ದುಃಖ ದುಮ್ಮಾನಗಳನ್ನು ಕಳೆದು ಸಂತಸ ನೆಮ್ಮದಿ ನೀಡುವ ವೆಲಂಕಣಿ ಮಾತೆಯ ಮಂದಿರಕೆ ಸುವರ್ಣೋತ್ಸವದ ಸಂಭ್ರಮ
ಪ್ರಾಕ್ತನ ಕಾಲದಿಂದಲೂ ಕರ್ನಾಟಕ ಕರಾವಳಿಯ ಪ್ರಮುಖ ನಗರಗಳು ಬಂದರು ಪ್ರದೇಶಗಳಾಗಿದ್ದವು. ಮಂಗಳಾಪುರ, ಉದಯಪುರ, ಬಾರಕಾಪುರ ಇವೆಲ್ಲವೂ ದೇಶ ಮತ್ತು ವಿದೇಶಗಳ ಜೊತೆ ನಾವಿಕ ಸಂಬಂಧ ಹೊಂದಿದ್ದ ಸುಪ್ರಸಿದ್ದ ಬಂದರು ನಗರಗಳು. ಆಧುನಿಕ ಉಡುಪಿಯ ಮಲ್ಪೆ ಅತ್ಯಂತ ಪ್ರಮುಖ ಪ್ರದೇಶವಾಗಿದ್ದು, ಇಲ್ಲಿಗೆ ಸಮೀಪದಲ್ಲಿರುವ ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್ ಬಹು ಪ್ರಸಿದ್ದವಾಗಿದೆ. ಬಂದರು ನಗರಕ್ಕೆ ಸರಿಹೊಂದುವಂತೆ ದೋಣಿಯಾಕಾರದಲ್ಲಿರುವ, ಪಕ್ಕದಲ್ಲೇ ಲೈಟ್ ಹೌಸ್ ರಚನೆಯಂತಹ ಕಟ್ಟಡವೂ ಇರುವ ಶುದ್ದ ಬಿಳಿ ಬಣ್ಣದ ಅತ್ಯಂತ ವಿನೂತನ ಮಾದರಿಯ ಚರ್ಚ್ ಎನಿಸಿಕೊಂಡು ಹಲವಾರು […]
ಶ್ರೀಕೃಷ್ಣಜನ್ಮಾಷ್ಟಮಿ ಅಷ್ಟದಿನೋತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ
ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ, ಶ್ರೀಕೃಷ್ಣಜನ್ಮಾಷ್ಟಮಿ ಅಷ್ಟದಿನೋತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ನೆರವೇರಿಸಿ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್,ಗೋಪಾಲಕೃಷ್ಣ ಉಪಾಧ್ಯಾಯ,ಪರ್ಯಾಯ ಸ್ವಾಗತ ಸಮಿತಿ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.
ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಸಾಮೂಹಿಕ ಚೂಡಿ ಪೂಜೆ
ಉಡುಪಿ: ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಜಿ ಎಸ್ ಬಿ ಮಹಿಳಾ ಮಂಡಳಿ ವತಿಯಿಂದ ಶ್ರಾವಣ ಮಾಸದ ಸಾಮೂಹಿಕ ಚೂಡಿ ಪೂಜೆ ಆದಿತ್ಯವಾರ ನಡೆಯಿತು. ಮಂಡಳಿಯ ಅಧ್ಯಕ್ಷೆ ಸುಧಾ ಆರ್ ಶೆಣೈ ಮಾರ್ಗದರ್ಶನದಲ್ಲಿ ಪ್ರಕೃತಿ ಯಲ್ಲಿ ದೊರೆಯುವ ವಿವಿಧ ಜಾತಿಯ ಹೂಗಳಿಂದ ತಯಾರಿಸಿದ ಚೂಡಿ ಯನ್ನು ತುಳಸಿ ಸನ್ನಿಧಾನದಲ್ಲಿ ಪೊಜೆಸಿ ದೇವರಿಗೆ ಅರ್ಪಣೆ ಮಾಡಲಾಯಿತು. ಹೊಸ್ತಿಲ ಪೂಜೆ ನೆಡೆಸಿ , ಮುತ್ತೈದೆಯರು ಚೂಡಿಯನ್ನು ಪರಸ್ಫರ ವಿನಿಮಯ ಮಾಡಿಕೊಂಡರು.
ಕಟಪಾಡಿ: ರಥ ಕೊಡ್ಕೆ ಫ್ರೆಂಡ್ಸ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ರಥ ಕೊಡ್ಕೆ ಫ್ರೆಂಡ್ಸ್ ಕಟಪಾಡಿ ಇದರ ವತಿಯಿಂದ ಜಿ.ಎಸ್.ಬಿ ಸಮಾಜದ ಎಸ್.ಎಸ್.ಎಲ್.ಸಿ ಸಾಧಕರಾದ ಸಂದೀಪ್ ಪೈ, ಸಾತ್ವಿಕ್ ಕಾಮತ್, ಅಮೇಯ ಶೆಣೈ, ವೈಭವಿ ಕಾಮತ್, ಪ್ರಥಮ್ ಕಾಮತ್ ಇವರನ್ನು ಸನ್ಮಾನಿಸಲಾಯಿತು. ರಥ ಕೊಡ್ಕೆ ಫ್ರೆಂಡ್ಸ್ ನ ಮಿತ್ರರಾದ ಏಕನಾಥ ಭಟ್, ಶ್ರೀನಿವಾಸ್ ಶೆಣೈ, ದಿವಾಕರ್ ಭಟ್,ವಿನೋದ್ ಕಾಮತ್,ಗಜಾನನ ಶೆಣೈ, ಶ್ರೀನಾಥ್ ಶೆಣೈ, ವೇದಾಂತ ಭಟ್, ಸುಧೀರ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಕಾಪು: ಬಿಜೆಪಿ ಯುವಮೋರ್ಚಾ ವತಿಯಿಂದ ತಿರಂಗಾ ಬೈಕ್ ಜಾಥಾ
ಕಾಪು: ಬಿಜೆಪಿ ಯುವಮೋರ್ಚಾ ಕಾಪು ಮಂಡಲ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ “ತಿರಂಗಾ ಬೈಕ್ ಜಾಥಾ” ನಡೆಯಿತು. ಈ ಸಂಧರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್,ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಸುರೇಶ್ ಶೆಟ್ಟಿ ಗುರ್ಮೆ, ಬಿಜೆಪಿ ಯುವಮೋರ್ಚಾ ಕಾಪು ಮಂಡಲ ಅಧ್ಯಕ್ಷ ಸಚಿನ್ ಸುವರ್ಣ […]