42ರ ತಾಯಿ 24ರ ಮಗ; ಕೇರಳದ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಪಾಸಾದ ಅಮ್ಮ-ಮಗ ಜೋಡಿಗೆ ಸೈ ಎಂದ ಜನ!!
ಮಲಪ್ಪುರಂ: ಪ್ರತಿ ವರ್ಷ ಪಬ್ಲಿಕ್ ಸರ್ವಿಸ್ ಕಮಿಷನ್ ನಲ್ಲಿ ತರಹೇವಾರಿ ಅರ್ಜಿದಾರರು ಪರೀಕ್ಷೆ ನೀಡಲು ಬರುತ್ತಿರುತ್ತಾರೆ. ಈ ಬಾರಿ ಅಮ್ಮ ಮಗನ ಅನನ್ಯ ಜೋಡಿಯೊಂದು ಪರೀಕ್ಷೆ ಬರೆದು ಪಾಸಾಗಿ ಸೈ ಎನಿಸಿಕೊಂಡಿದೆ. 42 ವರ್ಷದ ಬಿಂದು ಮತ್ತು 24 ವರ್ಷದ ವಿವೇಕ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯನ್ನು ಒಟ್ಟಿಗೆ ಬರೆದು ಜತೆಯಾಗಿಯೆ ಪಾಸಾಗಿದ್ದಾರೆ. ಸಾಧನೆಯ ಬಗ್ಗೆ ಮಾತನಾಡಿದ ವಿವೇಕ್, ತಂದೆಯು ಎಲ್ಲಾ ಸೌಕರ್ಯಗಳನ್ನು ಕಲ್ಪಿಸಿದ್ದು, ತಾಯಿಯ ಸಹಾಯದಿಂದ ತಾನು ಇಲ್ಲಿಯವರೆಗೆ ಬರಲು ಸಾಧ್ಯವಾಯಿತು ಎಂದಿದ್ದಾರೆ. “ನಾವು ಕೋಚಿಂಗ್ […]
ಎಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ: 5 ಲಕ್ಷ ರೂ ಮೌಲ್ಯದ ಮೌಲ್ಯದ ಕೊಬ್ಬರಿ, ತೆಂಗಿನಕಾಯಿ ಬೆಂಕಿಗಾಹುತಿ
ಪಡುಬಿದ್ರಿ: ಕಣ್ಣಂಗಾರ್ ಬೈಪಾಸ್ ಬಳಿಯ ನಡ್ಸಾಲು ಗ್ರಾಮದ ಸುಶೀಲಾ ಗಾಣಿಗ ಅವರ ಗಾಣಿಗರ ಎಣ್ಣೆ ಮಿಲ್ ನಲ್ಲಿ ಬುಧವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಸುಮಾರು 5 ಲಕ್ಷ ರೂ ಗಳಿಗಿಂತಲೂ ಅಧಿಕ ಮೌಲ್ಯದ ಕೊಬ್ಬರಿ, ತೆಂಗಿನಕಾಯಿ ಬೆಂಕಿಗಾಹುತಿಯಾಗಿ ನಷ್ಟವಾಗಿದೆ. ಮಾಹಿತಿ ತಿಳಿದ ಕೂಡಲೇ ಉಡುಪಿ ಅಗ್ನಿ ಶಾಮಕದಳದವರು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ರಾತ್ರಿ ಮಾಮೂಲಿನಂತೆ […]
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಮೀನುಗಾರಿಕಾ ಸೌಲಭ್ಯಗಳಿಗೆ ಆಗಸ್ಟ್ 15 ರ ಒಳಗೆ ಅರ್ಜಿ ಸಲ್ಲಿಸಿ: ಮೀನುಗಾರಿಕಾ ಇಲಾಖೆ
ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ ಹಾಗೂ ನೀಲಿಕ್ರಾಂತಿ ಯೋಜನೆಯಡಿ 2018-19 ಮತ್ತು 2019-20 ರಲ್ಲಿ ಬಾಕಿ ಉಳಿದಿರುವ ಘಟಕಗಳಿಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಹಿನ್ನಿರು, ಲವಣ ಹಾಗೂ ಕ್ಷಾರೀಯ ಪ್ರದೇಶಗಳಲ್ಲಿ ಬಯೋಫ್ಲಾಕ್ ಕೊಳಗಳ ನಿರ್ಮಾಣ, ಸಿಹಿನೀರಿನ ಬಯೋಫ್ಲಾಕ್ ಕೊಳಗಳ ನಿರ್ಮಾಣ, ಕಡಲ ಮೀನುಗಳ ಸಣ್ಣ ಹ್ಯಾಚರಿ ಕೇಂದ್ರಗಳ ಸ್ಥಾಪನೆ, ಕಡಲ ಕಳೆ ಕೃಷಿಗೆ ರ‍್ಯಾಫ್ಟ್ ಪದ್ದತಿ, ಮೊನೊಲಿನ್/ಟ್ಯೂಬೆನೆಟ್ ಪದ್ಧತಿ […]
ಎಂಐಟಿ ವಿದ್ಯಾರ್ಥಿನಿ ರಶ್ಮಿ ಸಾಮಂತ್ ಅವರಿಗೆ ಪಿಹೆಚ್.ಡಿ ಪದವಿ
ಮಣಿಪಾಲ: ಎಂಐಟಿ ವಿದ್ಯಾರ್ಥಿನಿ, ಹೆರ್ಗ ರಾಘವೇಂದ್ರ ನಾಯಕ್ ಅವರ ಪತ್ನಿ ರಶ್ಮಿ ಸಾಮಂತ್ ಇವರು, ಮಣಿಪಾಲದ ಎಂಐಟಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ಸ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಮತ್ತು ಹೆಚ್. ಓ. ಡಿ. ಆಗಿರುವ ಡಾ. ಜಿ. ಸುಬ್ರಮಣ್ಯ ನಾಯಕ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ಡಿಸೈನ್ ಎಂಡ್ ಇಂಪ್ಲಿಮೆಂಟೇಶನ್ ಆಫ್ ಎನ್ ಎಫೀಶಿಯೆಂಟ್ ಆಸಿಕ್ ಫಂಕ್ಷನಲ್ ಯುನಿಟ್ ಫಾರ್ ಸ್ಟ್ಯಾಂಡಲೋನ್ ಇಮೇಜ್ ಪ್ರೊಸೆಸಿಂಗ್ ಅಪ್ಲಿಕೇಶನ್ಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ಮಾಹೆ ವಿಶ್ವವಿದ್ಯಾಲಯ ಪಿ.ಹೆಚ್.ಡಿ ನೀಡಿದೆ. ರಶ್ಮಿ ಇವರು ಮುಂಡ್ಕಿನಜಡ್ಡು […]
ಉನ್ನತಿ ಕೆರಿಯರ್ ಅಕಾಡೆಮಿ ವತಿಯಿಂದ ಉಡುಪಿ ಕೋಪರೇಟಿವ್ ಟೌನ್ ಬ್ಯಾಂಕ್ ಸಿಬ್ಬಂದಿಗಳಿಗೆ ತರಬೇತಿ ಶಿಬಿರ
ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಹಾಗೂ ಕಾರ್ಪೊರೇಟ್ ತರಬೇತಿಗಳಿಗೆ ಪ್ರಸಿದ್ದಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿ ವತಿಯಿಂದ 110 ವರ್ಷಗಳ ಇತಿಹಾಸ ಹೊಂದಿರುವ ಸಹಕಾರಿ ಕ್ಷೇತ್ರದ ಪ್ರಸಿದ್ಧ ಸಂಸ್ಥೆ ಉಡುಪಿ ಕೋಪರೇಟಿವ್ ಟೌನ್ ಬ್ಯಾಂಕ್ ನ ವಿವಿಧ ಶಾಖೆಗಳ ಸಿಬ್ಬಂದಿ ವರ್ಗದವರಿಗೆ ಉಡುಪಿಯ ಮುಖ್ಯ ಕಚೇರಿಯಲ್ಲಿ ಮಂಗಳವಾರ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಹೊಸ ಆಯಾಮಗಳಾದ ಕೆ ವೈ ಸಿ, ಆಂಟಿ ಮನಿ ಲಾಂಡೆರಿಂಗ್, ಕಸ್ಟಮರ್ ರಿಲೇಶನ್ಸ್ ವಿಷಯಗಳ ಬಗ್ಗೆ ನುರಿತ ತಜ್ಞರಿಂದ ಮಾಹಿತಿ […]