ಜನತಾ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ 

  ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ಹಾಗೂ ಜನತಾ ಪ್ರೌಢಶಾಲೆ ಹೆಮ್ಮಾಡಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ ಕಾರ್ಯಕ್ರಮ ನಡೆಯಿತು. ಬೈಂದೂರು ಕ್ಷೇತ್ರದ ಮಾಜಿ ಶಾಸಕ ಹಾಗೂ ಶ್ರೀ.ವಿ.ವಿ.ವಿ ಮಂಡಳಿ  ಅಧ್ಯಕ್ಷ  ಕೆ.ಗೋಪಾಲ ಪೂಜಾರಿಯವರು ಧ್ವಜಾರೋಹಣಗೈದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಂಡು ರಾಷ್ಟ್ರೀಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಮಾರಂಭದ ಮುಖ್ಯ ಅತಿಥಿಯಾಗಿ ಸಮರ್ಪಣಾ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಕಾಲೇಜಿನ ಪ್ರಾಂಶುಪಾಲ  ಗಣೇಶ ಮೊಗವೀರ ಸ್ವಾತಂತ್ರ್ಯದ ಈ […]

ಬಾಲ್ಯದ ಶಾಲಾ ದಿನಗಳ ಸ್ವಾತಂತ್ರ್ಯ ದಿನಾಚರಣೆಯ ಸವಿ ಸವಿ ನೆನಪುಗಳು: ಪ್ರಗತಿ ಬರೆದ ವಿಶೇಷ ಬರಹ..

75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಆಚರಣೆಗೆ ಇಡೀ ದೇಶವೇ ಸಜ್ಜಾಗುತ್ತಿದೆ. ಈ ಸಂಭ್ರಮವನ್ನ ಕಣ್ತುಂಬಿ ಕೊಳ್ಳುತ್ತಿರುವ ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಎಂದಾಗ ನೆನಪಾಗುವುದು ನನ್ನ ಬಾಲ್ಯದ ಶಾಲಾ ದಿನಗಳು. ಆ ದಿನಗಳಲ್ಲಿ ನಾನು ಪಟ್ಟ ಖುಷಿಗೆ ಕೊನೆಯೇ ಇರುತ್ತಿರಲಿಲ್ಲ. ಅಗಸ್ಟ್ ತಿಂಗಳ ಮೊದಲ ದಿನದಿಂದಲೇ ಶುರುವಾಗುವ ನಮ್ಮ ತಯಾರಿಗಳು ಆಗಸ್ಟ್ 15 ಬಂದರು ಮುಗಿಯುತ್ತಿರಲಿಲ್ಲ. ಅಗಸ್ಟ್ 15 ಎಂದಾಗ ಹುಡುಗಿಯರಿಗೆ ಥಟ್ ಎಂದು ಮನದಲ್ಲಿ ಹಾದು ಹೋಗುವ ಒಂದು ವಿಷಯವೆಂದರೆ ಕೇಸರಿ,ಬಿಳಿ ಮತ್ತು […]

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮತ್ತು ಪರಿಸರದ ಕಾಳಜಿ: ಗಾಯತ್ರಿ ಬರೆದ ವಿಶೇಷ ಬರಹ

ಭಾರತವು ಪ್ರತಿ ವರ್ಷ ಆಗಸ್ಟ್ 15ರಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಲು ನಮ್ಮ ಸ್ವಾತಂತ್ರ ಹೋರಾಟಗಾರರು ಮಾಡಿದ ಎಲ್ಲಾ ತ್ಯಾಗಗಳನ್ನು ಸ್ವಾತಂತ್ರ ದಿನವು ನೆನಪಿಸುತ್ತದೆ. 15 ಆಗಸ್ಟ್ 1947 ರಂದು, ಭಾರತವನ್ನು ಬ್ರಿಟಿಷ್ ವಸಾಹತುಶಾಹಿಯಿಂದ ಸ್ವತಂತ್ರವೆಂದು ಘೋಷಿಸಲಾಯಿತು ಮತ್ತು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ಹೊರಹೊಮ್ಮಿತು. ಈ ಬಾರಿ 2022ರಂದು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಇಂಥ ಸುಸಂದರ್ಭದಲ್ಲಿ ನಾವು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಕೂಡ ಅತೀ ಮುಖ್ಯವಾಗಿದೆ. 75ನೇ […]

ಹೆಗ್ಗುಂಜೆ ಗ್ರಾಮವಿಕಾಸ ಸಮಿತಿ ವತಿಯಿಂದ ಸಸ್ಯ ಶ್ಯಾಮಲೆ ಹಸಿರು ಅಭಿಯಾನ

ಬ್ರಹ್ಮಾವರ : ಹೆಗ್ಗುಂಜೆ ಗ್ರಾಮವಿಕಾಸ ಸಮಿತಿ ವತಿಯಿಂದ ಮಂದಾರ್ತಿಯಲ್ಲಿ “ಸಸ್ಯ ಶ್ಯಾಮಲೆ” ಹಸಿರು ಅಭಿಯಾನ ನಡೆಯಿತು. ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಂದಾರ್ತಿಯ ಆಡಳಿತ ಮೊಕ್ತೇಸರರಾದ ಧನಂಜಯ ಶೆಟ್ಟಿ ಗಿಡ ನೆಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಅಮೃತ ಮಹೋತ್ಸವದ ಸುವರ್ಣ ಸಮಯದಲ್ಲಿ 75 ಹಣ್ಣಿನ ಗಿಡ ನೆಡಲಾಯಿತು.ಈ ಸಂದರ್ಭದಲ್ಲಿ ಸ್ಥಳೀಯರಾದ ವಿಠಲ್ ಶೆಟ್ಟಿ ಶೇಡಿಕೊಡ್ಲು, ಗಂಗಾಧರ್ ಶೆಟ್ಟಿ, ಸುದರ್ಶನ್ ಶೆಟ್ಟಿ, ಉದಯ್ ಭಾಸ್ಕರ್ ಶೆಟ್ಟಿ, ಸಂಜಯ್ ಉಡುಪ, ಸುಕುಮಾರ್ ಶೆಟ್ಟಿ ನೀರ್ಜೆಡ್ಡು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀಮತಿ […]

ಉಳ್ಳಾಲದ ರಾಣಿ ಅಬ್ಬಕ್ಕನಿಂದ ಆಜಾದ್ ಹಿಂದ್ ಫೌಜ್ ವರೆಗೆ ಸಹಸ್ರ ಸಹಸ್ರ ದೇಶಪ್ರೇಮಿಗಳ ಬಲಿದಾನದ ಫಲವೇ 75ರ ಈ ಸ್ವಾತಂತ್ರ್ಯೋತ್ಸವ

16 ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ದ ಹೋರಾಡಿದ ಪ್ರಪ್ರಥಮ ಮಹಿಳೆ ವೀರ ರಾಣಿ ಅಬ್ಬಕ್ಕ, ಗೇರುಸೊಪ್ಪೆಯ ವೀರ ರಾಣಿ ಚೆನ್ನಭೈರಾದೇವಿ, ತದನಂತರ 1837 ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಸಮರ ಭಾರತದ ಸ್ವಾತಂತ್ರ್ಯ ಸಮರದ ಇತಿಹಾಸದಲ್ಲಿ ತುಳುನಾಡು ಅಥವಾ ಅವಿಭಜಿತ ದ.ಕ ಜಿಲ್ಲೆಯ ವೀರ ಮಹಿಳೆ ಮತ್ತು ಪುರುಷರ ಹೆಸರನ್ನು ಸ್ವರ್ಣಾಕ್ಷರಗಳಲ್ಲಿ ಬರೆದಿಡಬಹುದು. ಬಹುತೇಕ ಹದಿನಾರನೇ ಶತಮಾನದಲ್ಲೇ ಶುರುವಾಗಿದ್ದ ಸ್ವಾತಂತ್ರ್ಯ ಸಮರ, ಮೊದಲು ಪೋರ್ಚುಗೀಸರ ವಿರುದ್ದ, ಡಚ್-ಫ್ರೆಂಚರ ವಿರುದ್ದ ತದನಂತರ ಬ್ರಿಟಿಷರ ವಿರುದ್ದ ತೀವ್ರವಾಗಿ ಸಹಸ್ರ ಸಹಸ್ರ […]