ಜ್ಞಾನಸುಧಾ ಸಂಸ್ಥಾಪಕರ ದಿನದ ಅಂಗವಾಗಿ ಆಗಸ್ಟ್ 21 ರಂದು ರಕ್ತದಾನ ಶಿಬಿರ
ಕಾರ್ಕಳ: ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಗಣಿತನಗರ ಕಾರ್ಕಳ, ನಾಗಬನ ಕ್ಯಾಂಪಸ್ ಉಡುಪಿ, ಜ್ಞಾನಸುಧಾ ಎನ್.ಸಿ.ಸಿ, ಎನ್.ಎಸ್.ಎಸ್ ಮತ್ತು ಹಳೆ ವಿದ್ಯಾರ್ಥಿ ಸಂಘ, ರೆಡ್ ಕ್ರಾಸ್ ಸೊಸೈಟಿ ಕಾರ್ಕಳ-ಕುಂದಾಪುರದ ಸಹಯೋಗದೊಂದಿಗೆ ಜ್ಞಾನಸುಧಾ ಸಂಸ್ಥಾಪಕರ ದಿನದ ಅಂಗವಾಗಿ ಆಗಸ್ಟ್ 21 ರಂದು ಗಣಿತ ನಗರ ಕ್ಯಾಂಪಸ್ ನಲ್ಲಿ ಬೆಳಿಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ವೀರ ಸಾವರ್ಕರ್ ಅವಹೇಳನ ಖಂಡಿಸಿ ಕಾರ್ಕಳದಲ್ಲಿ ಹಿಂದೂ ಸಂಘಟನೆಗಳಿಂದ ಮಾನವ ಸರಪಳಿ ಅಭಿಯಾನ
ಕಾರ್ಕಳ: ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ರಾಜಕೀಯ ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡು ಅವಹೇಳನ ಮಾಡುತ್ತಿರುವುದು ಖಂಡನೀಯ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸದಸ್ಯ ರಮೇಶ್ ಕಲ್ಲೊಟ್ಟೆ ಹೇಳಿದರು. ಕಾರ್ಕಳದ ಹಿಂದೂ ಜಾಗಣ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ವತಿಯಿಂದ ಕಾರ್ಕಳ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾವರ್ಕರ್ ಅವಹೇಳನ ಮಾಡಿದ ಸಿದ್ದರಾಮಯ್ಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ರಮೇಶ್ ಕಲ್ಲೊಟ್ಟೆ, ನಮಗೆ ಸ್ವಾತಂತ್ರ್ಯ ಕೇವಲ ಶಾಂತಿಯಿಂದ ಸಿಕ್ಕಿಲ್ಲ […]
ಮಾಹೆ: ಆಫ್ರಿಕಾದ ವೈದ್ಯರಿಗೆ ಬಂಜೆತನ ನಿವಾರಣಾ ತರಬೇತಿ ಕಾರ್ಯಕ್ರಮ
ಮಣಿಪಾಲ: ಮಾಹೆ-ಮೆರ್ಕ್ ಫೌಂಡೇಶನ್ ನಲ್ಲಿ ಐ.ವಿ.ಎಫ್ ಭ್ರೂಣಶಾಸ್ತ್ರ ತರಬೇತಿ ಕಾರ್ಯಕ್ರಮ ಪೂರ್ಣಗೊಳಿಸಿದ ಆಫ್ರಿಕಾ ದೇಶದ ವೈದ್ಯರ ಸಮೂಹವು ತಮ್ಮ ಪ್ರಮಾಣಪತ್ರಗಳನ್ನು ಗುರುವಾರದಂದು ಮಾಹೆ ಮತ್ತು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷ ಡಾ ರಂಜನ್ ಪೈ ಅವರಿಂದ ಸ್ವೀಕರಿಸಿತು. ಮಾಹೆ ಮತ್ತು ಜರ್ಮನಿಯ ಮೆರ್ಕ್ ಫೌಂಡೇಶನ್ ನೀಡುವ ಐ.ವಿ.ಎಫ್ ಭ್ರೂಣಶಾಸ್ತ್ರ ತರಬೇತಿ ಕಾರ್ಯಕ್ರಮವು ಬಂಜೆತನದ ಕೊರಗನ್ನು ನೀಗಿಸಲು ಇನ್-ವಿಟ್ರೊ ಫಲವತ್ತತೆ ತಂತ್ರಗಳನ್ನು ಬಳಸಲು ವೈದ್ಯರಿಗೆ ಅಧಿಕಾರ ನೀಡುತ್ತದೆ. ಕಾರ್ಯಕ್ರಮದ ಪ್ರಶಿಕ್ಷಣಾರ್ಥಿಗಳಲ್ಲಿ ಒಬ್ಬರಾದ ಘಾನಾದ ಮೋನಿಕಾ ಬಾವುವಾ […]
ಜಿಲ್ಲಾ ಬಾಲಭವನದಲ್ಲಿ ಪ್ರತಿ ಭಾನುವಾರದಂದು ಉಚಿತ ಸೃಜನಾತ್ಮಕ ಚಟುವಟಿಕಾ ಕಾರ್ಯಕ್ರಮಗಳು
ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಬನ್ನಂಜೆಯ ಜಿಲ್ಲಾ ಬಾಲಭವನದಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಆಗಸ್ಟ್ 21 ರಿಂದ ಪ್ರತಿ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರ ವರೆಗೆ ಸೃಜನಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲ, ನೃತ್ಯ, ರಂಗಚಟುವಟಿಕೆ, ಸಾಹಿತ್ಯ, ಯೋಗ, ಸಂಗೀತ ತರಗತಿಗಳನ್ನು ಉಚಿತವಾಗಿ ನಡೆಸಲಾಗುವುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಬಾಲಭವನ, ಉಡುಪಿ ದೂ.ಸಂಖ್ಯೆ: 0820-2574978, 0820-2574972 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರ ಅವರಿಗೆ ಡಿ. ದೇವರಾಜ ಅರಸು ಪ್ರಶಸ್ತಿ
ಉಡುಪಿ : ಜಿಲ್ಲಾ ಮಟ್ಟದ ಪ್ರಥಮ ಡಿ. ದೇವರಾಜ ಅರಸು ಪ್ರಶಸ್ತಿಗೆ ಮಲ್ಪೆ ರಾಘವೇಂದ್ರ ಅವರು ಆಯ್ಕೆಯಾಗಿರುತ್ತಾರೆ. ಇವರಿಗೆ ಆ. 20 ರಂದು ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಡಿ.ದೇವರಾಜ ಅರಸು ರವರ 107 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನಗದು ಹಾಗೂ ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಚಲನಚಿತ್ರ, ಸಾಹಿತ್ಯ, ಯಕ್ಷಗಾನ ಹೀಗೆ ಹಲವಾರು ಕ್ಷೇತ್ರದಲ್ಲಿ ದುಡಿದ ಇವರು, ಕಾಜಾರಗುತ್ತು ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. ಬೌದ್ಧಿಕ […]