ಕೊನೆಯ ಹೆಣ್ಣುಮಗುವಾಗಿರಲೆಂದು ‘ಅಂತಿಮ್’ ಎಂದು ಹೆಸರಿಟ್ಟರೆ ಕುಸ್ತಿಯಲ್ಲಿ ಚಿನ್ನ ಗೆದ್ದ ‘ಮೊದಲ’ ಭಾರತೀಯ ಮಹಿಳೆ ಎಂಬ ಸಾಧನೆ ಮೆರೆದ ಚಿನ್ನದ ಹುಡುಗಿ

ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ 20 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 17 ವರ್ಷದ ಹರಿಯಾಣದ ಕುಸ್ತಿಪಟು ಅಂತಿಮ್ ಪಂಗಲ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎನಿಸಿಕೊಂಡಿದ್ದಾರೆ. 53 ಕೆಜಿ ವಿಭಾಗದಲ್ಲಿ ಕಜಕಿಸ್ತಾನ್‌ನ ಅಟ್ಲಿನ್ ಶಗಾಯೆವಾ ವಿರುದ್ಧ 8-0 ಅಂತರದಲ್ಲಿ ಜಯ ಗಳಿಸಿ ಈ ಸಾಧನೆ ಮಾಡಿದರು. ಈ ಚಿನ್ನದ ಪದಕವು ತನ್ನದೇ ಆದ ರೀತಿಯಲ್ಲಿ ಐತಿಹಾಸಿಕವಾಗಿದೆ ಏಕೆಂದರೆ ಭಾರತವು ಯು20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಹಿಳಾ ಕುಸ್ತಿಯಲ್ಲಿ ಯಾವುದೇ ಚಿನ್ನದ ಪದಕವನ್ನು ಗೆದ್ದಿಲ್ಲ. ಹೆಣ್ಣು […]

ಯುಪಿಐ ಸೇವೆಗಳಿಗೆ ಶುಲ್ಕ ವಿಧಿಸುವ ಯೋಜನೆ ಇಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ: ಯುಪಿಐ ಸೇವೆಗಳಿಗೆ ಯಾವುದೇ ಶುಲ್ಕ ವಿಧಿಸುವ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸರಣಿ ಟ್ವೀಟ್‌ಗಳ ಮಾಡಿರುವ ಹಣಕಾಸು ಸಚಿವಾಲಯವು, ಯುಪಿಐ ಸಾರ್ವಜನಿಕರಿಗೆ ಅಪಾರ ಅನುಕೂಲತೆ ಮತ್ತು ಆರ್ಥಿಕತೆಗೆ ಉತ್ಪಾದಕತೆಯ ಲಾಭವನ್ನು ತಂದುಕೊಡುವ ಡಿಜಿಟಲ್ ಸಾರ್ವಜನಿಕ ಉತ್ಪನ್ನವಾಗಿದೆ ಎಂದಿದೆ. ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಸಾಧ್ಯತೆಯಿದೆ ಎಂಬ ಕೆಲವು ವರದಿಗಳ ನಡುವೆ ಸ್ಪಷ್ಟನೆ ಬಂದಿದೆ. ಶುಲ್ಕ ವಸೂಲಾತಿಗಾಗಿ ಸೇವಾ ಪೂರೈಕೆದಾರರು ಕಾಳಜಿ ವ್ಯಕ್ತಪಡಿಸಿದ್ದರೂ ಸೇವಾ ವೆಚ್ಚಗಳನ್ನು ಇತರ ವಿಧಾನಗಳ ಮೂಲಕ ವಸೂಲಾತಿ ಮಾಡಬೇಕು […]

ತಾಳ್ಮೆ ಸಂವೇದನಾಶೀಲತೆಯಿಂದ ಉತ್ಕೃಷ್ಟ ಚಿತ್ರಗಳನ್ನು ಸೆರೆಹಿಡಿಯುವ ಛಾಯಾಗ್ರಾಹರ ಕಾರ್ಯ ಮೆಚ್ಚುವಂಥದ್ದು-ರೊ। ಬಾಲಕೃಷ್ಣ ಮದ್ದೋಡಿ

ಉಡುಪಿ: ಛಾಯಾಚಿತ್ರದಲ್ಲಿನ ನೈಪುಣ್ಯ,ವೈಜ್ಞಾನಿಕತೆ ಮತ್ತು ತಾಂತ್ರಿಕತೆ ಹಾಗೂ ಭಾವನಾತ್ಮಕ ಸಂವೇದನಾಶೀಲತೆ ಇವೆಲ್ಲವನ್ನೂ ನಾವು ಗುರುತಿಸಿಕೊಂಡಾಗ ಮಾತ್ರ ಛಾಯಾಗ್ರಹಣ ಎನ್ನುವುದು ಎಷ್ಟು ವಿಶಿಷ್ಟವಾದದ್ದು ಎಂಬ ಅರಿವು ನಮಗಾಗುತ್ತದೆ. ಹಾಗಾಗಿ ಛಾಯಾಗ್ರಹಣ ವೃತ್ತಿ ಮಾಡುವ ಎಲ್ಲ ಛಾಯಾಗ್ರಾಹಕರು ಅಭಿನಂದನಾರ್ಹರು ಎಂದು ಉಡುಪಿ ರೋಟರಿ ರೋಯಲ್ ನ ಅಧ್ಯಕ್ಷ ರೊ। ಬಾಲಕೃಷ್ಣ ಮದ್ದೋಡಿ ಅಭಿಪ್ರಾಯಪಟ್ಟರು. ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ, ರೋಟರಿ ಉಡುಪಿ ರೋಯಲ್ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವಛಾಯಾಗ್ರಹಣ ದಿನ ಕಾರ್ಯಕ್ರಮದಲ್ಲಿ […]