ್ಯಕೀಯ ತಪಾಸಣೆಯ ಭಾಗವಾಗಿತ್ತು, ಅಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಕೂಡಾ ಇದ್ದರು. ಕಾಂಗ್ರೆಸ್ ಅಧ್ಯಕ್ಷೆ ತಾಯಿಗೆ 90 ವರ್ಷವಾಗಿತ್ತು ಮತ್ತು ಅವರು ಅನಾರೋಗ್ಯದ ಬಳಲುತ್ತಿದ್ದರು. Smt. Sonia Gandhi’s mother, Mrs. Paola Maino […]