ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ: ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣಗುಡ್ಡೆ ಶುಕ್ರವಾರದ ಅಲಂಕಾರದಲ್ಲಿ ದುರ್ಗಾ ಆದಿಶಕ್ತಿ ದೇವಿ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮಿ ಅಲಂಕಾರ ನಾಗನ ಸನ್ನಿಧಿಯಲ್ಲಿ ನಡೆದ ಆಶ್ಲೇಷ ಬಲಿ ಶ್ರೀ ಮಠಾಧೀಶರ ಪರ್ಯಾಯದಲ್ಲಿ ಸಮರ್ಪಿಸುವ ಕೋಟಿ ಗೀತಾ ಲೇಖನ ಯಜ್ಞಕ್ಕೆ ಚಾಲನೆ ನೀಡಲಾಯಿತು. ಆಟಿಡೊಂಜಿ ದಿನದ ಖಾದ್ಯಗಳು
ಮಣಿಪಾಲ: ಶ್ರೀ ಶಾರದಾ ಟೀಚರ್ ಟೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ವಿಶೇಷ ಕಲಾ ತರಬೇತಿ ಕಾರ್ಯಕ್ರಮ
ಮಣಿಪಾಲ: ಶ್ರೀ ಶಾರದಾ ಟೀಚರ್ ಟೈನಿಂಗ್ ಇನ್ಸ್ಟಿಟ್ಯೂಟ್ ನ ಶಿಕ್ಷಕಿಯರಿಗೆ ಮಕ್ಕಳಲ್ಲಿನ ಕಲ್ಪನಾಲೋಕವನ್ನು ವ್ಯಕ್ತಪಡಿಸುವ ಪರಿ ಮತ್ತು ಕಲಾ ಮಹತ್ವತೆಯ ಬಗ್ಗೆ ವಿಶೇಷ ಕಲಾ ತರಬೇತಿಯನ್ನು ನೀಡಲಾಯಿತು. ಮಣಿಪಾಲದ ತ್ರಿವರ್ಣ ಕಲಾಕೇಂದ್ರದ ಮುಖ್ಯಸ್ಥ, ಕಲಾವಿದ ಹರೀಶ್ ಸಾಗರ್ ರೇಖೆ, ಆಕಾರ, ಬಣ್ಣ, ಸಮತೋಲನ, ಸಂಯೋಜನೆಗಳಿಂದ ಕಲ್ಪನೆಯ ಚಿತ್ರವು ಸಾಕಾರಗೊಳಿಸುವಲ್ಲಿ ಕಲಾ ಶಿಕ್ಷಣ ಮುಖ್ಯವಾಹಿನಿಯಾಗಿದ್ದು, ಪೂರ್ವ ಪ್ರಾಥಮಿಕ ಮಕ್ಕಳಲ್ಲಿನ ಕಲಾ ಪ್ರಜ್ಞೆಯನ್ನು ಹೇಗೆ ಅವಲೋಕಿಸಬೇಕೆಂದು ತಿಳಿಯ ಪಡಿಸಿದರು. ಸಂಸ್ಥೆಯ ಸಂಯೋಜಕಿ ಸುನೀತಾ ಅವಕಾಶ ಕಲ್ಪಿಸಿಕೊಟ್ಟರು.
ಬೇಟೆಗೆ ಹೊರಟ ಶ್ರೀನಿವಾಸ….. ಶ್ರೀಕೃಷ್ಣ ಮಠದಲ್ಲಿ ಕೃಷ್ಣನಿಗೆ ವಿಶೇಷಾಲಂಕಾರ….
ಉಡುಪಿ: ಶ್ರಾವಣ ಶನಿವಾರದ ಪ್ರಯುಕ್ತ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣದೇವರಿಗೆ ಕಾಣಿಯೂರು ಮಠಾಧೀಶರು “ಬೇಟೆಗೆ ಹೊರಟ ಶ್ರೀನಿವಾಸ” ಅಲಂಕಾರ ಮಾಡಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.
ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲಾ ಕಾರ್ಮಿಕರ ನೋಂದಣಿ ಕಾರ್ಯಕ್ರಮ
ಉಡುಪಿ: ಕಾರ್ಮಿಕ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಕಿರು ಸಾಲ ಸೌಲಭ್ಯ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ, ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಹಾಗೂ ಇ-ಶ್ರಮ್ ಯೋಜನೆಯ ನೋಂದಣಿಯು ಆ.7 ರಂದು ಬಡಗುಬೆಟ್ಟು, ಚಿಟ್ಪಾಡಿ, ಕಸ್ತೂರ್ಬಾ ನಗರ ಮತ್ತು ಇಂದಿರಾನಗರ ವಾರ್ಡ್ನ ಕಾರ್ಮಿಕರಿಗೆ ಕುಕ್ಕಿಕಟ್ಟೆ ನಾರಾಯಣ ಗುರು ಸಭಾಭವನದಲ್ಲಿ, ಆ. 9 ರಂದು ಪೆರಂಪಳ್ಳಿ, ಗುಂಡಿಬೈಲು, ಕರಂಬಳ್ಳಿ ಹಾಗೂ ಕಡಿಯಾಳಿ ವಾರ್ಡ್ನ ಕಾರ್ಮಿಕರಿಗೆ ದೊಡ್ಡಣಗುಡ್ಡೆ […]
ಸರ್ಕಾರಿ ಧೋರಣೆ ಬಿಟ್ಟು ಕೆಲಸ ಮಾಡಿ ಅಥವಾ ಗಂಟುಮೂಟೆ ಕಟ್ಟಿ: ಬಿಎಸ್‌ಎನ್‌ಎಲ್ ಉದ್ಯೋಗಿಗಳಿಗೆ ಸಚಿವ ವೈಷ್ಣವ್ ಖಡಕ್ ಎಚ್ಚರಿಕೆ
ನವದೆಹಲಿ: ಸಂಕಷ್ಟದಲ್ಲಿರುವ ಟೆಲಿಕಾಂ ಪಿಎಸ್‌ಯುವಾದ ಬಿಎಸ್‌ಎನ್‌ಎಲ್‌ನ ಉದ್ಯೋಗಿಗಳಿಗೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಉದ್ಯೋಗಿಗಳು ತಮ್ಮ ‘ಸರ್ಕಾರಿ’ ಧೋರಣೆಯನ್ನು ತ್ಯಜಿಸುವಂತೆ ಹೇಳಿದ ಅವರು, ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸದವರಿಗೆ ಕಡ್ಡಾಯ ನಿವೃತ್ತಿ ನೀಡಲಾಗುತ್ತದೆ ಮತ್ತು ಗಂಟು ಮೂಟೆ ಕಟ್ಟಿ ಮನೆಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ. ಎಂಟಿಎನ್‌ಎಲ್‌ಗೆ ‘ಭವಿಷ್ಯವಿಲ್ಲ’ ಹಾಗಾಗಿ ನಾವು ಅಲ್ಲಿ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಎಂಟಿಎನ್‌ಎಲ್ ನ ನಿರ್ಬಂಧಗಳು ಮತ್ತು ಅದು ಯಾವ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿ ವಿಭಿನ್ನ ಕಸರತ್ತು […]