ಪೋಸ್ಟರ್ ಹಿಡಿದು ಏಕಾಂಗಿ ಹೋರಾಟ ನಡೆಸುತ್ತಿರುವ ಮಂಗಳೂರಿನ ಬಾಲಕ: ಗೆಳೆಯನ ಸಾವಿಗೆ ನ್ಯಾಯ ಕೇಳುತ್ತಿರುವ ಬಾಲಕನ ಕೂಗು ಆಡಳಿತಕ್ಕೆ ಕೇಳುವುದೆ?

ಮಂಗಳೂರು: ರಸ್ತೆಯಲ್ಲಿ ಗುಂಡಿಗೆ ಬಲಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿ ಅತೀಶ್‌ನನ್ನು ಕಳೆದುಕೊಂಡ ಆತನ ಸ್ನೇಹಿತ ಲಿಖಿತ್ ಮಂಗಳೂರು ಮಹಾನಗರ ಪಾಲಿಕೆಯ ಮುಂದುಗಡೆ ನಿಂತು ಪೋಸ್ಟರ್ ಹಿಡಿದು ಒಬ್ಬಂಟಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ಒಂಟಿಯಾಗಿ ಪೋಸ್ಟರ್ ಹಿಡಿದು ರಸ್ತೆಯಲ್ಲಿ ‘ಸುರಕ್ಷಾ ಬಂಧನ’ಕ್ಕೆ ಆಗ್ರಹಿಸುತ್ತಿದ್ದಾರೆ. ತನ್ನ ಗೆಳೆಯನ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಎದುರು ಪೋಸ್ಟರ್ ಹಿಡಿದು ನ್ಯಾಯ ಕೇಳುತ್ತಿರುವ ಈ ಬಾಲಕನ ಹೆಸರು ಲಿಖಿತ್ ರೈ. ಇತ್ತೀಚೆಗೆ ಆತನ ಸ್ನೇಹಿತ ಅತೀಶ್‌ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. […]

ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ 900 ಕೆ.ಜಿ ಧವಸದಿಂದ ಮೂಡಿಬಂತು ಭಾರತದ ತ್ರಿವರ್ಣ ಧ್ವಜ

ಮಂಗಳೂರು: ಭಾರತದ 75 ನೇ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ದೇಶದ ಪ್ರತಿ ಮನೆ, ಮಠ, ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಎನ್ನುವ ಬೇಧವಿಲ್ಲದೆ ಎಲ್ಲೆಡೆಯೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಮಂಗಳೂರಿನ ಬಹು ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಅಂಗಳದಲ್ಲಿ ಕ್ಷೇತ್ರದ ಮತ್ತು ಗುರು ಬೆಳದಿಂಗಳು ಫೌಂಡೇಶನ್ ವತಿಯಿಂದ 900 ಕೆ.ಜಿ ಧವಸ-ಧಾನ್ಯದಿಂದ ಸುಂದರವಾದ ತ್ರಿವರ್ಣ ಧ್ವಜವನ್ನು ರಚಿಸಲಾಗಿದ್ದು, ಜನರ ಆಕರ್ಷಣೆಯ ಕೇಂದ್ರವಾಗಿದೆ. ವಿಧ-ವಿಧದ ಧವಸ […]

ತೆಂಕಪೇಟೆ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಮತ್ತು ಮಿತ್ರ ವೃಂದದ ವತಿಯಿಂದ ರಾಷ್ಟ್ರಧ್ವಜ ವಿತರಣೆ

ಉಡುಪಿ: ತೆಂಕಪೇಟೆ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಮತ್ತು ಮಿತ್ರ ವೃಂದ ವತಿಯಿಂದ ಶನಿವಾರದಂದು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಎದುರಿನ ಶ್ಯಾಮ ಪ್ರಸಾದ್ ಕುಡ್ವರವರ ಗೃಹ ಕಚೇರಿಯಲ್ಲಿ ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಯು ವಿಶ್ವನಾಥ ಶೆಣೈ ಮನೆ ಮನೆಗೆ ರಾಷ್ಟ್ರ ಧ್ವಜ ವಿತರಣೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಯರಾಮ ಕಾಮತ್, ಮೋಹನ್ ದಾಸ್ ಶೆಣೈ, ವಿನಾಯಕ ಬಾಳಿಗಾ, ಸತೀಶ್ ಕಾಮತ್, ಇತರ ಗಣ್ಯರು ಉಪಸ್ಥಿತರಿದ್ದರು

ಆಗಸ್ಟ್ 15 ರಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬೃಹತ್ ತಿರಂಗಾ ಯಾತ್ರೆ

ಉಡುಪಿ: ಸ್ವಾತಂತ್ರ್ಯದ ಅಮೃತ‌ ಮಹೋತ್ಸವ ಆಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಆಗಸ್ಟ್ 15ರಂದು ಬೆಳಿಗ್ಗೆ 8.30ಕ್ಕೆ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ರವರು ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ಬೆಳಿಗ್ಗೆ 11.30ಕ್ಕೆ ಬಿಜೆಪಿ ಜಿಲ್ಲಾ ಕಛೇರಿ ಬಳಿಯಿಂದ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ವರೆಗೆ ‘ಬೃಹತ್ ತಿರಂಗಾ ಯಾತ್ರೆ’ ನಡೆಯಲಿದ್ದು, ಗಾಂಧಿ ಪ್ರತಿಮೆಗೆ ಹಾರಾರ್ಪಣೆಯೊಂದಿಗೆ ಸಮಾಪನಗೊಳ್ಳಲಿದೆ. ಈ ತಿರಂಗಾ ಯಾತ್ರೆಯಲ್ಲಿ ಪಕ್ಷದ ಪ್ರಮುಖರು, ಬಿಜೆಪಿ ರಾಜ್ಯ, ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಮಂಡಲ, […]

ದೊಡ್ಡಣಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಕಿಕ್ಕಿರಿದ ಭಕ್ತಸಮೂಹದೊಂದಿಗೆ ವರಮಹಾಲಕ್ಷ್ಮಿ ವೃತ ಪೂಜೆ ಸಂಪನ್ನ

ಉಡುಪಿ: ಕರ್ನಾಟಕದಲ್ಲಿ ಪ್ರಥಮ ಹಾಗೂ ಭಾರತದಲ್ಲಿ ದ್ವಿತೀಯ ಸನ್ನಿಧಾನವೆನಿಸಿದ ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಶ್ರೀ ಕುಬೇರ ಚಿತ್ರಲೇಖಾ ಸಹಿತವಾದ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ವರಮಹಾಲಕ್ಷ್ಮಿ ವೃತ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತ್ರತ್ವದಲ್ಲಿ ನೆರವೇರಿತು. ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ಶುಕ್ರವಾರದಂದು ಸಂಜೆ ನೆರವೇರಿದ ಈ ಪೂಜೆಯಲ್ಲಿ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ದೀಪ ಪ್ರಜ್ವಲಿಸಿ ವರಮಹಾಲಕ್ಷ್ಮಿ ವೃತ ಪೂಜೆಗೆ […]