ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ವ್ಯಕ್ತಿ/ಸಂಘ-ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿ

ಉಡುಪಿ : ಪ್ರಸಕ್ತ ಸಾಲಿನ ಡಿ.ದೇವರಾಜ ಅರಸುರವರ 107ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ವ್ಯಕ್ತಿ/ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಡಿ ದೇವರಾಜ ಅರಸು ಪ್ರಶಸ್ತಿ ನೀಡಲು ಅರ್ಹರನ್ನು ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಈ ಪ್ರಶಸ್ತಿಗೆ ಅರ್ಹವಿರುವ ವ್ಯಕ್ತಿಯು ದೇವರಾಜ ಅರಸುರವರ ಧೇಯೋದ್ದೇಶಗಳನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಕಾರ್ಯ ನಿರತರಾಗಿರಬೇಕು. ದೇವರಾಜ ಅರಸುರವರು ಕಾರ್ಯಗತಗೊಳಿಸಿದ ಯೋಜನೆ/ ಕಾರ್ಯಕ್ರಮಗಳಲ್ಲಿ ಒಂದೆರೆಡರಲ್ಲಿಯಾದರೂ ಸ್ವಯಂ ಪ್ರೇರಣೆಯಿಂದ ತಮ್ಮನ್ನು […]

ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜದ ಗೌರವ ಕಾಪಾಡಲು ಜಿಲ್ಲಾಧಿಕಾರಿ ಸೂಚನೆ

ಉಡುಪಿ : ಹರ್ ಘರ್ ತಿರಂಗಾ ಕಾರ್ಯಕ್ರಮವು ಕೇಂದ್ರ ಸರ್ಕಾರದ ರಾಷ್ಟ್ರಾಭಿಮಾನ ಬಿಂಬಿಸುವ ವಿಶೇಷ ಕಾರ್ಯಕ್ರಮವಾಗಿದ್ದು, ಆಗಸ್ಟ್ 13 ರಿಂದ 15 ರವರೆಗೆ ಎಲ್ಲಾ ಸರ್ಕಾರಿ ಕಚೇರಿಗಳು ಸೇರಿದಂತೆ ಮನೆ ಮನೆ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಾಭಿಮಾನವನ್ನು ಮೆರೆಯಲು ಹಾಗೂ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕೋರಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಆಗಸ್ಟ್ 13 ರ ಬೆಳಗ್ಗೆ ಧ್ವಜಾರೋಹಣ ನಡೆಸಿ, ಆ.15 ರ ಸಂಜೆ ಧ್ವಜ ಅವರೋಹಣ ಮಾಡಿ, ನಂತರ ಧ್ವಜವನ್ನು ಸುರಕ್ಷಿತವಾಗಿ ತಮ್ಮ ಮನೆಗಳಲ್ಲಿಯೇ […]

9 ತಿಂಗಳ ಗರ್ಭಿಣಿಯಿಂದ 44 ನೇ ಚೆಸ್ ಒಲಿಂಪಿಯಾಡ್ ನಲ್ಲಿ ಸಾಧನೆ: ಚೆಸ್ ಒಲಿಂಪಿಯಾಡ್ ನಲ್ಲಿ ಪದಕ ಗೆದ್ದ ಗ್ರ್ಯಾಂಡ್ ಮಾಸ್ಟರ್ ಹರಿಕಾ ದ್ರೋಣವಲ್ಲಿ

ಚೆನ್ನೈ: ಭಾರತದ ಗ್ರ್ಯಾಂಡ್ ಮಾಸ್ಟರ್ ಹರಿಕಾ ದ್ರೋಣವಲ್ಲಿ ಒಂಬತ್ತು ತಿಂಗಳ ಗರ್ಭಿಣಿ. ಆದರೆ ಸಾಧನೆ ಮಾಡಲೇ ಬೇಕೆನ್ನುವ ಛಲವಿದ್ದವರಿಗೆ ಯಾವುದೂ ಅಡ್ಡಿಯಾಗುವುದಿಲ್ಲ. ಮಂಗಳವಾರ ಮುಕ್ತಾಯಗೊಂಡ 44 ನೇ ಚೆಸ್ ಒಲಿಂಪಿಯಾಡ್‌ನಲ್ಲಿ ತಮ್ಮ ಕನಸನ್ನು ಸಾಧಿಸಿ ಬೀಗಿದ್ದಾರೆ ಗ್ರ್ಯಾಂಡ್ ಮಾಸ್ಟರ್ ಹರಿಕಾ. 31 ವರ್ಷ ವಯಸ್ಸಿನ ಹರಿಕಾ, ಆಗಸ್ಟ್ 10ರಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಒಂಬತ್ತು ತಿಂಗಳ ಗರ್ಭಾವಸ್ಥೆಯಲ್ಲಿ ಈ ಸಾಧನೆ ಮಾಡಿದ ಕಾರಣ ಅದು ಹೆಚ್ಚು ಭಾವನಾತ್ಮಕವಾಗಿದೆ ಎಂದು ಅವರು ಹೇಳಿದ್ದಾರೆ. ಮಹಿಳೆಯರ ವಿಭಾಗದಲ್ಲಿ […]

ಹಿರಿಯಡ್ಕ: ಎಂಕುಲ್ ಫ್ರೆಂಡ್ಸ್ ಕಲಾವಿದರ ವತಿಯಿಂದ ಆಗಸ್ಟ್ 15 ರಂದು ಇಂಡಿಪೆಂಡೆನ್ಸ್ ಟ್ರೋಫಿ ವಾಲಿಬಾಲ್ ಪಂದ್ಯಾಕೂಟ

ಹಿರಿಯಡ್ಕ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಎಂಕುಲ್ ಫ್ರೆಂಡ್ಸ್ ಕಲಾವಿದರ ವತಿಯಿಂದ ಅಂಡರ್- 19 ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾಕೂಟ ಇಂಡಿಪೆಂಡೆನ್ಸ್ ಟ್ರೋಫಿ- 2022 ಯು ಆಗಸ್ಟ್ 15 ರಂದು ಬೆಳಿಗ್ಗೆ 9:00 ಗಂಟೆಗೆ ಹಿರಿಯಡ್ಕದ ಕೋಟ್ನಕಟ್ಟೆ ಮೈದಾನದಲ್ಲಿ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮ ಉದ್ಘಾಟನೆ: ದೇವದಾಸ ಮರಾಠೆ ಅಧ್ಯಕ್ಷರು, ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ ಉಪಸ್ಥಿತಿ: ಶಿವಕುಮಾರ್ ಕರ್ಜೆ ಸ್ಥಾಪಕರು, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ, ದೇವಾಕರ್ ಭಂಡಾರಿ ಕಾರ್ಯದರ್ಶಿ,ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್ , […]